News Kannada
Tuesday, September 27 2022

ಕರಾವಳಿ

ಠಾಗೋರ್ ಪ್ರತಿಮೆ ಸ್ಥಳಾಂತರ: ಸೂಕ್ತ ಸ್ಥಳದಲ್ಲಿ ಸಂರಕ್ಷಣೆಗೆ ಕ್ರಮ - 1 min read

Photo Credit :

ಠಾಗೋರ್ ಪ್ರತಿಮೆ ಸ್ಥಳಾಂತರ: ಸೂಕ್ತ ಸ್ಥಳದಲ್ಲಿ ಸಂರಕ್ಷಣೆಗೆ ಕ್ರಮ

ಕಾರವಾರ: 25 ವರ್ಷಗಳ ಹಿಂದೆ ನಗರದ ಕಡಲತೀರದಲ್ಲಿ ಸ್ಥಾಪಿಸಲಾದ ಕವಿ ರವೀಂದ್ರನಾಥ ಠಾಗೋರ್ ಅವರ ಪ್ರತಿಮೆಯನ್ನು ಚತುಷ್ಪಥ ಹೆದ್ದಾರಿಯ ಅಗಲೀಕರಣ ಕಾಮಗಾರಿಗಾಗಿ ತೆರವುಗೊಳಿಸಲಾಗಿದ್ದು, ಅದನ್ನು ಸೂಕ್ತ ಸ್ಥಳದಲ್ಲಿ ಸಂರಕ್ಷಿಸಿಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು ಕರಾವಳಿ ಪ್ರವೇಶದ್ವಾರ ಹಾಗೂ ಠಾಗೋರ್ ಪ್ರತಿಮೆಯನ್ನು ತೆರವುಗೊಳಿಸಬೇಕಾಗಿತ್ತು. ಅಧಿಕಾರಿಗಳು ಕ್ರೇನ್ ಬಳಸಿ ಠಾಗೋರ್ ಪ್ರತಿಮೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಪ್ರತಿಮೆಯನ್ನು ವರ್ಗಾವಣೆ ಮಾಡಿರುವ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ ಪ್ರತಿಮೆಯನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗುತ್ತದೆ. ನೂತನ ಪ್ರವೇಶ ದ್ವಾರದ ನಿರ್ಮಾಣದ ಬಳಿಕ ಪುನಃ ಅದನ್ನು ಸ್ಥಾಪಿಸಲಾಗುವುದು. ಠಾಗೋರ್ ಕಡಲತೀರದಲ್ಲಿ 2 ಮುಖ್ಯ ದ್ವಾರಗಳನ್ನು ನಿರ್ಮಿಸಲು 14.05 ಲಕ್ಷ ರೂ. ಟೆಂಡರ್ ಆಗಿದ್ದು ಶೀಘ್ರದಲ್ಲೇ ನಿರ್ಮಾಣ ಕಾಮಗಾರಿ ನಡೆಯಲಿದೆ. ಮಯೂರವರ್ಮ ವೇದಿಕೆಯ ಹಿಂಭಾಗದಲ್ಲಿ ಮುಖ್ಯ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗುತ್ತದೆ. ಹಾಗೇ ಮೊದಲಿದ್ದ ಜಾಗದಲ್ಲಿಯೇ ರಸ್ತೆಯ ಬದಿಗೆ ಇನ್ನೊಂದು ಮಹಾದ್ವಾರ ನಿರ್ಮಾಣ ಮಾಡಲಾಗುತ್ತದೆ ಜಿಲ್ಲಾಡಳಿತ ನಿರ್ಧರಿಸಿದೆ.

ಭಾರತದ ಮೊದಲ ಸಿವಿಲ್ ಸರ್ವಿಸ್(ಐಸಿಎಸ್) ಅಧಿಕಾರಿಯಾದ ಸತ್ಯೇಂದ್ರನಾಥ ಠಾಗೋರ್ ಅವರು ಕಾರವಾರದಲ್ಲಿ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಅವರು ಪ್ರಸ್ತುತ ಜಿಲ್ಲಾಧಿಕಾರಿಗಳ ವಾಸ್ತವ್ಯದ ಬಂಗಲೆಯಲ್ಲಿ ಉಳಿದು ಕೊಂಡಿದ್ದರು. ಈ ವೇಳೆ ಕೆಲವು ದಿನಗಳವರೆಗೆ ಅವರ ಸಹೋದರರಾದ ಕವಿ ರವೀಂದ್ರನಾಥ ಠಾಗೋರರು ಇಲ್ಲಿಯೇ ವಾಸ್ತವ್ಯ ಮಾಡಿದ್ದರು. ಈ ಬಂಗಲೆವನ್ನು 1864ರಲ್ಲಿ ನಿರ್ಮಿಸಲಾಗಿದ್ದು ಜಿಲ್ಲೆಯ ಆಡಳಿತವು ಅದನ್ನು ಸಂರಕ್ಷಿಸುತ್ತದೆ. ಬಂಗಲೆಯಲ್ಲಿ ಠಾಗೋರರು ಉಳಿದುಕೊಂಡ ನೆನಪಿಗಾಗಿ ಅವರ ಕೆಲವು ಬರಹಗಳನ್ನು ನೆನಪಿಗಾಗಿ ಇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಡಲ ತೀರಕ್ಕೆ ಸಾಗುವ ಮಹಾದ್ವಾರದಲ್ಲಿ ಅಳವಡಿಸಲಾಗಿದ್ದ ಕವಿ ಠಾಗೋರರ ಪ್ರತಿಮೆಯು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಪಂಚಲೋಹ ಬಳಸಿ ಈ ಪ್ರತಿಮೆಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ತಯಾರಿಸಲಾಗಿದೆ. ಕಾರವಾರ ಕಡಲ ತೀರವನ್ನು ರವೀಂದ್ರನಾಥ್ ಠಾಗೋರ ಹೆಸರಿನಲ್ಲಿ ನಾಮಕರಣ ಮಾಡಿದ ಬಳಿಕ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.

ಕವಿ ರವೀಂದ್ರನಾಥ ಠಾಗೋರ ಅವರು 1882ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ಕಾರವಾರಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆಗಿದ್ದ ಅವರ ಸಹೋದರ ಸತ್ಯೇಂದ್ರನಾಥ್ ಠಾಗೋರ್ ಅವರೊಂದಿಗೆ ಕೆಲವು ದಿನ ವಾಸ್ತವ್ಯ ಮಾಡಿದ್ದರು. ಈ ವೇಳೆ ಇಲ್ಲಿನ ಕಡಲತೀರದ ಸೌಂದರ್ಯವನ್ನು ಕಂಡು ಆಕರ್ಷಿತರಾಗಿದ್ದರು. ಇಲ್ಲಿನ ಸೌಂದರ್ಯ ರಾಶಿಯನ್ನು ಹಾಡಿ ಹೊಗಳಿ ಕವಿತೆಯನ್ನು ಬರೆದಿದ್ದರು. ಹೀಗಾಗಿ ಅವರ ಹೆಸರನ್ನು ಕಡಲತೀರಕ್ಕೆ ನಾಮಕರಣ ಮಾಡಲಾಗಿದೆ.

ಕವಿ ರವೀಂದ್ರನಾಥ ಠಾಗೋರರು ಜಿಲ್ಲಾಧಿಕಾರಿ ಬಂಗಲೆಯಲ್ಲಿಯೇ ಕೆಲವು ದಿನ ಉಳಿದು ಇಲ್ಲಿನ ಸೌಂದರ್ಯದ ಬಗ್ಗೆ ಹೊಗಳಿದ್ದರು. ಅವರು ಉಳಿದುಕೊಂಡ ಬಂಗಲೆಯಲ್ಲಿಯೇ ಈಗ ತಾನು ಕೂಡ ವಾಸ್ತವ್ಯ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದ್ದು ಅವರ ಮೇಲೆ ಅಭಿಮಾನವಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ತಿಳಿಸಿದರು.

See also  ಮೂಡುಬಿದಿರೆ: ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು