News Kannada
Tuesday, December 06 2022

ಕರಾವಳಿ

ನಾಮಪತ್ರ ಸಲ್ಲಿಸಬೇಕಿದ್ದ ಅಭ್ಯರ್ಥಿ ಜೈಲುಪಾಲು!

Photo Credit :

ನಾಮಪತ್ರ ಸಲ್ಲಿಸಬೇಕಿದ್ದ ಅಭ್ಯರ್ಥಿ ಜೈಲುಪಾಲು!

ಬಂಟ್ವಾಳ: ಚುನಾವಣಾ ಕಣದಲ್ಲಿ ಏನೇನು ನಡೆಯುತ್ತದೆ ಎಂದು ಊಹಿಸಲು ಕಷ್ಟ. ಯಾಕೆಂದರೆ ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಕೂಡ ಪ್ರಮುಖವಾಗಿರುತ್ತದೆ. ಆದರೆ ಇಲ್ಲೊಬ್ಬ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆಯ ಒಂದು ದಿನ ಮೊದಲು ಜೈಲು ಪಾಲಾದ ಘಟನೆ ನಡೆದಿದೆ.

ಮಂಗಳವಾರ ನಾಮಪತ್ರ ಸಲ್ಲಿಸಬೇಕಿದ್ದ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಎಂಇಪಿ(ಮಹಿಳಾ ಎಂಪವರ್ ಪಾರ್ಟಿ) ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಶಾಂತಿಅಂಗಡಿ ನಿವಾಸಿ ಶಮೀರ್ ಯಾನೆ ಚಮ್ಮಿ ಶಾಂತಿಅಂಗಡಿ ಎಂಬವರು ಹಲ್ಲೆ ಪ್ರಕರಣದಲ್ಲಿ ಸೋಮವಾರ ಜೈಲು ಪಾಲಾಗಿದ್ದಾರೆ.

2014ರಲ್ಲಿ ಬ್ರಹ್ಮರಕೂಟ್ಲುವಿನಲ್ಲಿ ನಡೆದ ಟೋಲ್ ಫ್ಲಾಝಾ ಧ್ವಂಸ ಪ್ರಕರಣದ ಆರೋಪಿಯಾಗಿದ್ದ ಶಮೀರ್ ಗೆ ನ್ಯಾಯಾಂಗ ವಾರಂಟ್ ಜಾರಿಗೊಳಿಸಿತ್ತು. ಸೋಮವಾರ ಅವರು ನ್ಯಾಯಾಲಯದ ಮುಂದೆ ಹಾಜರಾದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಹಿಂದೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಮೀರ್ ಇಂದು ನಾಮಪತ್ರ ಸಲ್ಲಿಸಬೇಕಿತ್ತು.

See also  ರಮ್ಯಾಗೆ ಟ್ವಿಟ್ಟರ್ ನಲ್ಲಿ ಸವಾಲೆಸೆದ ಕರಾವಳಿ ಗಂಡು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು