News Kannada
Wednesday, October 05 2022

ಕರಾವಳಿ

ಬೆಳ್ತಂಗಡಿ: ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸಮಾರೋಪ - 1 min read

Photo Credit :

ಬೆಳ್ತಂಗಡಿ: ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸಮಾರೋಪ

ಬೆಳ್ತಂಗಡಿ: ತಾಲೂಕು ಮಟ್ಟದಲ್ಲಿ ನಿರಂತರವಾಗಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಲು ಬೇಕಾದಂತಹ ವ್ಯವಸ್ಥೆಯನ್ನು ಸರಕಾರ ಮಾಡಬೇಕು.

ಶಾಲೆಗಳಲ್ಲಿ ಸಾಹಿತ್ಯದ ಓದು, ಬರಹ ಇವುಗಳ ಬೆಳವಣಿಗೆಗೆ ಪೂರಕವಾದಂತಹ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆಯ ಮೂಲಕ ನಡೆಯಬೇಕು ಮತ್ತು ಪ್ರಸಕ್ತ ಎಲ್ಲಾ ವಸ್ತುಗಳ ದರ ಏರಿಕೆಯ  ಗಮನದದಲ್ಲಿಟ್ಟುಕೊಂಡು ತಾಲೂಕು ಸಮ್ಮೇಳನದ ಅನುದಾನವನ್ನು ಎರಡು ಲಕ್ಷಕ್ಕೆ ಏರಿಸಬೇಕು  ಎಂಬ ಮೂರು ಅಂಶದ ನಿರ್ಣಯಗಳನ್ನು ಸರಕಾರಕ್ಕೆ ಸಲ್ಲಿಸುವುದರ ಮೂಲಕ ಬೆಳ್ತಂಗಡಿಯ 15 ನೇ ಸಾಹಿತ್ಯ ಸಮ್ಮೇಳನ ಆದಿತ್ಯವಾರ ಸಂಜೆ ಸಮಾಪನಗೊಂಡಿತು.

ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಪತ್ರಕರ್ತ ಮನೋಹರ ಪ್ರಸಾದ್ ಅವರು, ಜೀವನ ಪ್ರೀತಿ, ಪರಸ್ಫರ ಬಾಂಧವ್ಯ ಬೆಳೆಸಲು ಸಾಹಿತ್ಯ ಕಾರವಾಗುತ್ತದೆ. ನಮ್ಮ ಬರವಣಿಗೆಗಳು, ಕ್ರಿಯಾತ್ಮಕ ಚಿಂತನೆಗಳು ಇನ್ನೊಬ್ಬರಿಗೆ ಸ್ಪೂರ್ತಿಯನ್ನು ತಂದುಕೊಡುವಂತಿರಬೇಕು. ಆದರೆ ಇಂದು ಏಕಾಗ್ರತೆಯ ಕೊರತೆಯಿಂದಾಗಿ ಯಾವ ಕೆಲಸಕ್ಕೂ ಸಮಯವಿಲ್ಲದಂತಾಗಿದೆ. ಭಾವಸೂಕ್ಷ್ಮತೆ ಕ್ಷೀಣಿಸುತ್ತಿದೆ. ಆಧುನಿಕ ಸೌಲಭ್ಯಗಳು ಅಂತರ್ಮುಖಿಗಳನ್ನಾಗಿಸುತ್ತಾ ಬದುಕನ್ನು ದ್ವೀಪದಂತೆ ಮಾಡುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ. ಮಾತೃಭಾಷೆಯಲ್ಲಿ ನಾವು ಪರಸ್ಪರ ತಟ್ಟುವಂತಹ, ಮುಟ್ಟುವಂತಹ ವಿಧಾನ ಬೇರೆ ಯಾವುದೇ ಮಾಧ್ಯಮದಲ್ಲಿ ಇಲ್ಲ ಎಂದರು.

ಈ ಸಂದರ್ಭ ಸಾಹಿತ್ಯ ಸಾಧಕ ಸೋಮನಾಥ ಪಟವರ್ಧನ್ ಬೆಳ್ತಂಗಡಿ, ಸೈನಿಕ ಶ್ರೀಕೃಷ್ಣ ಭಟ್, ನಿವೃತ್ತ ಶಿಕ್ಷಕ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು , ಅಂಗನವಾಡಿ ಕಾರ್ಯಕರ್ತೆ ಜಾನಕಿ ಕುಂಡದಬೆಟ್ಟು, ಸರಕಾರಿ ಸೇವೆಯ ಸಿ. ಆರ್. ನರೇಂದ್ರ, ಜಾನಪದ ಕ್ರೀಡೆಯ ಸಾಧಕರಾದ ಕಾಸಿಂ ಮಲ್ಲಿಗೆ ಮನೆ ಕಿಲ್ಲೂರು ಇವರುಗಳನ್ನು ಸಮ್ಮಾನಿಸಲಾಯಿತು. ಯುವ ಸಾಧಕ ಪುರಸ್ಕಾರವನ್ನು ಸಾಹಿತ್ಯ-ಪತ್ರಿಕೋದ್ಯಮದ ಲಕ್ಷ್ಮೀ ಮಚ್ಚಿನ ಬೆಳ್ತಂಗಡಿ, ಕ್ರೀಡೆಯ ನಿತಿನ್ ಪೂಜಾರಿ ಉಜಿರೆ, ಶಿಕ್ಷಣದ ವಸಂತಿ ಟಿ. ನಿಡ್ಲೆ, ಕಲೆಯ ವೆಂಕಟಸುಬ್ರಹ್ಮಣ್ಯ ಬೆಳ್ತಂಗಡಿ ಇವರಿಗೆ ಪ್ರದಾನ ಮಾಡಲಾಯಿತು.

ಸಮ್ಮೇಳನಾಧ್ಯಕ್ಷ ಎಂ. ಬಾಬು ಶೆಟ್ಟಿ ನಾರಾವಿ, ಡಾ.ಬಿ.ಯಶೋವರ್ಮ, ಬಿ. ಪೀತಾಂಬರ ಹೆರಾಜೆ, ಎಸ್.ಪ್ರದೀಪ ಕುಮಾರ್ ಕಲ್ಕೂರ, ಯಶವಂತ ಪಟವರ್ಧನ್, ಧರ್ಮಗುರು ಬಿಷಪ್ ಲಾರೆನ್ಸ್ ಮುಕ್ಕುಯಿ, ಪ್ರೊ. ಕೃಷ್ಣಪ್ಪ ಪೂಜಾರಿ, ರಾಮಕೃಷ್ಣ ಚೊಕ್ಕಾಡಿ ವೇದಿಕೆಯಲ್ಲಿದ್ದರು

ಡಾ| ಪ್ರದೀಪ್ ನಾವೂರು ಸ್ವಾಗತಿಸಿದರು. ಅಶ್ರಫ್ ಆಲಿ ಕುಂಞ ನಿರ್ಣಯ ಮಂಡಿಸಿದರು. ಡಾ| ಸುಧೀರ್ ಪ್ರಭು ಎಂ ವಂದಿಸಿದರು. ಶಿಕ್ಷಕಿ ವಸಂತಿ ಜಿ. ಕುಳಮರ್ವ ಕಾರ್ಯಕ್ರಮ ನಿರ್ವಹಿಸಿದರು. 

See also  ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು