News Kannada
Thursday, December 01 2022

ಕರಾವಳಿ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ - 1 min read

Photo Credit :

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ

ಮೈಸೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ನಜರ್ ಬಾದ್ ಠಾಣೆ ಪೊಲೀಸರು ಬಂಧಿಸಿ 1,74,135 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಅರವಿಂದನಗರ ನಿವಾಸಿ ಪ್ರಮೋದ್ ಬಾಗರೆ (30), ಜೆ.ಸಿ.ನಗರದ ಹೀರಾ(44) ಮತ್ತು ಅಶೋಕ್ ಪುರಂನ ಅಮಿತ್ ಕುಮಾರ್(28) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಸಿ.ನಗರದ 6ನೇ ಕ್ರಾಸ್ ನಲ್ಲಿರುವ ಮನೆ ನಂ.220ರ 2ನೇ ಮಹಡಿಯಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.

ಈ ಕುರಿತು ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಮೈಸೂರು ನಗರದ ಅಪರಾಧ ವಿಭಾಗದ ಡಿಸಿಪಿ ಎಂ.ಬಿ. ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಎಸಿಪಿ ಬಿ.ಆರ್. ಲಿಂಗಪ್ಪರವರ ನೇತೃತ್ವದಲ್ಲಿ ಸಿಸಿಬಿಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಸ್ವಾಮಿ, ಶಿವಪ್ರಕಾಶ್, ಸಿಬ್ಬಂದಿ ಚಿಕ್ಕಣ್ಣ, ರಾಮಸ್ವಾಮಿ, ಗಣೇಶ್, ಶಿವರಾಜು, ಲಕ್ಷ್ಮಿಕಾಂತ, ಶ್ರೀನಿವಾಸ ಪ್ರಸಾದ್, ಆನಂದ್, ರಾಜೇಂದ್ರ, ನಿರಂಜನ್, ಗೌತಮ್, ಶೈಲೇಶ್ ಅವರನ್ನೊಳಗೊಂಡ ತಂಡ ಧಾಳಿ ಮಾಡಿದ್ದಾರೆ.

ಈ ವೇಳೆ ಆರೋಪಿಗಳೊಂದಿಗಿದ್ದ ರೂಪಾಯಿ 1,74,135 ನಗದು ಹಣ, 15 ಮೊಬೈಲ್ ಫೋನ್ ಗಳು, 1 ಲ್ಯಾಪ್ ಟಾಪ್, 1 ಎಲ್.ಇ.ಡಿ. ಟಿ.ವಿ, 1 ಐ20 ಕಾರು ಮತ್ತು ಇತರೇ ಪರಿಕರಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ನಳಿನ್ ಕುಮಾರ್ ಕಟೀಲ್ ಗಡಿಪಾರು ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು