News Kannada
Monday, October 03 2022

ಕರಾವಳಿ

ಕಾರವಾರದ ಬೀಚ್ ಗಳಲ್ಲಿ ರಂಗಿನಾಟದ ಸಂಭ್ರಮದಲ್ಲಿ ಮಿಂದೆದ್ದ ಜನರು! - 1 min read

Photo Credit :

ಕಾರವಾರದ ಬೀಚ್ ಗಳಲ್ಲಿ ರಂಗಿನಾಟದ ಸಂಭ್ರಮದಲ್ಲಿ ಮಿಂದೆದ್ದ ಜನರು!

ಕಾರವಾರ: ಜಿಲ್ಲೆಯ ವಿವಿಧೆಡೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕರಾವಳಿಯಲ್ಲಿ ಜನರು ರಂಗಿನೋಕುಳಿಯಲ್ಲಿ ಆನಂದಿಸಿದರು.

ಹಿರಿಯರು-ಕಿರಿಯರು ಎಂದಿಲ್ಲದೆ ಎಲ್ಲರೂ ರಂಗುರಂಗಿನ ಬಣ್ಣಗಳಲ್ಲಿ ಮುಳುಗಿದರು. ಯುವಕರ ಗುಂಪು ಸೌಂಡ್ ಸಿಸ್ಟಮ್‌ನ್ನು ಸಿದ್ದಪಡಿಸಿ, ಕುಣಿದು ಕುಪ್ಪಳಿಸಿದರು. ಒಬ್ಬರಿಗೊಬ್ಬರು ಬಣ್ಣವನ್ನು ಹಚ್ಚುತ್ತಾ ಹೋಳಿ ಹಬ್ಬದ ಶುಭಾಶಯ ಕೋರಿದರು. ಯುವಕರು ನಗರದೆಲ್ಲೆಡೆ ಬೈಕ್‌ಗಳ ಮೇಲೆ ಸಂಚರಿಸುತ್ತ ಹಾಗೂ ಮನೆ ಮನೆಗೆ ತೆರಳಿ ಬಣ್ಣವನ್ನು ಹಚ್ಚುತ್ತಿರುವುದು ಕಂಡು ಬಂದಿತು.

ತುಂಬಿದ ಕಡಲ ತೀರ:ಇಡೀ ಕಾರವಾರದ ಜನತೆ ರವೀಂದ್ರನಾಥ ಠ್ಯಾಗೋರ್ ಕಡಲ ತೀರದತ್ತ ಮುಖ ಮಾಡಿದರು. ಹಲವರು ಕುಟುಂಬಗಳ ಸಹಿತ ಬೀಚ್‌ಗೆ ಆಗಮಿಸಿ ಸ್ನಾನ ಮಾಡಿದರು. ಯುವಜನರಂತೂ ಬಿಸಿಲಿನ ತಾಪ ತಡೆಯಲಾರದೇ, ಸಮುದ್ರದ ನೀರಿನೊಳಗೆ ಇಳಿದು ಸ್ನಾನಗೈದರು.

ವಿವಿಧ ವೇಷಗಳು: ಹೋಳಿ ಹಬ್ಬದ ನಿಮಿತ್ತ ಅನೇಕ ಜನರು ರಾಕ್ಷಸ, ಕರಡಿ, ಭೂತ, ಮಹಿಳೆಯ ವೇಷ ಹಾಗೂ ಇನ್ನಿತರ ವೇಷಗಳನ್ನು ಧರಿಸಿ, ಮನೆ ಮನೆಗೆ ತೆರಳಿ ರಂಜಿಸಿ ಹಣ ಕೇಳುತ್ತಿರುವುದು ದೃಶ್ಯ ಕಂಡು ಬಂದಿತು. ನಗರದ ಅಲ್ಲಲ್ಲಿ ಆಯಾ ಗ್ರಾಮಸ್ಥರು ಬೈಕ್, ಸೈಕಲ್‌ಗಳಲ್ಲಿ ಹೋಗುತ್ತಿರುವವರಿಗೆ ಬಣ್ಣದ ನೀರನ್ನು ಎರಚಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಕಾರವಾರದಲ್ಲಿ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೋಳಿ ಹಬ್ಬದ ಆಚರಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ರಸ್ತೆಗಳಲ್ಲಿ ನಿಂತು ದಾರಿಯಲ್ಲಿ ಹೋಗಿ ಬರುವವರನ್ನೆಲ್ಲಾ ಬಲೂನ್‌ನಲ್ಲಿ ತುಂಬಿದ ಬಣ್ಣದ ನೀರನ್ನು ಹೊಡೆಯುತ್ತಾ ಸಂಭ್ರಮಿಸಿದರು.

See also  ಕೃಷಿ ಬಳಕೆಯ ಡ್ರೋನ್ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಲೋಕಾರ್ಪಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು