News Kannada
Friday, December 02 2022

ಕರಾವಳಿ

ಸಂಪಾಜೆ ಗ್ರಾ,ಪಂ.ಅಧ್ಯಕ್ಷರಾಗಿ ಸುಂದರಿ ಮುಂಡಡ್ಕ ಆಯ್ಕೆ

Photo Credit :

ಸಂಪಾಜೆ ಗ್ರಾ,ಪಂ.ಅಧ್ಯಕ್ಷರಾಗಿ ಸುಂದರಿ ಮುಂಡಡ್ಕ ಆಯ್ಕೆ

ಸುಳ್ಯ: ಮುಂದಿನ ಎರಡೂವರೆ ವರ್ಷದ ಅವಧಿಗೆ ಸಂಪಾಜೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುಂದರಿ ಮುಂಡಡ್ಕ ಮತ್ತು ಉಪಾಧ್ಯಕ್ಷರಾಗಿ ಮೋಹಿನಿ ಪೆಲ್ತಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತರ ಆಡಳಿತವಿರುವ ಸಂಪಾಜೆಯಲ್ಲಿ ಪಕ್ಷದಲ್ಲಿ ಉಂಟಾದ ಮಾತುಕತೆಯ ಹಿನ್ನೆಲೆಯಲ್ಲಿ ಎರಡೂವರೆ ವರ್ಷದ ಬಳಿಕ ಅಧ್ಯಕ್ಷರಾಗಿದ್ದ ಯಶೋಧಾ ಶ್ರೀಧರ್ ಮತ್ತು ಉಪಾಧ್ಯಕ್ಷೆ ಆಶಾ ವಿನಯಕುಮಾರ್ ರಾಜಿನಾಮೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಸುಂದರಿ ಮುಂಡಡ್ಕ ಅವರನ್ನು ಯಶೋಧಾ ಶ್ರೀಧರ್ ಮತ್ತು ಮೋಹಿನಿ ಪೆಲ್ತಡ್ಕ ಅವರನ್ನು ಆಶಾ ವಿನಯಕುಮಾರ್ ಸೂಚಿಸಿದರು. ತಹಶೀಲ್ದಾರ್ ಕುಞಮ್ಮ ಚುನಾವಣಾಧಿಕಾರಿಯಾಗಿದ್ದರು. ಗ್ರಾ.ಪಂ.ಸದಸ್ಯರಾದ ಸೋಮಶೇಖರ ಕೊಂಗಾಜೆ, ಜಿ.ಕೆ.ಹಮೀದ್, ಮಹಮ್ಮದ್ ಕುಞಿ ಗೂನಡ್ಕ, ಅಬುಸಾಲಿ, ಟಿ.ಐ.ಲೂಕಾಸ್, ಕುಸುಮಾ, ಷಣ್ಮುಗಂ, ನಾಗೇಶ್.ಪಿ.ಆರ್, ಲೆತಿಶ್ಯಾ ಡಿಸೋಜ, ಸುಂದರ, ಮಾಜಿ ಅಧ್ಯಕ್ಷೆ ಬಿ.ಎಸ್. ಗ್ರಾ.ಪಂ.ಯಮುನಾ ಅಭಿವೃದ್ಧಿ ಅಧಿಕಾರಿ ಅನಿತಾ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

See also  ಸಮುದ್ರಪಾಲಾಗುತ್ತಿದ್ದ ಬಾಲಕನನ್ನು 2ಗಂಟೆ ಈಜಾಡಿ ರಕ್ಷಿಸಿದ ಯುವಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು