News Kannada
Thursday, December 08 2022

ಕರಾವಳಿ

ಚುನಾವಣಾ ಅಖಾಡದಿಂದ ಹಿಂದಕ್ಕೆ ಸರಿದ ಶಿರೂರು ಶ್ರೀಗಳು

Photo Credit :

ಚುನಾವಣಾ ಅಖಾಡದಿಂದ ಹಿಂದಕ್ಕೆ ಸರಿದ ಶಿರೂರು ಶ್ರೀಗಳು

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಅವರು ಮನವೊಲಿಸಿದರೆ ಮಾತ್ರ ನಾಮಪತ್ರ ಹಿಂಪಡೆಯುವುದಾಗಿ ಹೇಳಿದ್ದ ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಇಂದು ತನ್ನ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಉಡುಪಿ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿರೂರು ಶ್ರೀ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ನಿನ್ನೆ ತನಕ ತನ್ನ ನಿಲುವಿಗೆ ಅಚಲರಾಗಿದ್ದ ಶಿರೂರು ಶ್ರೀಗಳು, ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾದ ಶುಕ್ರವಾರ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಬಿಜೆಪಿ ವರಿಷ್ಠರು ಮುಂದಿನ ದಿನಗಳಲ್ಲಿ ಪಕ್ಷ ವರ್ಧನೆಗೆ ತಮ್ಮ ಸಲಹೆ ಸೂಚನೆಗಳನ್ನು ಪಡೆಯುವುದಾಗಿ ಮನವೊಲಿಕೆ ಮಾಡಿರುವ ಕಾರಣದಿಂದಾಗಿ ನಾಮಪತ್ರ ಹಿಂಪಡೆದಿರುವುದಾಗಿ ತಿಳಿಸಿದರು.

ಮೋದಿ ಹಾಗೂ ಅಮಿತ್ ಶಾ ಅವರಿಗೆ ಬೆಂಬಲ ನೀಡಿ ನಾಮಪತ್ರ ಹಿಂಪಡೆಯುವುದಾಗಿ ಅವರು ಹೇಳಿದರು.

See also  ಉಡುಪಿಯಲ್ಲಿ ಸ್ವಪಕ್ಷದಿಂದಲೇ ಸಚಿವೆ ಜಯಮಾಲಾ ಗೆ ಮುಖಭಂಗ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು