News Kannada
Sunday, December 04 2022

ಕರಾವಳಿ

ಲಕ್ಷಾಂತರ ರೂ. ಮೌಲ್ಯದ ಮದ್ಯ ವಶ: ಇಬ್ಬರ ಬಂಧನ

Photo Credit :

ಲಕ್ಷಾಂತರ ರೂ. ಮೌಲ್ಯದ ಮದ್ಯ ವಶ: ಇಬ್ಬರ ಬಂಧನ

ಕಾರವಾರ: ಚುನಾವಣಾ ಅಕ್ರಮಕ್ಕಾಗಿ ಹಳಿಯಾಳದ ಬೆಳವಟಗಿ ಎನ್ನುವಲ್ಲಿ ಬಚ್ಚಿಡಲಾಗಿದ್ದ ಗೋವಾದ ಅಕ್ರಮ ಮದ್ಯವನ್ನು, ದಾಂಡೇಲಿ ವಲಯದ ಅಬಕಾರಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅಬಕಾರಿ ಪೊಲೀಸರು ಒಟ್ಟು ಒಂದು ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಳಿಯಾಳದ ಬೆಳವಟಿಗಿ ಗ್ರಾಮದವರಾದ ಸಾಂಬಾಜಿ ಅಪ್ಪಾಜಿ ಮಂಗನಗೌಡ ಹಾಗೂ ಮೌಳೇಶ್ವರ ಸಾಂಬಾಜಿ ಮಂಗನಗೌಡ ಎನ್ನುವವರನ್ನು ಬಂಧಿಸಲಾಗಿದೆ. ಇವರು ತಮ್ಮ ತೋಟದ ಗದ್ದೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಮದ್ಯ ಹಂಚಿಕೆ ಮಾಡಲು ಸುಮಾರು 450 ಲೀಟರ್ ಅಕ್ರಮ ಮದ್ಯವನ್ನು ಬಚ್ಚಿಟ್ಟಿದ್ದರು.

ಮಾಹಿತಿದಾರರೊಬ್ಬರು ಅಬಕಾರಿ ಅಧಿಕಾರಿಗಳಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾಗ ಮದ್ಯ ಪತ್ತೆಯಾಗಿದೆ. ಮದ್ಯ ಜಪ್ತಿ ಮಾಡಿಕೊಂಡು, ಆರೋಪಿಗಳಿಬ್ಬರನ್ನು ಬಂಧಿಸಿ ಕಾರವಾರಕ್ಕೆ ತರಲಾಗಿದ್ದು ಮದ್ಯ ಎಲ್ಲಿ ಸಾಗಿಸಲಾಗುತ್ತಿತ್ತು ಎನ್ನುವ ತನಿಖೆಯನ್ನು ಅಬಕಾರಿ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಅಬಕಾರಿ ಎಸ್‌ಪಿ ಎಲ್ .ಎ. ಮಂಜುನಾಥ ತಿಳಿಸಿದ್ದಾರೆ.

See also  ಹಗಲು ಹಣ್ಣಿನ ವ್ಯಾಪಾರಿಗಳು, ರಾತ್ರಿ ದರೋಡೆಕೋರರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು