News Kannada
Sunday, November 27 2022

ಕರಾವಳಿ

‘ಓಟು ಹಾಕೋಣ ಬನ್ನಿ’ ಕೃತಿಗೆ ಮೌನೇಶ್ ರಚನೆಯ ಬೀದಿ ನಾಟಕ ಆಯ್ಕೆ - 1 min read

Photo Credit :

'ಓಟು ಹಾಕೋಣ ಬನ್ನಿ' ಕೃತಿಗೆ ಮೌನೇಶ್ ರಚನೆಯ ಬೀದಿ ನಾಟಕ ಆಯ್ಕೆ

ಪುತ್ತೂರು: ಕರ್ನಾಟಕ ಚುನಾವಣಾ ಆಯೋಗವು ಹೊರತಂದಿರುವ ಮತದಾರರ ಜಾಗೃತಿ ಮೂಡಿಸುವ ಬೀದಿನಾಟಕಗಳ ಸಂಕಲನ “ಓಟು ಹಾಕೋಣ ಬನ್ನಿ” ಎಂಬ ಕೃತಿಗೆ ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ರಚನೆಯ “ಮತ ಮಾರಾಟಕ್ಕಲ್ಲ” ಬೀದಿನಾಟಕ ಆಯ್ಕೆಯಾಗಿದೆ.

ಬೆಂಗಳೂರಿನ ಸಿಆರ್ ಟಿ ಹಾಗೂ ಅಪ್ಸಾ ಸಂಸ್ಥೆ ಜಂಟಿಯಾಗಿ ಬೀದಿನಾಟಕ ಸಂಕಲನವನ್ನು ಸಿದ್ದಪಡಿಸುವ ಜವಬ್ದಾರಿಯನ್ನು ಹೊತ್ತಿದ್ದು, ಅದರಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಆಯ್ದ ಲೇಖಕರಿಗೆ ಮತದಾರರ ಜಾಗೃತಿಯ ನಾಟಕ ಬರೆಯಲು ನಿರ್ದೇಶನ ನೀಡಲಾಗಿತ್ತು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಮೌನೇಶ ವಿಶ್ವಕರ್ಮ ರವರು ‘ಮತಮಾರಾಟಕ್ಕಲ್ಲ’ ಅನ್ನುವ ಬೀದಿನಾಟಕ ಹಾಗೂ ‘ಮತದಾರ ಕೇಳಿಲ್ಲಿ’ ಎನ್ನುವ ಹಾಡನ್ನು ರಚಿಸಿದ್ದು, ಇವೆರಡೂ ಚುನಾವಣಾ ಆಯೋಗ ಹೊರತಂದಿರುವ ಕೃತಿಯಲ್ಲಿ ಪ್ರಕಟವಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯಸ್ಥರು ಈ ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ. ನೂರು ಪುಟಗಳ ಈ ಕೃತಿಯಲ್ಲಿ ರಾಜ್ಯದ ವಿವಿಧ ಭಾಗಗಳ ಲೇಖಕರು ರಚಿಸಿದ 15 ಬೀದಿನಾಟಕಗಳು ಪ್ರಕಟವಾಗಿದೆ.ಮೂಲತಃ ಪುತ್ತೂರು ನಿವಾಸಿಯಾಗಿರುವ ಮೌನೇಶ್ ವಿಶ್ವಕರ್ಮರವರು ಬಂಟ್ವಾಳದಲ್ಲಿ ಪತ್ರಕರ್ತರಾಗಿ ಸೇವೆಸಲ್ಲಿಸುತ್ತಿದ್ದು, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಂಗನಾಟಕ, ಬೀದಿನಾಟಕಗಳ ಸಹಿತ ವಿವಿಧ ತರಬೇತಿಗಳನ್ನು ನೀಡುತ್ತಿರುವ ಇವರು, 15 ಕ್ಕೂ ಅಧಿಕ ನಾಟಕಗಳನ್ನು ಬರೆದಿದ್ದು ಮಕ್ಕಳ ಹಕ್ಕುಗಳ ಕುರಿತಾದ ನಾಟಕಗಳ ಸಂಕಲನ ಮುದ್ರಣಕ್ಕೆ ಸಿದ್ದಗೊಂಡಿದೆ. ಇವರು ಪ್ರಸ್ತುತ ಮಾಣಿಯಲ್ಲಿ ಸಂಸಾರ ಜೋಡುಮಾರ್ಗ ಕಛೇರಿಯನ್ನು ಮುನ್ನಡೆಸುತ್ತಿದ್ದಾರೆ.

See also  ನಿಟ್ಟೆ ವಿದ್ಯಾಸಂಸ್ಥೆ, ರೋಟರಿ ಕ್ಲಬ್ ಸಹಯೋಗದಲ್ಲಿ ಉಚಿತ ದಂತ ತಪಾಸಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು