News Kannada
Friday, December 09 2022

ಕರಾವಳಿ

ಗೋಮಾಂಸ ಅಕ್ರಮ ಸಾಗಾಟ: ಎರಡು ಪ್ರತ್ಯೇಕ ಪ್ರಕರಣ ದಾಖಲು

Photo Credit :

ಗೋಮಾಂಸ ಅಕ್ರಮ ಸಾಗಾಟ: ಎರಡು ಪ್ರತ್ಯೇಕ ಪ್ರಕರಣ ದಾಖಲು

ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆ ಪೇಟೆ ಹಾಗೂ ವೇಣೂರು ಸಮೀಪದ ಕುಕ್ಕೇಡಿಯಲ್ಲಿ ಪ್ರತೇಕವಾಗಿ ವಾಹನಗಳಲ್ಲಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ 5 ಮಂದಿಯನ್ನು ಬಂಧಿಸಿದ್ದು, 850 ಕೆ.ಜಿ. ಗೋಮಾಂಸ ಹಾಗೂ ಎರಡು ವಾಹನಗಳನ್ನು ಡಿಸಿಐಬಿ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಹಾಗೂ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ.ಕ. ಪೋಲಿಸ್ ವರಿಷ್ಠಾಧಿಕಾರಿ ಡಾ| ರವಿಕಾಂತೇ ಗೌಡ ಮಾರ್ಗದರ್ಶನದಲ್ಲಿ ಡಿಸಿಐಬಿ ನಿರೀಕ್ಷಕ ಸುನೀಲ್ ವೈ. ನಾಯಕ್ ಮತ್ತು ತಂಡ ಸೋಮವಾರ ಬೆಳಗಿನ ಜಾವ ಗುರುವಾಯನಕೆರೆ ಪೇಟೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಬೆಳ್ತಂಗಡಿ ಕಡೆಯಿಂದ ಬಂದ ಮಹೀಂದ್ರಾ ಝೈಲೋವನ್ನು ತಡೆದಿದ್ದಾರೆ. ವಾಹನವನ್ನು ತಪಾಸಣೆ ಮಾಡುವಾಗ ಅದರಲ್ಲಿ ಗೋಮಾಂಸ ಪತ್ತೆಯಾಗಿದೆ.

ಕಾರಿನಲ್ಲಿದ್ದ ಮಂಗಳೂರು ಕುದ್ರೋಳಿ ನಿವಾಸಿ ಮುಸ್ತಾಕ್, ಕಲ್ಲಡ್ಕದ ಗೋಳ್ತಮಜಲು ನಿವಾಸಿ ಮಹಮ್ಮದ್ ಕಬೀರ್, ತುಂಬೆ ರಾಮಲ್ ಕಟ್ಟೆ ನಿವಾಸಿ ಅಬ್ದುಲ್ ಜಬ್ಬಾರ್ ಎಂಬುವವರನ್ನು ಬಂಧಿಸಿದ್ದು, 450 ಕೆ.ಜಿ. ಗೋಮಾಂಸವನ್ನು ಹಾಗೂ ಝೈಲೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡಿಸಿಐಬಿಯವರು ಮುಂದಿನ ಕ್ರಮಕ್ಕಾಗಿ ಬೆಳ್ತಂಗಡಿ ಠಾಣೆಗೆ ಹಸ್ತಾಂತರಿಸಿದ್ದು ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಇದೇ ತಂಡ ವೇಣೂರು ಸಮೀಪದ ಕುಕ್ಕೇಡಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬರುತ್ತಿದ್ದ ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 400 ಕೆ.ಜಿ. ಗೋಮಾಂಸ ಪತ್ತೆಯಾಗಿದೆ.

ಅದರಲ್ಲಿದ್ದ ಬಂಟ್ವಾಳ ಕಾರಿಂಜದ ಮದ್ದ ನಿವಾಸಿ ಎಂ. ಅಶ್ರಫ್, ಮಂಗಳೂರು ಬಂದರು ನಿವಾಸಿ ರಝೀಮ್ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಗೋಮಾಂಸ ಹಾಗೂ ವಾಹನವನ್ನು ವಶಪಡಿಸಿಕೊಂಡು ವೇಣೂರು ಠಾಣೆಗೆ ಹಸ್ತಾಂತರಿಸಿದ್ದು, ಪ್ರಕರಣ ದಾಖಲಾಗಿದೆ.

ಎರಡು ಪ್ರಕರಣದಲ್ಲಿ 5 ಮಂದಿಯನ್ನು ಬಂಧಿಸಿ, 850 ಕೆ. ಜಿ. ಗೋಮಾಂಸ, ಎರಡು ವಾಹನ ಹಾಗೂ 5 ಮೊಬೈಲ್ ಗಳನ್ನು ಸೇರಿದಂತೆ ಒಟ್ಟು ಮೌಲ್ಯ 14.25 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೋಲಿಸ್ ನಿರೀಕ್ಷಕ ಸುನೀಲ್ ವೈ ನಾಯಕ್, ಸಿಬ್ಬಂದಿಗಳಾದ ವಾಸು ನಾಯ್ಕ್, ಲಕ್ಷ್ಮಣ ಕೆ. ಜಿ., ಉದಯ ರೈ, ಪ್ರವೀಣ ಕೆ., ಇಕ್ಬಾಲ್, ತಾರನಾಥ ಎಸ್, ಪಳನಿವೇಲು, ಚಾಲಕ ವಿಜಯ ಗೌಡ ಪಾಲ್ಗೊಂಡಿದ್ದರು.

See also  ಹಳೆದ ದ್ವೇಷ ಹಿನ್ನೆಲೆ: ಯುವಕನ ಕೊಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು