News Kannada
Thursday, December 08 2022

ಕರಾವಳಿ

ಎ.12ರಿಂದ ಇವಿಎಂ, ವಿವಿಪ್ಯಾಟ್ ಬಗ್ಗೆ ಜಾಗೃತಿ: ಚುನಾವಣಾಧಿಕಾರಿ

Photo Credit :

ಎ.12ರಿಂದ ಇವಿಎಂ, ವಿವಿಪ್ಯಾಟ್ ಬಗ್ಗೆ ಜಾಗೃತಿ: ಚುನಾವಣಾಧಿಕಾರಿ

ಮಂಗಳೂರು: ಸ್ಥಳೀಯ ಸೆಕ್ಟರ್ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಇತರ ಚುನಾವಣಾ ಅಧಿಕಾರಿಗಳು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಎ.12ರಿಂದ ಬೂತ್ ಮಟ್ಟದಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಎಸ್. ಬಿ. ಮಾಹಿತಿ ನೀಡಿದ್ದಾರೆ.

ಸೋಮವಾರ ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಚುನಾವಣಾ ನೀತಿ ಸಂಹಿತೆ ಕುರಿತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಯಾವುದೇ ರೀತಿಯ ಸಭೆ, ಸಾರ್ವಜನಿಕ ಸಮಾರಂಭ, ವಾಹನ ಪ್ರಚಾರಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಕನಿಷ್ಠ 48 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಬಿಎಲ್ ಒ ವೋಟರ್ ಸ್ಲಿಪ್ ಮಾತ್ರವೇ ಅಧಿಕೃತ
ಮತದಾನಕ್ಕೆ ಒಂದು ವಾರ ಮೊದಲು ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಪತ್ರ ಹಂಚುವರು. ಮತದಾನಕ್ಕೆ ಎರಡು ದಿನ ಮೊದಲು ಬಿಎಲ್ ಒಗಳು ಆಯಾ ಮತಗಟ್ಟೆಯಲ್ಲಿ ಲಭ್ಯವಿರುವರು. ಅಲ್ಲಿಂತ ಮತಪತ್ರ ಪಡೆಯಬಹುದು. ಇಲ್ಲವಾದಲ್ಲಿ ಮತದಾನದ ದಿನ ಮತಗಟ್ಟೆಗಳಲ್ಲೂ ಮತಪತ್ರ ಲಭ್ಯವಿದೆ. ಬಿಎಲ್ ಒಗಳು ನೀಡುವ ಮತಪತ್ರವು ಅಧಿಕೃತವಾಗಿರುವುದು. ಪಕ್ಷಗಳಿಂದ ನೀಡಲಾಗುವ ಮತಪತ್ರಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಸೆಂಥಿಲ್ ಹೇಳಿದರು.

See also  ಪತ್ನಿಗೆ ವರದಕ್ಷಿಣಿ ಕಿರುಕುಳ: ಆರೋಪಿಗೆ ಜೈಲು ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು