News Kannada
Friday, October 07 2022

ಕರಾವಳಿ

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭಾರೀ ಬೆಂಕಿ - 1 min read

Photo Credit :

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭಾರೀ ಬೆಂಕಿ

ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯತ್ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಲಾಯಿಲ ಗ್ರಾಮದ ಕಾಶಿಬೆಟ್ಟು ಸನಿಹದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದೆ. ಪಟ್ಣಣದ ಎಲ್ಲಾ ನಮೂನೆಯ ತ್ಯಾಜ್ಯವನ್ನು ಇಲ್ಲಿ ತಂದು ಸುರಿಯಲಾಗುತ್ತಿದೆ. ಈ ಘಟಕಕ್ಕೆ ಇದೀಗ ಕಳೆದ ಹಲವು ದಿನಗಳಿಂದ ಅಗ್ನಿ ಸ್ಪರ್ಶವಾಗಿದೆ. ಇದರಿಂದ ದಟ್ಟ ಹೊಗೆ, ಗಾಢವಾದ ವಾಸನೆ ಸುತ್ತಲಿನ ಪರಿಸರದಲ್ಲಿ ಹರಡಿಕೊಂಡಿದ್ದು ದುರ್ವಾಸನೆ ಬೀರುತ್ತಿದೆ. ಪಟ್ಟಣ ಪಂಚಾಯತ್ ಆಡಳಿತಕ್ಕೆ ಇದು ಗೊತ್ತಿದ್ದರೂ ಸುಮ್ಮನಿರುವುದು ಜನರಲ್ಲಿ ಆಕ್ರೋಶ ತರಿಸಿದೆ.

ಇಷ್ಟೇ ಅಲ್ಲದೆ ಇಲ್ಲಿಯ ತ್ಯಾಜ್ಯದಿಂದಾಗಿ ಪರಿಸರದ ಎಲ್ಲಾ ಬಾವಿಗಳ ನೀರು ಕುಲುಷಿತವಾಗಿದೆ. ಎಷ್ಟೇ ಬಾರಿ ಇಲ್ಲಿನ ಜನರ ಅಳಲನ್ನು ಆಡಳಿತಕ್ಕೆ ಮುಟ್ಟಿಸಿದ್ದರೂ ಏನೂ ಪ್ರಯೋಜನವಿಲ್ಲವಾಗಿದೆ.

See also  ಸುಳ್ಯ-ಮಡಿಕೇರಿ ಸಂಪರ್ಕಿಸುವ ಪರ್ಯಾಯ ರಸ್ತೆಯ ದಿವ್ಯ ನಿರ್ಲಕ್ಷ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು