News Kannada
Friday, December 02 2022

ಕರಾವಳಿ

ಶ್ರೀ ಬ್ರಹ್ಮಸ್ಥಾನ ಕ್ಷೇತ್ರ ದಶಮಾನದ ಸಂಭ್ರಮಕ್ಕೆ ಮಾತಾ ಅಮೃತಾನಂದಮಯಿ ಆಗಮನ

Photo Credit :

ಶ್ರೀ ಬ್ರಹ್ಮಸ್ಥಾನ ಕ್ಷೇತ್ರ ದಶಮಾನದ ಸಂಭ್ರಮಕ್ಕೆ ಮಾತಾ ಅಮೃತಾನಂದಮಯಿ ಆಗಮನ

ಮಂಗಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಪ್ರಾಣ ಪ್ರತಿಷ್ಠೆಗೈದು ಸ್ಥಾಪಿಸಿದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದ ಹತ್ತನೇ ವರ್ಷಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಕೇರಳದ ಖ್ಯಾತ ಶಿಲ್ಪಿಗಳಿಂದ ಸುಂದರ ಶಿಲ್ಪಕಲಾಕೃತಿಗಳ ಕಾರ್ಯ ಪ್ರಗತಿಯಲ್ಲಿದೆ.

ಸ್ಥಾಪನೆಯ ಉದ್ದೇಶ
ಜೀವನದಲ್ಲಿ ಸಂಕಷ್ಟಗಳನ್ನು ಅನುಭವಿಸುತ್ತಿರುವ ಜನರನ್ನು ದುಃಖಗಳಿಂದ ದೂರಮಾಡಲು ಹಾಗೂ ದೇವಸ್ಥಾನಗಳ, ದೇವತಾರಾಧನೆಯ ಹಿಂದಿರುವ ಮೂಲ ತತ್ವಗಳು,ಅವುಗಳ ಮಹತ್ವಗಳ ಬಗ್ಗೆ ಅರಿವು ಮಾಡಿಕೊಡುತ್ತವೆ. ಇಲ್ಲಿಯ ಮೂರ್ತಿಗಳಿಗೆ ಅಮ್ಮನವರು ಸ್ವತಃ ಪ್ರಾಣ ಪ್ರತಿಷ್ಠೆಗೈದಿರುವರು.

ಬ್ರಹ್ಮಸ್ಥಾನದ ವಿಶೇಷತೆ
ಅಮ್ಮನವರು 1989ರಿಂದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರಗಳನ್ನು ಆರಂಭಿಸಿದರು. ಇದು ದೇವತಾರಾಧನೆಯಲ್ಲಿ ಹೊಸ ಯುಗವನ್ನೇ ಆರಭಿಸಿದೆ. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದ್ವಾರ ತೆರೆಯಲಾಗಿದ್ದು, ಒಂದೇ ಶಿಲೆಯಲ್ಲಿ ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ಶಿವ, ಪಾರ್ವತಿ ದೇವಿ, ಗಣೇಶ, ಸುಬ್ರಹ್ಮಣ್ಯ (ರಾಹು, ನಾಗ) ದೇವರ ಮೂರ್ತಿಯನ್ನು ಹೊಂದಿರುತ್ತದೆ. ಶಿವಕುಟುಂಬದ ಈ ದಿವ್ಯ ಕ್ಷೇತ್ರದಲ್ಲಿ ಶಿವಶಕ್ತಿ ಐಕ್ಯ ರೂಪದ ಆರಾಧನೆ ಅತ್ಯಂತ ಫಲಪ್ರದವೆನಿಸಿದೆ.

ಇಲ್ಲಿಯ ವಿಶೇಷ ಗ್ರಹದೋಷ ನಿವಾರಣಾ ಪೂಜೆಗಳು, ಹೋಮಗಳು ಭಕ್ತರ ಇಷ್ಟಾರ್ಥ ಸಿದ್ಧಿಗಳನ್ನು ನೆರವೇರಿಸಲು ಪರಿಣಾಮಕಾರಿ ಎನಿಸಲ್ಪಟ್ಟಿದೆ.ದೇಶ ವಿದೇಶಗಳ ಸಹಸ್ರಾರು ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅಮ್ಮನವರ ಮಂಗಳೂರು ಕಾರ್ಯಕ್ರಮದ ಸಂದರ್ಭದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಮಹಾಗಣಪತಿ ಹೋಮ,ಮಹಾ ಮತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ, ನವಗ್ರಹ ಹೋಮ, ಭಗವತಿ ಸೇವೆ/ದೇವಿ ಪೂಜೆ ಇತ್ಯಾದಿಗಳು ಜರುಗಲಿವೆ.

“ಉದಯಾಸ್ತಮಾನ” ಪೂಜೆ ಸಲ್ಲಿಸುವ ಎಲ್ಲಾ ಭಕ್ತರ ಹೆಸರಿನಲ್ಲಿ ಸಂಕಲ್ಪಮಾಡಿ ಅವರಿಗೆ ಆಯುರಾರೋಗ್ಯ ಹಾಗೂ ಸರ್ವೈಶ್ವರ್ಯ ಪ್ರಾಪ್ತಿಗಾಗಿ ಪ್ರಾರ್ಥಿಸಲಾಗುತ್ತದೆ.

ಅಲ್ಲದೆ ಅಮ್ಮನವರ ಅಮೃತ ಹಸ್ತದಿಂದ ಪ್ರಸಾದ ಪಡೆಯುವ ಸುವರ್ಣಾವಕಾಶವಿರುತ್ತದೆ. ಫೆಬ್ರವರಿ 20 ಮತ್ತು 21ರಂದು ಅಮ್ಮನವರು ಮಂಗಳೂರಿಗೆ ಆಗಮಿಸಿ ಶ್ರೀ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಭಕ್ತರನ್ನು ಅಪ್ಪಿ ಅನುಗ್ರಹಿಸಲಿರುವರು.

ಮಾತಾ ಅಮೃತಾನಂದಮಯಿ ಸೇವಾಸಮಿತಿಯ ಅಧಕ್ಷರಾದ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ನಿರ್ದೇಶನದಂತೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜನರು ಶ್ರೀ. ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲ ಕಲ್ಪಿಸಲಾಗುತ್ತಿದೆ. ವಿವರಗಳನ್ನು ಮಾತಾ ಅಮೃತಾನಂದಮಯಿ ಮಠದಲ್ಲಿ ಪಡೆಯಬಹುದಾಗಿದೆ.

See also  ಲೈಸನ್ಸ್ ಇಲ್ಲದೆ ಬೈಕ್ ಚಲಾಯಿಸಿದ ಸವಾರರ ಬೈಕ್ ಗಳ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು