News Kannada
Thursday, December 01 2022

ಕರಾವಳಿ

ಬೆಳ್ತಂಗಡಿಯಲ್ಲಿ ಮತಯಂತ್ರ ಪ್ರಾತ್ಯಕ್ಷಿಕೆ - 1 min read

Photo Credit :

ಬೆಳ್ತಂಗಡಿಯಲ್ಲಿ ಮತಯಂತ್ರ ಪ್ರಾತ್ಯಕ್ಷಿಕೆ

ಬೆಳ್ತಂಗಡಿ: ಮೇ.12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 100% ಮತದಾನವಾಗುವ ಗುರಿಯನ್ನು ಚುನಾವಣಾ ಆಯೋಗ ಹಮ್ಮಿಕೊಂಡಿದ್ದು, ಇದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಮತದಾನಕ್ಕೆ ನಿಯೋಜಿಸಿದ ಎಲ್ಲಾ ಅಧಿಕಾರಿಗಳು ಸರಕಾರಿ ಅಧಿಕಾರಿಗಳಾಗಿರದೆ ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಬೇಕು ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಎಂ.ಆರ್ ರವಿ ಹೇಳಿದ್ದಾರೆ.

ಅವರು ಬುಧವಾರ ಗುರುವಾಯನಕೆರೆ ನಮ್ಮ ಮನೆ ಹವ್ಯಕದಲ್ಲಿ ನಡೆದ ದ.ಕ ಜಿಲ್ಲಾ ಸ್ವೀಪ್ ಸಮಿತಿ ಮಂಗಳೂರು ಇದರ ವತಿಯಿಂದ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಗಳ ಬಳಕೆ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬ್ಯಾಗ್ ತಂಡದ ಸದಸ್ಯರಿಗೆ ನೀಡುವ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಚುನಾವಣಾ ಆಯೋಗದ ಘೋಷಣೆಯಂತೆ ಎಲ್ಲಾ ಸಮುದಾಯ ಒಳಗೊಳ್ಳುವ ಸುಗಮ ನೈತಿಕ ಚುನಾವಣೆ ಎಂಬಂತೆ ಈ ಬಾರಿ ಚುನಾವಣೆ ನಡೆಯಲಿದ್ದು, ಮತದಾರರಿಗೆ ಮತದಾನದ ದೃಢೀಕರಣವಾಗಲು ಅದಕ್ಕೆ ಬೇಕಾದ ಯಂತ್ರಗಳು ಬಳಕೆಯಾಗಲಿದೆ. ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದ್ದಾರೆ. ಯಾರೂ ಮತದಾನದ ಹಕ್ಕಿನಿಂದ ವಂಚಿರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರಲ್ಲಿದೆ.

ವಯಸ್ಸಾದವರು ಮತ್ತು ವಿಶೇಷ ಚೇತನರು ಮತದಾನ ಮಾಡುಲು ಪ್ರೋತ್ಸಾಹಿಸುವಂತೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಸಮೀಕ್ಷೆ ಮಾಡಲಾಗಿದೆ. ಎಲ್ಲರೂ ಮತದಾನ ಪೂರ್ವವಾಗಿ ಮತಯಂತ್ರದ ಬಳಕೆಯ ಬಗ್ಗೆ ತಿಳಿಯಬೇಕಾಗಿದ್ದು ಇದಕ್ಕಾಗಿ ಅಲ್ಲಲ್ಲಿ ಮತಯಂತ್ರ ಪ್ರಾತ್ಯಕ್ಷಿಕೆ ಮಾಡಲಾಗುತ್ತಿದೆ, ಇದು ಎ.30ರ ತನಕ ನಡೆಯಲಿದೆ ಎಂದರು.

ಕೆಲವು ಕಡೆ ಮತಯಂತ್ರ ದುರ್ಬಳಕೆಯ ಬಗ್ಗೆ ಆರೋಪಗಳು ಬರುತ್ತಿದ್ದು ಈ ಸಂಶಯ ನಿವಾರಣೆಗಾಗಿ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ನಿರ್ಣಯದಂತೆ ವಿದ್ಯುನ್ಮಾನ ಯಂತ್ರ ಬಳಕೆಯಾಗುತ್ತಿದೆ. ಇದರಲ್ಲಿ ಎಲ್ಲ ದಾಖಲೆಗಳನ್ನು ಯಾವುದೇ ಸಂದರ್ಭದಲ್ಲಿ ಪರಿಶೀಲಿಸುವ ಅವಕಾಶವಿದೆ ಎಂದು ರವಿ ಅವರು ತಿಳಿಸಿದರು.

ತಾ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಸವರಾಜ ಕೆ ಅಯ್ಯಣ್ಣನವರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುಂದರ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಕ ಧರಣೇಂದ್ರ ಕುಮಾರ್ ಅವರು ತಾಲೂಕು ಚುನಾವಣಾ ಮತಗಟ್ಟೆಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಅಧಿಕಾರಿಗಳು ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ತಾ.ಪಂ ಸಂಯೋಜಕ ಜಯನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.

See also  ಬೆಳ್ತಂಗಡಿ:ಕೊಲೆ ಆರೋಪಿಯಿಂದ ಗಾಂಜಾ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು