News Kannada
Saturday, August 13 2022

ಕರಾವಳಿ

ದೇವಸ್ಥಾನ ಜೀರ್ಣೋದ್ಧಾರ ಸಂದರ್ಭ ಹಳೆ ನಾಣ್ಯಗಳು ಪತ್ತೆ - 1 min read

ದೇವಸ್ಥಾನ ಜೀರ್ಣೋದ್ಧಾರ ಸಂದರ್ಭ ಹಳೆ ನಾಣ್ಯಗಳು ಪತ್ತೆ

ಕಾಸರಗೋಡು: ದೇವಸ್ಥಾನ ಜೀರ್ಣೋದ್ದಾರದ ಸಂದರ್ಭದಲ್ಲಿ ಶತಮಾನದ ಹಳೆಯ ನಾಣ್ಯಗಳು ಲಭಿಸಿದ್ದು, ಅಚ್ಚರಿ ಹುಟ್ಟಿಸಿವೆ.

ತೃಕ್ಕರಿಪುರ ತಿರುವಂಬಾಡಿ ದೇವಸ್ಥಾನದ ಧ್ವಜಾಪ್ರತಿಷ್ಠಾದಂಗವಾಗಿ ನಮಸ್ಕಾರ ಮಂಟಪ ಪುನರ್ ನಿರ್ಮಾಣ ಸಂದರ್ಭದಲ್ಲಿ ಈ ನಾಣ್ಯಗಳು ಲಭಿಸಿದ್ದು, ಉತ್ತರ ಮಲಬಾರ್ ನಲ್ಲಿ ಶತಮಾನದ ಹಿಂದೆ ಪೋರ್ಚುಗಲ್, ನೆದರ್ ಲೆಂಡ್, ಮಲೇಷ್ಯಾ, ಬ್ರಿಟನ್, ಇಟಲಿ ಮೊದಲೆಡೆಗಳಲ್ಲಿ ಚಾಲ್ತಿಯಲ್ಲಿದ್ದ ವಿದೇಶಿ ವ್ಯಾಪಾರ ನಂಟನ್ನು ಸೂಚಿಸುವ ದಾಖಲೆಗಳು ಲಭಿಸಿವೆ.

ಮಾಹಿತಿ ತಿಳಿದ ಕಾಞಂಗಾಡ್ ನೆಹರೂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರು ಪರಿಶೀಲನೆ ನಡೆಸಿದ್ದಾರೆ.

ಮಲೇಷ್ಯಾದ ರಾಜಕುಮಾರ ಚಾರ್ಲ್ಸ್ ಬ್ರೇಕ್ 1870ರಲ್ಲಿ ಬಿಡುಗಡೆಗೊಳಿಸಿದ ತಾಮ್ರದ ನಾಣ್ಯ, ಇಟಲಿಯ ರಾಜಕುಮಾರ ವಿಟ್ಟೋರಿಯ ಇಮಾನ್ಯುವೆಲ್, ಪೋರ್ಚುಗಲ್ ನ ರಾಜಕುಮಾರ ಕಾರ್ಲೋಸ್ 1862ರಲ್ಲಿ ಬಿಡುಗಡೆಗೊಳಿಸಿದ ನಾಣ್ಯ, ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪೆನಿ 1834ರಲ್ಲಿ ಬಿಡುಗಡೆಗೊಳಿಸಿದ್ದ ನಾಣ್ಯಗಳು ಪತ್ತೆಯಾಗಿದೆ.

ಉತ್ತರ ಮಲಬಾರ್ ಕೇಂದ್ರೀಕರಿಸಿ ಈ ರಾಷ್ಟ್ರಗಳ ನಡುವೆ ವ್ಯಾಪಾರ ವಹಿವಾಟು ನಡೆದಿತ್ತು ಎಂಬುದನ್ನು ಈ ದಾಖಲೆಗಳು ಸಾಕ್ಷಿಯಾಗಿವೆ ಎನ್ನುತ್ತಾರೆ ತಜ್ಞರು.

See also  ಶೀಘ್ರವೇ ಬಂಟ್ವಾಳ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ಸಚಿವ ನಾರಾಯಣ ಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು