News Kannada
Friday, December 02 2022

ಕರಾವಳಿ

ಪಿಎಫ್ಐ ವತಿಯಿಂದ ಸುಳ್ಯದಲ್ಲಿ ಬೃಹತ್ ಯುನಿಟಿ ಮಾರ್ಚ್

Photo Credit :

ಪಿಎಫ್ಐ ವತಿಯಿಂದ ಸುಳ್ಯದಲ್ಲಿ ಬೃಹತ್ ಯುನಿಟಿ ಮಾರ್ಚ್

ಸುಳ್ಯ: ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವಗಳ ಉಳಿವಿಗೆ ಮತ್ತು ಧಮನಿತರ ಧ್ವನಿಯಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಾಚರಿಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ.ಶರೀಫ್ ಹೇಳಿದ್ದಾರೆ.

ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಸುಳ್ಯದಲ್ಲಿ ನಡೆದ ಯುನಿಟಿ ಮಾರ್ಚ್ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಶಾಹಿಗಳ ದಮನಕಾರಿ ನೀತಿ ಮತ್ತು ತಾರತಮ್ಯ ನೀತಿಯಿಂದಾಗಿ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಹಿಂದುಳಿದ ವರ್ಗದವರು, ಮುಸ್ಲೀಮರು ಮತ್ತು ದಲಿತರು ಇಂದಿಗೂ ತುಳಿತಕ್ಕೊಳಗಾಗಿದ್ದಾರೆ. ಇವರ ಏಳಿಗಾಗಿ ಸಮಾನ ಹಕ್ಕಿಗಾಗಿ ಆ ಮೂಲಕ ನವ ಭಾರತ ನಿರ್ಮಾಣಕ್ಕಾಗಿ ಪಿಎಫ್ಐ ಚಳುವಳಿಯನ್ನು ನಡೆಸುತ್ತಾ ಬಂದಿದೆ. ಸಮಾಜದಲ್ಲಿ ಶೋಷಣೆಗೊಳಗಾಗಿರುವ ಜನರಲ್ಲಿ ಆತ್ಮ ವಿಶ್ವಾಸ ಮತ್ತು ಭದ್ರತೆಯನ್ನು ತುಂಬುವುದೇ ನಮ್ಮ ಧ್ಯೇಯ. ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಅದರ ವಿರುದ್ಧ ಜನಪರವಾದ ಹೋರಾಟ ನಡೆಸುವ ಕಾರಣ ಪಿಎಫ್ಐ ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಅವರು ಹೇಳಿದರು.

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕೇರಳ ರಾಜ್ಯ ಕಾರ್ಯದರ್ಶಿ ಶಫೀಕ್ ಅಲ್ ಖಾಸಿಮಿ ಮಾತನಾಡಿ, ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವನ್ನಾಗಿ ಭಾರತವನ್ನು ಕಟ್ಟುವುದೇ ಪಿಎಫ್ಐಯ ಉದ್ದೇಶ. ಸರ್ಕಾರಗಳ ಯಾವುದೇ ದಮನಕಾರಿ ನೀತಿ ವಿರುದ್ಧ ಎದೆಯೊಡ್ಡಿ ಹೋರಾಟ ನಡೆಸುವ ಕಾರಣ ಪಿಎಫ್ಐ ಅಂದ ಕೂಡಲೇ ಆಡಳಿತ ಶಾಹಿಗಳೀಗೆ ಭಯ ಉಂಟಾಗುತ್ತಿದೆ ಎಂದು ಹೇಳಿದರು.

ಪಿಎಫ್ಐ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮೈಸೂರು, ಅಬ್ದುಲ್ ಲತೀಫ್ ಪುತ್ತೂರು, ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ಕೋಶಾಧಿಕಾರಿ ಫಾರೂಖ್ ರಹ್ಮಾನ್ ಮೈಸೂರು, ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ನಸೀಮಾ ಫಾತಿಮಾ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ದಲಿತ ಮುಖಂಡ ಆನಂದ ಮಿತ್ತಬೈಲು, ಸುಳ್ಯ ನ.ಪಂ.ಸದಸ್ಯ ಕೆ.ಎಸ್.ಉಮ್ಮರ್, ಪಿಎಫ್ಐ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ಪುತ್ತೂರು, ಅನ್ವರ್ ಸಾದತ್, ರಾಜ್ಯ ಕಾಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ, ಪ್ರಮುಖರಾದ ಮಹಮ್ಮದ್ ವಳವೂರು, ಅತಾವುಲ್ಲಾ ಜೋಕಟ್ಟೆ, ಮಮ್ಮಾಲಿ ಹಾಜಿ, ರಫೀಕ್ ದಾರಿಮಿ, ಅಬ್ದುಲ್ ಕಲಾಂ ಸುಳ್ಯ, ಶಿಹಾಬ್, ರಿಯಾಸ್ ಫರಂಗಿಪೇಟೆ, ಮಹಮ್ಮದ್ ತಫ್ಸೀರ್, ಅಮೀನ್ ಮೋಸಿಂ, ಅಮೀನ್ ಸೇಠ್, ಅಫ್ಸರ್ ಕೊಡ್ಲಿಪೇಟೆ, ಜಾಫರ್ ಸಾಧಿಕ್ ಫೈಝಿ ಉಪಸ್ಥಿತರಿದ್ದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಅಧ್ಯಕ್ಷ ಅಬೂಬಕ್ಕರ್ ರಿಝ್ವಾನ್ ಸ್ವಾಗತಿಸಿ, ಸಂಶುದ್ದೀನ್ ವಂದಿಸಿದರು. ಅಶ್ರಫ್ ನಿರೂಪಿಸಿದರು.

See also  ಅಂತಾರಾಜ್ಯ ರಸ್ತೆಯ ಶೋಚನೀಯ ಸ್ಥಿತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು