News Kannada
Friday, December 02 2022

ಕರಾವಳಿ

ಸರಕಾರಿ ಕರ್ತವ್ಯಕ್ಕೆ ಅಡ್ಡಿ: ಶಾಸಕ ಸೈಲ್ ವಿರುದ್ಧ ದೂರು

Photo Credit :

ಸರಕಾರಿ ಕರ್ತವ್ಯಕ್ಕೆ ಅಡ್ಡಿ: ಶಾಸಕ ಸೈಲ್ ವಿರುದ್ಧ ದೂರು

ಕಾರವಾರ: ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕಾರವಾರ ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಸತೀಶ್ ಸೈಲ್ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇ 11ರಂದು ಸತೀಶ್ ಸೈಲ್ ಆಪ್ತ ಮಂಗಲದಾಸ್ ಕಾಮತ್ ಅವರ ಅಂಕೋಲಾದ ಅವರ್ಸಾದ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆಯಲ್ಲಿ ಮನೆಯ ಬಳಿ ಬಂದಿದ್ದ ಸತೀಶ್ ಸೈಲ್ ಅಂಕೋಲಾದ ಅವರ್ಸಾ ಗ್ರಾಮದ ಸಕಲಬೇಣದಲ್ಲಿ ಮಂಗಲದಾಸ ಕಾಮತ್ ಕಚೇರಿಯಲ್ಲಿ ಹಣ ಹಂಚುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶಾಸಕರ ಕಾರು ತಪಾಸಣೆ ಮಾಡಲು ಮುಂದಾದ ವೇಳೆ ಐಟಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ಕಾರನ್ನು ತಪಾಸಣೆ ಮಾಡದಂತೆ ಐಟಿ ಅಧಿಕಾರಿಗಳಿಗೆ ಹೇಳಿ ಕಾರನ್ನು ಮುಂದಕ್ಕೆ ಚಲಾಯಿಸಿಕೊಂಡು ಸೈಲ್ ತೆರಳಿದ್ದರು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಗೋವಾ ಐಟಿ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಬಾಬು ಸಾಹೇಬ್ ನಾರ್ವ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 353 ಹಾಗೂ 506 ಅಡಿಯಲ್ಲಿ ಸತೀಶ್ ಸೈಲ್ ವಿರುದ್ಧ ದೂರು ದಾಖಲಾಗಿದೆ.

See also  ಏರುತ್ತಿರುವ ಬಿಸಿಲ ಬೇಗೆ, ಬತ್ತುತ್ತಿರುವ ನೀರಿನ ಮೂಲಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು