News Kannada
Monday, December 05 2022

ಕರಾವಳಿ

ಪ್ರಸಿದ್ಧ ಉಳವಿ ಜಾತ್ರೆಯ ವೇಳೆ ಭಿನ್ನಮತ ಸ್ಫೋಟ

Photo Credit :

ಪ್ರಸಿದ್ಧ ಉಳವಿ ಜಾತ್ರೆಯ ವೇಳೆ ಭಿನ್ನಮತ ಸ್ಫೋಟ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಉಳವಿ ಚನ್ನಬಸವೇಶ್ವರ ರಥೋತ್ಸವದ ವೇಳೆ ಭಿನ್ನಮತ ಸ್ಫೋಟಗೊಂಡಿದೆ. ಈ ಉಳವಿಯು ವೀರಶೈವರ ಪ್ರಸಿದ್ಧ ಶ್ರೀಕ್ಷೇತ್ರವಾಗಿದ್ದು ರಾಜ್ಯದಲ್ಲಿ ಪ್ರಸಿದ್ದವಾದ ಜಾತ್ರೆಯಾಗಿದೆ . ಇಲ್ಲಿ ವರ್ಷಕ್ಕೊಮ್ಮೆ ಚೆನ್ನಬಸವೇಶ್ವರ ದೇವರ ಜಾತ್ರೆಗೆ ದೇಶ- ವಿದೇಶಗಳಿಂದ ಭಕ್ತರು ಬಂದು, ದೇವರ ದರ್ಶನ ಪಡೆದು ಹರಕೆ ಅರ್ಪಿಸುತ್ತಾರೆ.

ಉಳವಿಯ ಶ್ರೀಚೆನ್ನಬಸವೇಶ್ವರ ಕ್ಷೇತ್ರ ಮತ್ತು ಚಿತ್ರದುರ್ಗ ಶ್ರೀಮುರುಘಾ ಮಠದ ನಡುವೆ 12ನೇ ಶತಮಾನದಿಂದಲೂ ಸಾಂಸ್ಕೃತಿಕ ಸಂಬಂಧ ಬೆಸೆದು ಬಂದ ಪರಂಪರೆಯಾಗಿದ್ದು, ಲಿಂಗೈಕ್ಯ ಜಗದ್ಗುರು ಶ್ರೀಜಯದೇವ ಜಗದ್ಗುರುಗಳ ಕಾಲದಿಂದ ಇಲ್ಲಿ ರಥೋತ್ಸವ ಸಂದರ್ಭಕ್ಕೆ ಖುದ್ದಾಗಿ ಮುರುಘಾಶ್ರೀಗಳು ಚಾಲನೆ ನೀಡುವ ಸಂಪ್ರದಾಯವಿತ್ತು. ಇತ್ತೀಚೆಗೆ ಕೆಲವು ವರ್ಷಗಳಿಂದ ಈ ಸಂಪ್ರದಾಯ ನಿಂತುಹೋಗಿದ್ದು, ಮನಸ್ತಾಪಕ್ಕೆ ಎಡೆಮಾಡಿಕೊಟ್ಟಿತ್ತು.

ಅದರಂತೆ ರಥೋತ್ಸವದ ವೇಳೆ ಆಗಮಿಸಿದ ಶಿವಮೂರ್ತಿ ಮುರಘರಾಜೇಂದ್ರ ಸ್ವಾಮಿಗಳು ರಥವನ್ನ ಏರುತ್ತೇನೆಂದು ಪಟ್ಟು ಹಿಡಿದಿದ್ದರು. ಇದಕ್ಕೆ ದೇವಸ್ಥಾನದ ಟ್ರಸ್ಟಿಗಳು ವಿರೋಧ ವ್ಯಕ್ತಪಡಿಸಿದ್ದು, ಕೆಲ ಕಾಲ ಮಾತಿನ ಚಕಮಕಿ ತೀವ್ರಗೊಂಡಿತ್ತು.

ರಥೋತ್ಸವಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಎಂಬಿ ಪಾಟೀಲ್ ಹಾಗೂ ರುದ್ರಪ್ಪ ಲಮಾಣಿ ಸ್ವಾಮಿಗಳನ್ನು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ನಂತರ ದೇವಸ್ಥಾನದ ಆವರಣದಲ್ಲಿಯೇ ಈ ಸಂಬಂಧ ಎರಡೂ ಕಡೆಯವರ ಸಭೆ ನಡೆಸಿದ ಸಚಿವರುಗಳು ಸ್ವಾಮಿಗಳ ಮನವೊಲಿಸಿದರು. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಸಂಪೂರ್ಣ ಭರವಸೆ ನೀಡಿದರು.

 

See also  ಅನಾಥರ ಸ್ಥಿತಿ ಕಂಡು ಮಾನವಿಯತೆ ಮೆರೆದ ಮಾಧವ ನಾಯಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು