News Kannada
Saturday, November 26 2022

ಕರಾವಳಿ

ಯೆನೆಪೋಯ ವಿ.ವಿ.ಯಿಂದ ವಿಶ್ವ ಕ್ಯಾನ್ಸರ್ ದಿನ ಆಚರಣೆ - 1 min read

Photo Credit :

ಯೆನೆಪೋಯ ವಿ.ವಿ.ಯಿಂದ ವಿಶ್ವ ಕ್ಯಾನ್ಸರ್ ದಿನ ಆಚರಣೆ

ಮಂಗಳೂರು: ಯೆನೆಪೋಯ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ,  ಸಮುದಾಯ ಡೆಂಟಿಸ್ಟ್ರಿ ಮತ್ತು ಕ್ಯಾನ್ಸರ್ ಜಾಗೃತಿ ಪ್ರಭಾವ ಕಾರ್ಯಕ್ರಮ ಘಟಕ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಅಂಗವಾಗಿ ಫೆ.4ರಿಂದ ಫೆ.6ರ ತನಕ ವಿಶ್ವ ಕ್ಯಾನ್ಸರ್ ದಿನಾಚರಣೆ ಆಚರಿಸಿದರು.

ಇದರ ಅಂಗವಾಗಿ ಬೀದಿನಾಟಕ, ಜಾಗೃತಿ ಚರ್ಚೆ, ಸ್ತನ ಗರ್ಭಕಂಠದ ಮತ್ತು ಮೌಖಿಕ ಕ್ಯಾನ್ಸರ್ ಗಳ ಆರಂಭಿಕ ಪತ್ತೆ ಹಚ್ಚುವಿಕೆ ಮುಂತಾದವುಗಳು ನಡೆದವು. ಪಣಂಬೂರು ಕಡಲತೀರದಲ್ಲಿ ನಡೆದ ಕ್ಯಾನ್ಸರ್ ತಡೆಗಟ್ಟುವಿಕೆ ನಡಿಗೆಯಲ್ಲಿ ಯೆನೆಪೋಯ ವಿಶ್ವವಿದ್ಯಾಲಯ ವೈದ್ಯಕೀಯ ಮತ್ತು ದಂತ ಕಾಲೇಜು, ಸುತ್ತಮುತ್ತಲಿನ 1000 ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಯೆನೆಪೋಯ ವಿಶ್ವವಿದ್ಯಾನಿಲಯ ಉಪಕುಲಪತಿ ಡಾ.ಎಮ್.ವಿಜಯಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಡಾ.ಶ್ರೀಕುಮಾರ್ ಮೆನನ್ ಕುಲಸಚಿವರು ಯೆನೆಪೋಯ ವಿಶ್ವವಿದ್ಯಾನಿಲಯ ಮತ್ತು ಡಾ. ಅಭಯ್ ನಿಗರ್ಡೆ ಪ್ರೊಫೆಸರ್ ಮತ್ತು ಕಾರ್ಯಕ್ರಮಕ್ಕೆ ಅತಿಥಿಗಳಾಗಿದ್ದರು.

ಡಾ. ಗುರುಪ್ರಸಾದ್, ಡಾ. ಅಶ್ವಿನಿ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಡಾ. ಇಮ್ರಾನ್ ಪಾಶ ಸ್ತನ ಕ್ಯಾನ್ಸರ್ ಮತ್ತು ಮೌಖಿಕ ಕ್ಯಾನ್ಸರ್ ಗಳ ಆರಂಭಿಕ ಪತ್ತೆ ಹಚ್ಚುವಿಕೆಯ ಬಗ್ಗೆ ಮಾತನಾಡಿದ್ದಾರೆ.

See also  ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಕಳವು ಪ್ರಕರಣದ ಆರೋಪಿಯ ಮತ್ತೆ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು