News Kannada
Friday, December 02 2022

ಕರಾವಳಿ

ಕೋಮುವಾದಿ ಪಕ್ಷಗಳ ನಿರ್ಮೂಲನೆ ಇಲ್ಲಿಂದಲೇ ಆರಂಭ: ಜಿಗ್ನೇಶ್ ಮೆವಾನಿ

Photo Credit :

ಕೋಮುವಾದಿ ಪಕ್ಷಗಳ ನಿರ್ಮೂಲನೆ ಇಲ್ಲಿಂದಲೇ ಆರಂಭ: ಜಿಗ್ನೇಶ್ ಮೆವಾನಿ

ಬಂಟ್ವಾಳ: ಕರ್ನಾಟಕ ವಿಧಾನಸಭಾ ಚುನಾವಣೆಯು ಸೆಮಿಫೈನಲ್ ಪಂದ್ಯಾಟವಾಗಿದೆ. ಇಲ್ಲಿಂದಲೇ ಕೋಮುವಾದಿ ಪಕ್ಷಗಳನ್ನು ನಿರ್ಮೂಲನೆ ಮಾಡುವ ಮೂಲಕ ಮುಂಬರುವ ಫೈನಲ್ ಲೋಕಸಭಾ ಚುನಾವಣೆಗೂ ನಾವು ಸಜ್ಜಾಗಬೇಕಿದೆ ಎಂದು ದಲಿತ ಮುಖಂಡ, ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.

ಸಂವಿಧಾನದ ಉಳಿವಿಗಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ `ಸ್ವಾಭಿಮಾನಿ ಸಮಾವೇಶ’ದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

ತಮ್ಮ ಮಾತಿನುದ್ದಕ್ಕೂ ಬಿಜೆಪಿ, ಆರೆಸ್ಸೆಸ್, ಪ್ರಧಾನಿ ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಜಿಗ್ನೇಶ್, ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್ ನ ಎಷ್ಟು ಮಂದಿ ಬಲಿದಾನ ಮಾಡಿದ್ದಾರೆ. ಸಂವಿಧಾನ ಬದಲಿಸುತ್ತೇನೆ ಎಂದಿರುವವರು ದೇಶದ್ರೋಹಿಗಳು ಎಂದು ಟೀಕಿಸಿದರು.

ದೇಶದ ಎಲ್ಲ ರಾಜಕೀಯ ಪಕ್ಷದ ಸಿದ್ಧಾಂತಗಳು ಜಾತ್ಯತೀತ ನಿಲುವನ್ನು ಹೊಂದಿದ್ದು, ಬಿಜೆಪಿ ಸಿದ್ಧಾಂತ ಇದಕ್ಕೆ ವ್ಯತಿರಿಕ್ತವಾಗಿದೆ. ಈ ಪಕ್ಷ ದೇಶವನ್ನು ಕೊಳ್ಳೆ ಹೊಡೆಯುವ ಹಾಗೂ ಬಲತ್ಕಾರಿ ಜಾನುವಾರ್ ಪಾರ್ಟಿಯಾಗಿದೆ. ನಮಗೆ ಹಿಂದುತ್ವವಾದಿ ಕಾರ್ಪೋರೇಟರ್ ಗಳ ಆಳ್ವಿಕೆ ಬೇಡ, ಜಾತ್ಯತೀತ ಸಿದ್ಧಾಂತದ ಆಡಳಿತ ಬೇಕು. ಅದಕ್ಕಾಗಿ ಎಲ್ಲರೂ ಒಂದಾಗಬೇಕು ಎಂದರು.

ಪ್ರಧಾನಿ ಮೋದಿ ಅವರು ಕರ್ನಾಟಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ತಾನು ಸಂವಿಧಾನ ಉಳಿಸಿ ಕಾರ್ಯಕ್ರಮಕ್ಕಾಗಿ ಕರ್ನಾಟಕಕ್ಕೆ ಬಂದು ಇಷ್ಟು ದಿನವಾದರೂ ಮೋದಿ ಅವರು ಹೆದರಿಕೆಯಿಂದ ರಾಜ್ಯಕ್ಕೆ ಕಾಲಿಟ್ಟಿಲ್ಲ. ಸುಳ್ಳು ಅಭಿವೃದ್ಧಿ ಬಗ್ಗೆ ಮಾತನಾಡುವ ಮೋದಿ ಅವರು ಕರ್ನಾಟಕಕ್ಕೆ ಬರಲಿ ಎಂದು ಸವಾಲೆಸೆದ ಅವರು, ನಾನು ಗುಜರಾತಿ, ಮೋದಿಯೂ ಗುಜರಾತಿ. ಬನ್ನೀ ಕರ್ನಾಟಕ್ಕೆ ಅಭಿವೃದ್ಧಿಯ ಬಗ್ಗೆ ಮುಖಾಮುಖಿ ಕುಳಿತು ಚರ್ಚೆ ಮಾಡೋಣ ಎಂದರು.

ಬಿಜೆಪಿ ಕೇವಲ ಬೆದರು ಬೊಂಬೆ
ಬಹುಭಾಷಾ ನಟ, ಪ್ರಗತಿಪರ ಚಿಂತಕ ಪ್ರಕಾಶ್ ರೈ ಮಾತನಾಡಿ, ಬಿಜೆಪಿಗೆ ಸಿದ್ಧಾಂತವೇ ಇಲ್ಲ ಹಾಗೂ ಸ್ವಂತ ಬುದ್ಧಿಯೂ ಇಲ್ಲ. ಆರೆಸ್ಸೆಸ್ ನ ಅಜೆಂಡಾವನ್ನು ಇವರು ಅನುಷ್ಠಾನ ಮಾಡುತ್ತಾರೆ. ನಿಜಾರ್ಥದಲ್ಲಿ ಬಿಜೆಪಿ ಕೇವಲ ಬೆದರು ಬೊಂಬೆ ಪಕ್ಷ ಎಂದು ಲೇವಡಿ ಮಾಡಿದರು.

ಬಿಜೆಪಿ ಸರಕಾರ ರಚಿಸೋದೇ ಇಲ್ಲ. ಮಂಗಳೂರು ದಕ್ಷಿಣದ ವೇದವ್ಯಾಸ ಕಾಮತ್ ಪತ್ನಿ ಹಿಂದುತ್ವ ಉಳಿವಿಗೆ ಮತ ಕೇಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಓಟು ಕೇಳೋದು ತಪ್ಪಲ್ಲ. ಆದರೆ ಧರ್ಮಾಧಾರಿತ ಮತ ಕೇಳಬೇಡಿ. ಹಿಂದು ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ತಪ್ಪು. ಬಿಜೆಪಿ ಅತ್ಯಾಚಾರಿಗಳನ್ನು ಬೆಂಬಲಿಸುವ ಪಕ್ಷ, ಅದರಿಂದ ಹೊರ ಬನ್ನಿ ಎಂದು ಹೇಳಿದರು.

ಯಡಿಯೂರಪ್ಪನವರೇ ನಿಮ್ಮ ವಯಸ್ಸೇನು?, ಅಮಿತ್ ಶಾ ವಯಸ್ಸೇನು? ನೋಡಿ. ಏನವರ ಅರ್ಹತೆ? ಅಮಿತ್ ಶಾ ಬಂದರೆ ಏನಾದರೂ ಮಾಡ್ತಾರೆ. ಅವರ ಕುಟಿಲ ತಂತ್ರ, ಚಾಣಾಕ್ಷ. ಇದೆಲ್ಲ ನಿಮ್ಮ ಯೋಗ್ಯತೆಯೇನ್ರೀ? ಎಂದು ಪ್ರಶ್ನಿಸಿದರು.

See also  ನಕ್ರೆ ಮಾಣಿಗುಡ್ಡೆ ಪರಿಸರದ ದಲಿತ ಕೇರಿಗೆ ಭೇಟಿ ನೀಡಿದ ಯಡಿಯೂರಪ್ಪ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು