News Kannada
Monday, September 26 2022

ಕರಾವಳಿ

ಅಡಕೆ ನಿಷೇಧ ಪ್ರಸ್ತಾಪ ಕೈ ಬಿಟ್ಟು ವರದಿ ಹಿಂಪಡೆಯಲಿ: ಎಪಿಎಂಸಿ ಸಭೆಯಲ್ಲಿ ನಿರ್ಣಯ - 1 min read

Photo Credit :

ಅಡಕೆ ನಿಷೇಧ ಪ್ರಸ್ತಾಪ ಕೈ ಬಿಟ್ಟು ವರದಿ ಹಿಂಪಡೆಯಲಿ: ಎಪಿಎಂಸಿ ಸಭೆಯಲ್ಲಿ ನಿರ್ಣಯ

ಸುಳ್ಯ: ಅಡಕೆ ಆರೋಗ್ಯಕ್ಕೆ ಹಾನಿಕಾರಕ ಮತ್ತು ಅಡಕೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ ಎಂಬ ವರದಿಯನ್ನು ಕೂಡಲೇ ಹಿಂಪಡೆದು ಅಡಕೆ ನಿಷೆಧ ಪ್ರಸ್ತಾಪವನ್ನು ಕೈ ಬಿಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಭೆಯಲ್ಲಿ ಕೈಗೊಳ್ಳಲಾಯಿತು.

ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಪಿಎಂಸಿ ಸದಸ್ಯ ಕೆ.ಎಸ್.ಗಣೇಶ್ ಇಡ್ಯಡ್ಕ, ಅಡಕೆ ನಿಷೇಧ ಪ್ರಸ್ತಾಪದಿಂದಾಗಿ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅಡಕೆ ದಾಸ್ತಾನು ಮಾಡುವ ಸಂದರ್ಭದಲ್ಲಿ ಅಡಕೆಗೆ ಹಾಕುವ ಕೆಲವೊಂದು ರಾಸಾಯನಿಕದಿಂದಾಗಿ ಅಡಕೆಯಲ್ಲಿ ವಿಷಾಂಶ ಸೇರಿರುವ ಸಾಧ್ಯತೆ ಇದೆ. ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕಾಗಿದೆ ಎಂದು ಹೇಳಿದರು.

ಈ ಕುರಿತು ಚರ್ಚೆ ನಡೆದು ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವರದಿಯನ್ನು ಹಿಂಪಡೆದು ಅಡಕೆ ನಿಷೇಧ ಪ್ರಸ್ತಾಪವನ್ನು ಕೈ ಬಿಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಣಯಿಸಲಾಯಿತು. ಅಲ್ಲದೆ ಈ ಕುರಿತು ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳಿಗೆ ಮನವಿಯನ್ನೂ ನೀಡಲು ನಿರ್ಣಯಿಸಲಾಯಿತು.

ವಿದ್ಯುತ್ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಿತು. ಗ್ರಾಮೀಣ ಭಾಗದಲ್ಲಿ ಎಂಟು ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಇದ್ದರೂ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಕೃಷಿಕರಿಗೆ ನೀರಾವರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ವಿದ್ಯುತ್ ಸಮಸ್ಯೆ ಸರಿಪಡಿಸಲು ಮೆಸ್ಕಾಂನ್ನು ಒತ್ತಾಯಿಸಲು ನಿರ್ಣಯಿಸಲಾಯಿತು. 2015-16ನೇ ಸಾಲಿನ ಎಪಿಎಂಸಿ ಅನುದಾನದಲ್ಲಿ ರಸ್ತೆ ಕಾಮಗಾರಿಗಳ ಟೆಂಡರ್ ನಡೆದರೂ ಕಾಮಗಾರಿ ಅನುಷ್ಠಾನಕ್ಕೆ ಇನ್ನೂ ಅನುಮತಿ ದೊರೆತಿಲ್ಲ ಎಂದು ಸದಸ್ಯ ಸಂತೋಷ್ ಜಾಕೆ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಕೂಡಲೇ ಅನುಮತಿ ನೀಡಲು ಒತ್ತಾಯಿಸಲು ನಿರ್ಣಯಿಸಲಾಯಿತು.

ವಿವಿಧ ಗ್ರಾಮಗಳಲ್ಲಿ ಕಾಮಗಾರಿ ನಡೆಸಲು 45.80 ಲಕ್ಷ ರೂ ಮಂಜೂರಾಗಿದ್ದರೂ ಅನುಷ್ಠಾನ ಆಗಿಲ್ಲ ಎಂದು ಸದಸ್ಯರು ದೂರಿದರು. ಬೆಳ್ಳಾರೆ ಎಪಿಎಂಸಿ ಕಟ್ಟಡ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಸದಸ್ಯ ಅನಿಲ್ ರೈ ಹೇಳಿದರು. ಪರಿಶೀಲನೆ ನಡೆಸಿದ ಬಳಿಕವಷ್ಟೇ ಈ ಕಾಮಗಾರಿಗೆ ಬಿಲ್ ಪಾವತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಉಪಾಧ್ಯಕ್ಷೆ ಸುಕನ್ಯ ಕೆ.ಭಟ್, ಸದಸ್ಯರಾದ ನವೀನ್ ಕುಮಾರ್ ಕೆ.ಎಸ್, ಮೋನಪ್ಪ ಗೌಡ, ಎಂ.ಬಾಲಕೃಷ್ಣ, ಜಯಲಕ್ಷ್ಮಿ, ವಿನಯಕುಮಾರ್ ಮುಳುಗಾಡು., ಸುಂದರ, ಜಯಪ್ರಕಾಶ್ ಕುಂಚಡ್ಕ, ದೀಪಕ್ ಕುತ್ತಮೊಟ್ಟೆ, ಎಸ್.ಆದಂ ಕುಞಿ, ಎನ್.ಪುರುಷೋತ್ತಮ, ಶಶಿಕಲಾ ಡಿ.ಪಿ, ಎಪಿಎಂಸಿ ಸಹಾಯಕ ನಿರ್ದೇಶಕಿ ಭಾರತಿ, ಕಾರ್ಯದರ್ಶಿ ವಿಮಲ ಚರ್ಚೆಯಲ್ಲಿ ಭಾಗವಹಿಸಿದ್ದರು.

See also  ಎರಡು ವಾರ ಕಳೆದರೂ ಪತ್ತೆಯಾಗದ ಮೀನುಗಾರಿಕಾ ಬೋಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು