News Kannada
Sunday, October 02 2022

ಕರಾವಳಿ

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಶಿಕ್ಷಕರ ಪ್ರತಿಭಟನೆ - 1 min read

Photo Credit :

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಶಿಕ್ಷಕರ ಪ್ರತಿಭಟನೆ

ಬೆಳ್ತಂಗಡಿ: ಬಡ್ತಿ ಹೊಂದುತ್ತಿರುವ ಪ್ರೌಢಶಾಲಾ ಶಿಕ್ಷಕರ ಕಾರ್ಯನಿರ್ವಹಣಾ ವರದಿಗೆ ಸಹಿ ಮಾಡಲು ನಿರಾಕರಿಸಿರುವ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ದ ತಾಲೂಕಿನ ಶಿಕ್ಷಕರು ಕಚೇರಿ ಮುಂದೆ ದಿಢೀರ್ ಪ್ರತಿಭಟನೆಗೆ ಮುಂದಾದ ವಿದ್ಯಮಾನ ಬುಧವಾರ ನಡೆದಿದೆ.

ಕಾರಣ ಹೀಗಿದೆ: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರೌಢಶಾಲಾ ಸಹ ಶಿಕ್ಷಕರಿಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಲು ಸುಮಾರು 300 ಶಿಕ್ಷಕರಿಂದ ಸಂಬಂಧಿಸಿದ ದಾಖಲೆಗಳೊಂದಿಗೆ 5 ವರ್ಷಗಳ ಕಾರ್ಯನಿರ್ವಹಣಾ ವರದಿಯನ್ನು ನೀಡಲು ಸೂಚಿಸಿದೆ. ಅದರಂತೆ ಬೆಳ್ತಂಗಡಿ ತಾಲೂಕಿನ 4 ಶಿಕ್ಷಕರು ಬಡ್ತಿಗೆ ಅರ್ಹರಾಗಿದ್ದಾರೆ. ಅವರಲ್ಲಿ ಪಡಂಗಡಿ ಪ್ರೌಢಶಾಲೆಯ ಸಹಶಿಕ್ಷಕಿ ಪೂರ್ಣಿಮಾ ಹಾಗೂ ಪುತ್ತಿಲ ಪ್ರೌಢಶಾಲೆಯ ಸಹಶಿಕ್ಷಕ ಹಮ್ಮಣ್ಣ ನಾಯ್ಕ ಅವರು 2013 ರಿಂದ 2016ರ ಅವಧಿಯ ಕಾರ್ಯನಿರ್ವಹಣಾ ವರದಿಗೆ ಸಹಿ ಹಾಕಿಸಿಕೊಳ್ಳಲು ಕ್ಷೇತ್ರಶಿಕ್ಷಣಾಧಿಕಾರಿಗಳಲ್ಲಿ ಬಂದಿದ್ದರು. ಆದರೆ ಈಗಿನ ಕ್ಷೇತ್ರಶಿಕ್ಷಣಾಧಿಕಾರಿಗಳು ತಾನು ಸಹಿ ಹಾಕುವುದಿಲ್ಲ. ಆ ಅವಧಿಯಲ್ಲಿದ್ದ ಕ್ಷೇತ್ರಶಿಕ್ಷಣಾಧಿಕಾರಿಗಳೇ ಸಹಿ ಹಾಕಬೇಕೆಂದು ಪಟ್ಟು ಹಿಡಿದಿರುವುದು ಶಿಕ್ಷಕರನ್ನು ಕೆರಳಿಸಿದೆ.

ಇತ್ತ ಪ್ರೌಢಶಿಕ್ಷಣ ನಿರ್ದೇಶಕರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳೇ ಸಹಿ ಮಾಡಬೇಕು ಮತ್ತು ಶಿಕ್ಷಕರಿಗೆ ತೊಂದರೆ ನೀಡಬಾರದು ಎಂದು ವಿನಂತಿಸಿದ್ದರೂ ಇಲ್ಲಿನ ಅಧಿಕಾರಿ ಮಾತ್ರ ಜಪ್ಪಯ್ಯ ಅಂದರು ಸಹಿ ಹಾಕದೇ ಕುಳಿತಿದ್ದಾರೆ. ಬಡ್ತಿ ಹೊಂದಲಿರುವ ಶಿಕ್ಷಕರಿಬ್ಬರಿಗೆ ಮಾ. 2 ರೊಳಗೆ ವರದಿಗೆ ಸಹಿ ಹಾಕಿಸಿ ಬೆಂಗಳೂರಿಗೆ ತಲುಪಿಸಬೇಕಾದ ಅನಿವಾರ್ಯತೆ ಇದೆ.

ಬಡ್ತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹಿ ಹಾಕಿಯಾರೂ ಎಂಬ ನಿರೀಕ್ಷೆಯೊಂದಿಗೆ ಶಿಕ್ಷಕರು ಮಧ್ಯಾಹ್ನದವರೆಗೆ ಕಾದಿದ್ದರು. ಆದರೆ ಮಧ್ಯಾಹ್ನದ ಬಳಿಕ ಅಧಿಕಾರಿಯು ಕಚೇರಿಯಲ್ಲಿ ಇರಲಿಲ್ಲ. ಇವರ ವಿಚಿತ್ರ ಧೋರಣೆಯನ್ನು ಪ್ರತಿಭಟಿಸಿ ತಾಲೂಕಿನ ಸರಕಾರಿ ಪ್ರಾಥಮಿಕ, ಪ್ರೌಢಶಲಾ ಹಾಗು ಇನ್ನಿತರ ಸರಕಾರಿ ನೌಕರರು ಸಂಜೆ ಬಿಒ ಕಚೇರಿಯ ಮುಂದೆ ಧರಣಿ ಕೂತರು.  ಸಹಿ ಹಾಕದಿದ್ದಲ್ಲಿ ಕಾನೂನಾತ್ಮ ಹೋರಾಟ ನಡೆಸಲು ಶಿಕ್ಷಕರ ಸಂಘ ತೀರ್ಮಾನಿಸಿದೆ.

ಧರಣಿಯಲ್ಲಿ ರಾಜ್ಯ ಸರಕಾರಿ ನೌಕರರ ತಾಲೂಕಾಧ್ಯಕ್ಷ ಜಯಕೀರ್ತಿ ಜೈನ್, ಶಿಕ್ಷಕ ಹಾಗೂ ನೌಕರರ ಸಂಘಟನೆಯ ಮುಖಂಡರಾದ  ಧರಣೇಂದ್ರ ಕುಮಾರ್, ರಾಜಗುರು ಹೆಬ್ಬಾರ್, ಸಿದ್ದೇಶ್, ರಮೇಶ್ ಮಯ್ಯ, ನಿರಂಜನ್ ಜೈನ್, ಮಹಮ್ಮದ್ ರಿಯಾಜ್, ಆದಂ, ಮಂಜನಾಯ್ಕ, ನಾಗರಾಜ ಡಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

See also  ಜನರಿಗಾಗಿ ಉಜಿರೆಯಲ್ಲಿ 'ದಿ ವಾಲ್ ಆಫ್ ಗುಡ್ ವಿಲ್' ಘಟಕ ಸ್ಥಾಪನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು