News Kannada
Monday, December 05 2022

ಕರಾವಳಿ

ಹೋರಾಟ ಅಪೂರ್ಣವಾಗಲು ಬಿಡುವುದಿಲ್ಲ: ರಾಘವೇಶ್ವರ ಸ್ವಾಮೀಜಿ

Photo Credit :

ಹೋರಾಟ ಅಪೂರ್ಣವಾಗಲು ಬಿಡುವುದಿಲ್ಲ: ರಾಘವೇಶ್ವರ ಸ್ವಾಮೀಜಿ

ಉಳ್ಳಾಲ: ಕಾನೂನು ಜಾರಿ ಮಾಡಿ ಗೋವು ದರೋಡೆಕೋರರನ್ನು ನಿಗ್ರಹಿಸದೇ ಇದ್ದಲ್ಲಿ  ಪ್ರತಿಭಟಿಸುವ ಅವಕಾಶವೇ ಇರುತ್ತಿರಲಿಲ್ಲ. ಜೀವವನ್ನು ಹಿಂಸಿಸಿ ಕೊಂದು ತಿನ್ನುವುದು ಕೊಳಕು ಸಂಸ್ಕೃತಿ, ಹೋರಾಟ ಅಪೂರ್ಣವಾಗಲು ಎಂದಿಗೂ ಬಿಡುವುದಿಲ್ಲ. ಆ ಹಂತದಲ್ಲಿ ತಾನೂ ಬಂದು ಕೈಜೋಡಿಸುವುದಾಗಿ ಶ್ರೀ ಮಹಾಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ ಕರೆ ನೀಡಿದರು.

ಕೈರಂಗಳದ ಪುಣ್ಯಕೋಟಿನಗರದಲ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಟಿ.ಜಿ.ರಾಜಾರಾಂ ಭಟ್ ಗೋ ದರೋಡೆ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಕೈಗೊಂಡಿರುವ ಆಮರಣಾಂತ ಉಪವಾಸದ 6ನೇ ದಿನದಂದು ಭೇಟಿ ನೀಡಿ  ಗೋಪೂಜೆ ನೆರವೇರಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

ಪುಣ್ಯಕೋಟಿನಗರದ  ಘಟನೆ ತಡವಾಗಿ ಗೊತ್ತಾಗಿದೆ. ಗೋಸಂಪರ್ಕ ನಿರಂತರವಾಗಿ  ನಡೆಸುತ್ತಿರುವುದರಿಂದ  ಪತ್ರಿಕೆಗಳನ್ನು ಓದುವುದನ್ನು ಬಿಟ್ಟಿರುವುದರಿಂದ  ಘಟನೆ ನಡೆದಿರುವುದು ಗೊತ್ತಾಗಿರಲಿಲ್ಲ. ಎ.1ರಂದು  ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಚಿತ್ರವನ್ನು ನೋಡಿ ಮೊದಲಿಗೆ ಎಪ್ರಿಲ್ ಫೂಲ್ ಅಂದುಕೊಂಡರೂ ಬಳಿಕ ಪ್ರಕರಣ ಬೆಳಕಿಗೆ ಬಂತು.

ಸಮಾಜದಲ್ಲಿ ಒಳಿತಿಗೆ ಉಳಿಗಾಲವಿಲ್ಲದ ಸ್ಥಿತಿ, ಅನ್ಯಾಯಗಳು ಮೇರೆಮೀರಿದೆ.  ಅಮೃತಧಾರಾ ಗೋಶಾಲೆಯಿಂದ  ಗೋ ದರೋಡೆ ನಡೆಸಿದವರು  ಚೌರ್ಯ, ಕ್ರೌರ್ಯವನ್ನು ಪ್ರದರ್ಶಿಸಿದರೆ,  ಅದರ ರಕ್ಷಣೆಗೆ ನಿಂತ ಗೋಶಾಲೆ ಸಿಬ್ಬಂದಿ  ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ. ಅನ್ಯಾಯದ ವಿರುದ್ಧ ನಡೆಯುತ್ತಿರುವ  ಆಮರಣಾಂತ ಉಪವಾಸ ಆರನೇ ದಿನ  ಪೂರೈಸಿರುವುದು ಹೆಮ್ಮೆಯ ವಿಚಾರ.  ಹೋರಾಟ ಜಿಲ್ಲೆ, ರಾಜ್ಯ ಹಾಗೂ ದೆಶಕ್ಕೆ ಮಾದರಿಯಾಗಿದೆ. ರಾಜಕಾರಣಿಗಳಂತೆ ಎಸಿಯೊಳಗೆ ಕುಳಿತು ಮಧ್ಯಾಹ್ನದವರೆಗಿನ ಉಪವಾಸದಲ್ಲಿ ಭಾಗಿಯಾಗಿ ರಾಜಾರಾಂ ಭಟ್ ನಾಟಕವಾಡಿಲ್ಲ. ಅವರಿಗೆ ಆಗಿರುವ ಮಾನಸಿಕ ಆಘಾತದಿಂದ ನೊಂದು ಉಪವಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಗೋವುಗಳ ಜೀವ ಎಷ್ಟು ಅಮೂಲ್ಯವೋ, ಉಪವಾಸ ನಿರತರ ಜೀವವೂ ಅಷ್ಟೇ ಅಮೂಲ್ಯವಾಗಿರುತ್ತದೆ. ರಾಜಾರಾಂ ಭಟ್ ಹಾಗೂ ಅವರ ಜತೆಗೆ ಆಮರಣಾಂತ ಉಪವಾಸ ಕೈಗೊಂಡಿರುವ 40 ಮಂದಿ ಆರೋಗ್ಯದಲ್ಲಿ ಏರುಪೇರಾದಲ್ಲಿ ಇಡೀ ಸಮಾಜವೇ  ಕಾನೂನಿನ ವಿರುದ್ಧ ನಿಲ್ಲುತ್ತದೆ. ಆದರೆ ಈವರೆಗೆ ಹಿಂದೂ ಸಮಾಜ ದೇಶ, ಧರ್ಮದ ಮೇಲೆ ಬಹಳಷ್ಟು ಆಕ್ರಮಣಗಳಾದರೂ ಎಂದಿಗೂ ಕಾನೂನು ಕೈಗೆತ್ತಿಕೊಂಡಿಲ್ಲ.  ಈವರೆಗೂ ಸಂವಿಧಾನ ಚೌಕಟ್ಟಿನೊಳಗೆ ಹೋರಾಟಗಳು ನಡೆದಿವೆ.  ಅದಕ್ಕಾಗಿ  ನ್ಯಾಯ ದೊರೆತಲ್ಲಿ ಅದೇ ವ್ಯವಸ್ಥೆ ಉಳಿಯಲು ಸಾಧ್ಯ.  ಸಾತ್ವಿಕರು ಕಾನೂನು ಕೈಗೆತ್ತಿಕೊಂಡಲ್ಲಿ  ಸಮಾಜದಲ್ಲಿ ಯಾರೂ ಉಳಿಯಲು ಅಸಾಧ್ಯ, ಪ್ರಳಯವೂ ಆಗಬಹುದು. ಆಮರಣಾಂತ ಉಪವಾಸಕ್ಕೆ ಭೇಟಿ ನೀಡುವುದರಿಂದ ತಪ್ಪಿಸಲು ಹಲವು ರೀತಿಯ ಪ್ರಯತ್ನಗಳು ನಡೆದಿತ್ತು. ಆದರೆ ಧರ್ಮದ ಹಾದಿ ಮುಖ್ಯ ಎಂಬುದನ್ನು ನಂಬಿ ಸ್ಥಳಕ್ಕೆ ಭೇಟಿ ನೀಡಿರುವೆ.  ಹೋರಾಟ ಸಂಪೂರ್ಣಗೊಳಿಸುವ ಉದ್ದೇಶದೊಂದಿಗೆ  ಸಮಾಜ ಸ್ಪಂಧಿಸಬೇಕಿದೆ. ಎಲ್ಲರೂ ಒಗ್ಗಟ್ಟಾಗಿ  ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದರೆ ಮತ್ತೆ ಹೋರಾಟಕ್ಕೆ ಬಲ ಬರಲಿದೆ. ಆಂದೋಲನ ಪೂರ್ಣವಾಗಬೇಕಿದೆ.  ದೇಶದಲ್ಲಿ ಕಾನೂನು ಪ್ರಬಲವಾಗಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.

ಟಿ.ಜಿ.ರಾಜಾರಾಂ ಭಟ್, ಕನ್ಯಾನ ಬಾಳೆಕೋಡಿ ಕಾಶೀಕಾಳಭೈರವೇಶ್ವರ ಶಿಲಾಂಜನ  ಕ್ಷೇತ್ರದ  ಶ್ರೀ ಶಶಿಕಾಂತಮಣಿ ಸ್ವಾಮೀಜಿ, ವಿ.ಹಿಂ.ಪ ಮುಖಂಡರುಗಳಾದ ಗೋಪಾಲ ಕುತ್ತಾರ್, ಶರಣ್ ಪಂಪ್ ವೆಲ್, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್,  ಬಂಟ್ವಾಳದ ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳೇಪಾಡಿಗುತ್ತು, ಶ್ರೀ ಕಣಂತೂರು ತೋಡಕುಕ್ಕಿನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ಮಂಜು ಭಂಡಾರಿ ಯಾನೆ ತಿಮ್ಮಪ್ಪ ಕೊಂಡೆ, ನಂದರಾಜ್ ಶೆಟ್ಟಿ ಪಿಜಿನಬೈಲ್,  ಜಗದೀಶ ಆಳ್ವ ಕುವೆತ್ತಬೈಲ್, ರವಿರಾಜ ಹೆಗ್ಡೆ,  ರಾಧಾಕೃಷ್ಣ ಅಡ್ಯಂತಾಯ, ರಹೀಂ ಉಚ್ಚಿಲ್ ಉಪಸ್ಥಿತರಿದ್ದರು.

See also  ಚೂರಿ ಇರಿತ ಪ್ರಕರಣ: ಆರೋಪಿಯ ಬಂಧನ

ನೀತಿ ಸಂಹಿತೆಗೆ ಮಣ್ಣು ಹಾಕಿ ಅಂದ ಕಲ್ಲಡ್ಕ ಭಟ್
 ನೀತಿ ಸಂಹಿತೆಗೆ ಮಣ್ಣು ಹಾಕಿ, ಅದೊಂದು ನೀತಿ ಇಲ್ಲದ ಸಮಿತಿ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳುವ ಮೂಲಕ ಚುನಾವಣಾ ನೀತಿ ಸಂಹಿತೆಯ ವಿರುದ್ಧ ಕಿಡಿಕಾರುವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಮೊಗಲರು ಬ್ರಿಟೀಷರಿಗಿಂತ  ಕೆಟ್ಟದಾಗಿ ಅಧಿಕಾರಶಾಹಿಗಳು ರಾಜ್ಯ ಆಳುತ್ತಿದ್ದಾರೆ.  ಹಿಂದು ಧರ್ಮವನ್ನು, ಸಂಸ್ಕೃತಿಯನ್ನು ಅಳಿಸುವ ಎಲ್ಲಾ ಪ್ರಯತ್ನದಲ್ಲಿ ಸರಕಾರ ತೊಡಗಿಸಿಕೊಂಡಿದೆ.  ಆಮರಣಾಂತ ಉಪವಾಸ ಒಂದು ವೈಚಾರಿಕ ಸಂಘರ್ಷವಾಗಿದೆ.  ಹಿಂದೆ ಗೋಕಳವು ನಡೆದಾಗ ಪ್ರತಿಭಟನೆ, ಸಭೆಗಳು ನಡೆದಿರಬಹುದು. ಆದರೆ  ರಾಜಾರಾಂ ಭಟ್ ಅವರು ಕೈಗೊಂಡಿರುವ ಆಮರಣಾಂತ  ಉಪವಾಸದ ಹೋರಾಟ ಕೊನೆಯವರೆಗೂ ನಡೆಯಬೇಕಿದೆ. ಇದೊಂದು ವೋಟಿನ ರಾಜಕಾರಣವಲ್ಲ, ನ್ಯಾಯಯುತ, ಸತ್ಯಕ್ಕಾಗಿ ಹಾಗೂ ಜೀವನದ ಮೌಲ್ಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ಮಾತಿನ ನಡುವೆ ಸಭಿಕರೊಬ್ಬರು ನೀತಿ ಸಂಹಿತೆಯ ವಿಚಾರ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಭಟ್, ನೀತಿ ಸಂಹಿತೆಗೆ ಮಣ್ಣು ಹಾಕಿ, ಅದೊಂದು  ನೀತಿ ಇಲ್ಲದ ಸಮಿತಿ ಎಂದು ಹೇಳುವ ಮೂಲಕ ಚುನಾವಣಾ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಕೆಟ್ಟ ರಾಜಕಾರಣ ಇರುವವರೆಗೂ  ಸ್ವಾಮಿಗಳಿಗೆ ಗೌರವ ಸಿಗುವುದಿಲ್ಲ, ಹೆಣ್ಮಕ್ಕಳಿಗೆ, ಹಸುಗಳಿಗೆ ರಕ್ಷಣೆ  ಇರುವುದಿಲ್ಲ. ಹಿಂದೂ ಧರ್ಮವಿರೋಧಿ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಖಾದರ್ ತೆರಳಿದ ದೇವಾಲಯಕ್ಕೆ ಮತ್ತೆ ಬ್ರಹ್ಮಕಲಶ ಆಗಬೇಕು ಎಂದು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಲ್ಲಡ್ಕ ಭಟ್, ಯಾವ ಮಾಧ್ಯಮದವರೂ ತನ್ನನ್ನು ಪ್ರಶ್ನಿಸಿದಲ್ಲಿ ಅದು ನೂರಕ್ಕೆ ನೂರು ಸತ್ಯ, ದನ ತಿನ್ನುವವರನ್ನು  ದೇವಾಲಯದೊಳಕ್ಕೆ  ಕರೆಸಿ ಗೌರವಿಸುವುದು ತಪ್ಪೇ ಎಂದ ಅವರು. ಮತದಾನ ಪವಿತ್ರವಾಗಲು ಹಿಂದೂ ಧರ್ಮದ ಸಂರಕ್ಷಣೆಯಾಗಬೇಕಿದೆ ಎಂದರು.

ರಾಜಕೀಯ ಭಾಷಣದ ಜತೆಗೆ  ಚುನಾವಣಾ ನೀತಿ ಸಂಹಿತೆಯನ್ನು ಟೀಕಿಸಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

184

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು