News Kannada
Sunday, December 04 2022

ಕರಾವಳಿ

ಬೆಳ್ತಂಗಡಿ ಕ್ಷೇತ್ರ: ಹಳೆ ಹುಲಿ ಬಂಗೇರ ಎದುರು ಯುವ ನೇತಾರ ಪೂಂಜ ಸ್ಪರ್ಧೆ

Photo Credit :

 ಬೆಳ್ತಂಗಡಿ ಕ್ಷೇತ್ರ: ಹಳೆ ಹುಲಿ ಬಂಗೇರ ಎದುರು ಯುವ ನೇತಾರ ಪೂಂಜ ಸ್ಪರ್ಧೆ

ಬೆಳ್ತಂಗಡಿ: ಕೊನೆಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಸೋಮವಾರ ಉತ್ತರ ದೊರೆತಿದೆ. ಹೀಗಾಗಿ ಹಳೆ ಹಾಗೂ ಹೊಸ ಮುಖಗಳ ಮಧ್ಯೆ ತುರುಸಿನ ಸ್ಪರ್ಧೆ ನಡೆಯಲಿದೆ ಎಂಬ ಸಾಧ್ಯತೆಗಳನ್ನು ಹುಟ್ಟು ಹಾಕಿದೆ.

ರಾಜ್ಯದ ಚುನಾವಣಾ ಇತಿಹಾಸದಲ್ಲಿ 1952ರಿಂದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರವು ಮಹತ್ವವನ್ನು ಪಡೆದುಕೊಳ್ಳುತ್ತಾ ಬಂದಿದೆ. 1952 ಹಾಗೂ 57ರಲ್ಲಿ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಶಾಸಕರಾಗಿದ್ದ ಕ್ಷೇತ್ರವಿದು. 1962 ರಿಂದ 78 ರವರೆಗಿನ ನಾಲ್ಕು ಅವಧಿಗಳಲ್ಲಿ ಕಾಂಗ್ರೆಸ್ಸಿನ ವೈಕುಂಠ ಬಾಳಿಗ(ಎರಡು ಬಾರಿ), ಸುಬ್ರಹ್ಮಣ್ಯ ಗೌಡ, ಗಂಗಾಧರ ಗೌಡ ಗೆದ್ದ ಕ್ಷೇತ್ರವಿದು. 1983ರಲ್ಲಿ ಕಾಂಗ್ರೆಸ್ಸಿಗೇ ಪ್ರತಿಸ್ಪರ್ಧಿಯಾಗಿ ಹಾಲಿ ಶಾಸಕರಾಗಿರುವ ವಸಂತ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ ಪಾರಂಪಾರಿಕ ಕಾಂಗ್ರೆಸ್ ವಿಜಯಕ್ಕೆ ಅಡ್ಡಗಾಲು ಹಾಕಿದ ಕ್ಷೇತ್ರವಿದು. ಮತ್ತೆ 1985ರಲ್ಲಿ ವಸಂತ ಬಂಗೇರ ಅವರೇ ಎರಡನೇ ಬಾರಿ ಬಿಜೆಪಿಯಿಂದ ಗೆದ್ದರು. ಆಗ ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭ ಬಿ.ಎಸ್.ಯಡಿಯೂರಪ್ಪ ಹಾಗೂ ವಸಂತ ಬಂಗೇರ (ಇಬ್ಬರು) ಮಾತ್ರ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕರಿದ್ದರು. 1989ರಲ್ಲಿ ಮತ್ತೆ ಗಂಗಾಧರ ಗೌಡ ಕಾಂಗ್ರೆಸ್ಸಿನ ಶಾಸಕರಾದರು. 1994ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಮೂರನೇ ಬಾರಿಗೆ ಶಾಸಕರಾದರು. 1999ರಲ್ಲಿ ಸಹೋದರನನ್ನು ಸೋಲಿಸಿ ಬಿಜೆಪಿಯ ಪ್ರಭಾಕರ ಬಂಗೇರ ಶಾಸಕರಾದರು. 2004ರಲ್ಲೂ ಪ್ರಭಾಕರ ಬಂಗೇರ ಅವರೇ ಮತ್ತೆ ಗೆದ್ದು ಬಂದರು. ಹೀಗಾಗಿ ಸಹೋದರರು ಸ್ಪರ್ಧಿಸಿದ್ದ ಕ್ಷೇತ್ರವಿದಾಗಿದೆ. 2008ರಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಜಿಗಿದ ವಸಂತ ಬಂಗೇರ ಅವರು ಗೆದ್ದರು. ಬಳಿಕ ಕಳೆದ 2013ರಲ್ಲೂ ಅವರೇ 5 ನೇ ಬಾರಿಗೆ ಶಾಸಕರಾಗಿರುವ ಕ್ಷೇತ್ರವಿದು.

ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಆಯಾ ಕಾಲಘಟ್ಟದಲ್ಲಿ ಗೆಲುವನ್ನು ಸಾಧಿಸುತ್ತಾ ಬಂದಿದೆ. ಹೀಗಾಗಿ ಈ ಬಾರಿ ಯಾರ ಗೆಲುವು ಎಂಬುದು ಕಾದು ನೋಡಬೇಕಾಗಿದೆ. ಕಾಂಗ್ರೆಸ್ ನಿಂದ ಹಾಲಿ ಶಾಸಕರೇ ನಾಮ ಪತ್ರ ಸಲ್ಲಿಸಲು ತಿಂಗಳ ಹಿಂದೆಯೇ ಸಿದ್ದವಾಗಿದ್ದಾರೆ. ಈ ಸಂದರ್ಭ ಅವರ ಪ್ರತಿಸ್ಪರ್ಧಿ ಯಾರು ಎಂಬ ಪ್ರಶ್ನೆ ವ್ಯಾಪಕವಾಗಿ ಕ್ಷೇತ್ರದಲ್ಲಿ ಹರಿದಾಡತೊಡಗಿತ್ತು. ಆದರೆ ಸೋಮವಾರ ಬಿಜೆಪಿಯ ದ.ಕ.ಜಿಲ್ಲಾ ಯುವ ಮೋರ್ಚಾ ಹರೀಶ್ ಪೂಂಜ ಅವರ ಹೆಸರು ಅಂತಿಮಗೊಂಡಿದ್ದು ಯುವ ನಾಯಕನೊಬ್ಬ ಹಳೇ ನಾಯಕನ ವಿರುದ್ದ ಸ್ಪರ್ಧಿಸಲು ಸಜ್ಜಾಗಿ ನಿಂತಿದ್ದಾರೆ.

ಮೂವತ್ತನಾಲ್ಕು ವರ್ಷ ಹರೆಯದ ಹರೀಶ್ ಪೂಂಜ ರಾಜ್ಯ ವಿಧಾನಸಭಾ ಕ್ಷೇತ್ರವೊಂದರ ಅಭ್ಯರ್ಥಿಯಾಗಿ ಇದೇ ಮೊದಲ ಬಾರಿಗೆ ಕಣಕ್ಕೆ ಪ್ರವೇಶಿಸಿದ್ದಾರೆ. ತಾಲೂಕಿನ ಗರ್ಡಾಡಿ ಗ್ರಾಮದವರಾಗಿರುವ ಪೂಂಜ, 1998ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಸಂಘಟನೆಗೆ ತೊಡಗಿಕೊಂಡು, ಪರಿಷತ್ತಿನಲ್ಲಿ ಅನೇಕಾನೇಕ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡು ರಾಜ್ಯ ಮಟ್ಟದಲ್ಲಿ ಪರಿಷತ್ತನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸರಕಾರಗಳ ಶೈಕ್ಷಣಿಕ ನೀತಿಯ ವಿರುದ್ದ ಹೋರಾಟಮಾಡಿದ ಖ್ಯಾತಿ ಇವರದ್ದು.

See also  ಉದ್ಯಮಿ ಸಿದ್ದಾರ್ಥ್ ಮೃತದೇಹ ಅಳಿವೆಬಾಗಿಲ ಬಳಿ ಪತ್ತೆ

ಕಾನೂನು ಅಧ್ಯಯನ ಮಾಡಿ ಬೆಂಗಳೂರಿನಲ್ಲಿ ಹೈಕೋರ್ಟ್ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಬಳಿಕ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡು, ಪ್ರಸ್ತುತ ದ.ಕ.ಜಿಲ್ಲಾ ಯುವ ಮೋರ್ಚಾಅಧ್ಯಕ್ಷರಾಗಿದ್ದಾರೆ. ಧರ್ಮ ಜಾಗರಣದ ಮೂಲಕ ಧಾರ್ಮಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಹರೀಶ್ ಪೂಂಜ, ತಾಲೂಕಿನಲ್ಲಿ 14ಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಜವಾಬ್ದಾರಿ ವಹಿಸಿ ಯಶಸ್ವಿಯಾಗಿದ್ದಾರೆ. ಯುವ ಮೋರ್ಚಾದ ಅಧ್ಯಕ್ಷರಾದ ಬಳಿಕ ಪಕ್ಷದ ಅನೇಕ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ್ದಾರೆ. ಇವರ ಚತುರ ಸಂಘಟನಾತ್ಮಕ ಕಾರ್ಯ ಶೈಲಿಯನ್ನು ಮೆಚ್ಚಿ ಪಕ್ಷವು ಈ ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಟಿಕೇಟನ್ನು ನೀಡುತ್ತಿದೆ. ಕ್ಷೇತ್ರದಲ್ಲಿ ಶೇ. 50ರಷ್ಟು ಯುವ ಸಮುದಾಯ ಇರುವುದರಿಂದ ಗೆಲುವಿನ ಹಾದಿ ತಮ್ಮದಾಗಲಿದೆ ಎಂಬ ನಿರೀಕ್ಷೆ ಪಕ್ಷ ಇಟ್ಟುಕೊಂಡಿದೆ ಎಂದು ಹೇಳಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು