News Kannada
Wednesday, September 28 2022

ಕರಾವಳಿ

ಬಂಟ್ವಾಳದಲ್ಲಿ ಗಾಳಿಮಳೆಗೆ ಭಾರೀ ಹಾನಿ - 1 min read

Photo Credit :

ಬಂಟ್ವಾಳದಲ್ಲಿ ಗಾಳಿಮಳೆಗೆ ಭಾರೀ ಹಾನಿ

ಬಂಟ್ವಾಳ: ಬುಧವಾರ ರಾತ್ರಿ ಗಾಳಿ,ಮಳೆಗೆ ತಾಲೂಕಿನ ಹಲವೆಡೆ ಹಾನಿಗಳು ಉಂಟಾದ ಬಗ್ಗೆ ವರದಿಯಾಗಿದೆ.

ಬಿ.ಮೂಡ ಗ್ರಾಮದ ನಂದರಬೆಟ್ಟು ನಿವಾಸಿ ಪ್ರೇಮಾ ಅವರ ಮನೆಗೆ ಮರವೊಂದು ಬಿದ್ದು ಭಾಗಶ: ಹಾನಿ ಉಂಟಾಗಿದೆ. ಘಟನಾ ಸ್ಥಳಕ್ಕೆ ಗ್ರಾಮ ಕರಣಿಕ ಶಿವಾನಂದ ನಾಟೆಕರ್, ಸಿಬಂದಿ ಸದಾಶಿವ ಕೈಕಂಬ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 50 ಸಾವಿರ ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಸಿದ್ದಕಟ್ಟೆ ಸಮೀಪದ ಸಂಗಬೆಟ್ಟುವಿನಲ್ಲಿ ಮರವೊಂದರ ಗೆಲ್ಲು ವಿದ್ಯುತ್ ತಂತಿಗಳ ಮೆಲೆ ಬಿದ್ದು ವಿದ್ಯುತ್ ಕಂಬ ಹಾನಿಗೀಡಾಗಿದೆ. ಇದರಿಂದ ಕೆಲಹೊತ್ತು ರಸ್ತೆ ಸಂಚಾರಕ್ಕೆ ತಡೆಯುಂಟಾಯಿತು. ಸ್ಥಳೀಯರು ಮೆಸ್ಕಾಂ ಲೈನ್ ಮೆನ್ ಸಹಕಾರದಲ್ಲಿ ಮರದ ಗೆಲ್ಲು ಮತ್ತು ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದರು. ಹಾಗೆಯೇ ಗ್ರಾಮೀಣ ಭಾಗದ ಬಹುತೇಕ ಕಡೆ ಮರದ ಗೆಲ್ಲುಗಳು ಮುರಿದು ಬಿದ್ದಿದೆ. ಪರಿಣಾಮ ವಿದ್ಯುತ್ ನಲ್ಲೂ ಅಸ್ತವ್ಯಸ್ತಗೊಂಡಿದ್ದು, ರಾತ್ರಿ ಹೊತ್ತು ಹಾಗೂ ಗುರುವಾರ ಬೆಳಿಗ್ಗೆಯಿಂದಲೇ ವಿದ್ಯುತ್ ಕಣ್ಣು ಮುಚ್ಚಾಲೆಯಾಟ ಆಡುತ್ತಿತ್ತು.

ರಸ್ತೆ ಕೆಸರು ಮಯ: ಬಂಟ್ವಾಳ ತಾಲೂಕಿನ ಕೊಲ ಸರಕಾರಿ ಪ್ರೌಢ ಶಾಲಾ ಮೈದಾನದ ತಡೆಗೋಡೆಯ ಅಪೂರ್ಣ ಕಾಮಗಾರಿಯಿಂದಾಗಿ ಮೈದಾನಕ್ಕೆ ತುಂಬಿಸಿದ್ದ ಮಣ್ಣು ಮಳೆಯಿಂದಾಗಿ ರಸ್ತೆಗೆ ಹರಿದು ರಸ್ತೆ ಕೆಸರುಮಯವಾಗಿ ದಾರಿಹೋಕರು ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

See also  ಯುವತಿಯ ಮೇಲೆ ನಿರಂತರ ಅತ್ಯಾಚಾರ- ವಿಷಯ ರಟ್ಟಾಯಿತು ಮಗುವಿಗೆ ಜನ್ಮನೀಡಿದ ಬಳಿಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು