News Kannada
Saturday, December 03 2022

ಕರಾವಳಿ

ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

Photo Credit :

ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಮಂಗಳೂರು: ನವ ಭಾರತದ ಕನಸುಗಾರ ಹಾಗೂ ಸಂವಿಧಾನದ ಶಿಲ್ಪಿ ಡಾ| ಬಾಬಾ ಸಾಹೇಬ ಭೀಮ್ ರಾಮ್ ಅಂಬೇಡ್ಕರ್ ಅವರ ಪುಣ್ಯ ಜಯಂತಿಯನ್ನು ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಎಪ್ರಿಲ್ 14 ರಂದು ಆಚರಿಸಲಾಯಿತು.

“ಸಂವಿಧಾನವು ಭಾರತೀಯರ ಅತ್ಯುನ್ನತವಾದ ಹಾಗೂ ಗೌರವಯುತವಾದ ಕಾನೂನಾಗಿದೆ. ಇದು ಸರ್ವ ಜನರ ಹಕ್ಕುಗಳನ್ನು ರಕ್ಷಿಸುತ್ತದೆ. ಎಲ್ಲರಿಗೆ ಸಮಾನವಾದ ಸ್ಥಾನಮಾನವನ್ನು ನೀಡುತ್ತದೆ. ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ನೀಡಿ ನಮ್ಮ ಜವಾಬ್ದಾರಿಯನ್ನು ತಿಳಿಸುತ್ತದೆ. ಇಂತಹ ಪವಿತ್ರವಾದ ಪುಸ್ತಕಕ್ಕೆ ಕಳಂಕ ತರುವಂತಹ ಹೇಳಿಕೆಗಳನ್ನು ನೀಡಿ ದಾರಿ ತಪ್ಪಿಸುವ ಕೆಲಸ ಇಂದು ನಡೆಯುತ್ತಿದೆ. ಇಂತವುಗಳಿ0ದ ನಾವು ಜಾಗೃತರಾಗಿರಬೇಕು.

ದುರ್ಬಲರಿಗೆ, ಅಸಹಾಯಕರಿಗೆ ಅವರ ಹಕ್ಕನ್ನು ಪಡೆಯುವ0ತೆ ಮಾಡುವ ಕರ್ತವ್ಯ ವಿದ್ಯಾರ್ಥಿಗಳಾದ್ದಾಗಿರಬೇಕು. ಸಮಾಜದಲ್ಲಿ ಶಾಂತಿ, ನೆಮ್ಮದಿ, ಅಭಿವೃದ್ಧಿ, ಗೌರವಯುತವಾದ ಜೀವನ ನಡೆಸುವ ಸಮಾನ ಹಕ್ಕುಗಳನ್ನು ಪಡೆಯುವಂತೆ ಮಾಡಿದಾಗ ಈ ಆಚರಣೆಗೆ ಅರ್ಥ ಬರುತ್ತದೆ. ನಾವೆಲ್ಲರೂ ಸೇರಿ ಈ ಕೆಲಸವನ್ನು ಮಾಡೋಣ” ಎಂದು ಶಾಲಾ ಪ್ರಾಂಶುಪಾಲರಾದ ರೆ|ಫಾ|ರಾಬರ್ಟ್ ಡಿ’ಸೋಜ ಹೇಳಿದರು.

ಅವರು ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಆಯೋಜಿಸಿದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಿದ್ದರು.

ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕು| ಸೋನಾಲಿ ಉಮಾನಾಥ್ ಇಂದಿನ ದಿನದ ಮಹತ್ವದ ಬಗ್ಗೆ ತಿಳಿಸಿದರು. ವರ್ಕಿ ಮ್ಯಾಥ್ಯೂ ಡಾ| ಅಂಬೇಡ್ಕರ್ ಅವರ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಫ್ರೆಜಲ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಉಪಪ್ರಾ0ಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ವಿಭಾಗದ ಶಿಕ್ಷಕಿಯರಾದ ವಿದ್ಯಾ ಜೋಸೆಫ್, ಗೌರಿ ರವಿ, ಲವೀನಾ ಕ್ಯಾಸ್ಟಲಿನೊ, ರೇಖಾ ನವೀನ್, ಲವೀನಾ ಸೆರಾವೊ, ಫಾ| ಜೊ ಜೊ ಅಲ್ಪೋನ್ಸೊರವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಐವನ್ ಮಸ್ಕರೇನ್ಹಸ್, ಡಿಲ್ಲಾ ಕುಲಾಸೊ, ತ್ಯಾಗರಾಜ್ ಸಹಕರಿಸಿದ್ದರು.

See also  ಬಂಟ್ವಾಳ ತಾಲೂಕು ಕಚೇರಿ ಅವ್ಯವಸ್ಥೆ ವಿರುದ್ಧ ಎಸ್ ಡಿಪಿಐ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

189

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು