News Kannada
Wednesday, October 05 2022

ಕರಾವಳಿ

ಈ ಬಡ ಪ್ರತಿಭೆ ಬೆಳಗಲು ಹೃದಯವೈಶಾಲ್ಯ ತೋರಿಸುವಿರಾ? - 1 min read

Photo Credit :

ಈ ಬಡ ಪ್ರತಿಭೆ ಬೆಳಗಲು ಹೃದಯವೈಶಾಲ್ಯ ತೋರಿಸುವಿರಾ?

ಛಲವೇ ದೊಡ್ಡ ಬಲ ಎನ್ನುವ ಮಾತೊಂದಿದೆ. ಇದಕ್ಕೆ ಪೂರಕವಾಗಿ ಜೀವನದಲ್ಲಿ ಎಲ್ಲವೂ ಇದ್ದರೂ ಏನೂ ಇಲ್ಲ ಎಂದು ಕೊರಗುವವರ ನಡುವೆ, ದೈಹಿಕ ಅನಾರೋಗ್ಯದ ನಡುವೆಯೂ ಕಲಿಕೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿಯೋರ್ವಳ ಯಶೋಗಾಥೆಯಿದು.

ಹೌದು, ಈಕೆಯ ಹೆಸರು ಭಾಗ್ಯಶ್ರೀ. ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೂರಿಯಾಳದ ಕೇಶವ ಹಾಗೂ ರಾಜೀವಿ ದಂಪತಿಗಳ ಇಬ್ಬರು ಹೆಣ್ಣು ಮಕ್ಖಳಲ್ಲಿ ಕಿರಿಯವಳು ಭಾಗ್ಯಶ್ರೀ. ಈಕೆಯ ದೈಹಿಕ ಆರೋಗ್ಯದ ಪಾಲಿಗೆ ವಿಧಿ ಎಷ್ಟೇ ಮುನಿಸಿಕೊಂಡಿದ್ದರೂ ಹತ್ತನೇ ತರಗತಿ ಪರೀಕ್ಷೆಯಲ್ಲಿ 471 ಅಂಕಗಳನ್ನು ಪಡೆದು ಉತ್ತೀರ್ಣಳಾದ ಭಾಗಶ್ರೀ ಎಲ್ಲರಿಗೂ ಮಾದರಿಯಾಗಿದ್ದಾಳೆ.

ಇದೊಂದು ತೀರಾ ಬಡಕುಟುಂಬ. ಆದರೆ ಸುಂದರ ನಾಳೆಯ ಕನಸುಗಳನ್ನು ಹೊತ್ತುಕೊಂಡು ಛಲದಿಂದ ಬದುಕು ಕಟ್ಟಿಕೊಳ್ಳುತ್ತಿದೆ. ಅಂದ ಹಾಗೆ ಭಾಗ್ಯಶ್ರೀಯ ತಂದೆಗೆ ಸೊಂಟದಿಂದ ಕೆಳಗೆ ಬಲವೇ ಇಲ್ಲ. ಇದೇ ಸಮಸ್ಯೆ ಕಿರಿಯ ಮಗಳು ಭಾಗ್ಯಶ್ರೀಗೂ ಬಂದಾಗ ಹೆತ್ತವರ ಸಂಕಟ ಹೇಳತೀರದು. ಹಾಗೆಂದು ಕಣ್ಣೀರು ಹಾಕುತ್ತಾ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಮಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ಟೊಂಕ ಕಟ್ಟಿ ನಿಂತರು ಅವಳ ತಾಯಿ ರಾಜೀವಿ. ಅಂಗನವಾಡಿಯಿಂದ ಹತ್ತನೇ ತರಗತಿಯವರೆಗೂ ಮಗಳನ್ನು ಎತ್ತಿಕೊಂಡೇ ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಮಗಳ ಶಾಲೆಯಲ್ಲಿಯೇ ಕುಳಿತು ಅವಳ ಮೂಲಭೂತ ಅಗತ್ಯಗಳನ್ನು ಗಮನಿಸುತ್ತಿದ್ದರು. ಅಲ್ಲಿ ಸುಮ್ಮನೆ ಕುಳಿತಿರಲು ಸಾಧ್ಯವಾಗಲೆ ಬೀಡಿ ಕಟ್ಟುವ ಕಾಯಕವನ್ನೇ ಮಾಡುತ್ತಾ ಒಂದಿಷ್ಟು ಸಂಪಾದನೆಯ ಮಾರ್ಗವನ್ನೂ ಮಾಡಿಕೊಂಡಿದ್ದಾರೆ. ಮೊದಮೊದಲು ಶಾಲೆಯಲ್ಲಿ ಬೀಡಿ ಕಟ್ಟುವ ಬಗ್ಗೆ ವಿರೋಧ ವ್ಯಕ್ತವಾದರೂ ಅಲ್ಲಿನ ಶಿಕ್ಷಕಿಯರ ಮತ್ತು ಆಡಳಿತ ಮಂಡಳಿಯ ಉದಾರ ಮನಸ್ಸಿನಿಂದಾಗಿ ಅವರು ಸಮಯ ಕಳೆಯುವುದು ಸಾಧ್ಯವಾಯಿತು.

ಲೊರೆಟ್ಟೊ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈ ಹುಡುಗಿಯನ್ನು ಅಮ್ಮ ಆಟೋದಲ್ಲಿಯೇ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಆಟೋಗೆ ತಿಂಗಳಿಗೆ 1,500 ರೂಪಾಯಿ ಬಾಡಿಗೆ. ತಂದೆ ಮನೆಯಲ್ಲಿಯೇ ಅಂಗಡಿಯನ್ನು ನಡೆಸಿಕೊಂಡಿದ್ದಾರೆ. ಸಣ್ಣ ಅಂಗಡಿ ಬರುವ ಆದಾಯ ಅಷ್ಟಕಷ್ಟೆ. ಹಿರಿಯ ಮಗಳು ವಿದ್ಯಾಶ್ರೀಗೂ ಸ್ವಲ್ಪ ಕಾಲಿನ ಸಮಸ್ಯೆ ಇದೆ. ಅವಳು ಎಸ್.ವಿ.ಎಸ್. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಗ ಭಾಗ್ಯಶ್ರೀ ಹತ್ತನೇ ತರಗತಿಯಲ್ಲಿ ಮಗಳು ಒಳ್ಳೆಯ ಅಂಕಗಳನ್ನೇ ತೆಗೆದುಕೊಂಡಿದ್ದಾಳೆ ಎನ್ನುವುದು ಅವರೆಲ್ಲರಿಗೂ ಖುಷಿಯ ವಿಷಯ. ಆದರೆ ಅವರ ಖುಷಿಯನ್ನು ನೋಡದ ವಿಧಿ ಅವರಿಗೆ ಮತ್ತೊಮ್ಮೆ ಏಟು ಕೊಟ್ಟಿದೆ. ಭಾಗ್ಯಶ್ರೀಯ ತಂದೆಯ ತಾಯಿ ಸೌಖ್ಯವಿಲ್ಲದೆ ಮಲಗಿದ ಪರಿಸ್ಥಿತಿಯಲ್ಲಿ ಇದ್ದು, ಅವರ ಯೋಗಕ್ಷೇಮವನ್ನೂ ರಾಜೀವಿಯವರೇ ನೋಡಿಕೊಳ್ಳಬೇಕಿದೆ. ಈ ಎಲ್ಲಾ ಸಂಕಷ್ಟಗಳ ನಡುವೆ ಬುಧವಾರವಷ್ಟೇ ಭಾಗ್ಯಶ್ರೀಯನ್ನು ಬಂಟ್ವಾಳ ಎಸ್ವಿಎಸ್ ಕಾಲೇಜಿಗೆ ದಾಖಲಿಸಿದ್ದಾರೆ. ಪ್ರತಿದಿನ ರಿಕ್ಷಾದಲ್ಲೇ ಹೋಗಿ ಬರಬೇಕಾದ ಅನಿವಾರ್ಯತೆಯೂ ಇದ್ದು, ಪ್ರತೀ ತಿಂಗಳು 5ರಿಂದ 6 ಸಾವಿರ ಕೇವಲ ಕಾಲೇಜಿಗೆ ತೆರಳಲು ರಿಕ್ಷಾಕ್ಕೆ ವೆಚ್ಚವಾಗಲಿದೆ. ಅದನ್ನು ಹೊಂದಿಸಿಕೊಳ್ಳುವುದು ಈ ಬಡಕುಟುಂಬದ ಪಾಲಿಗೆ ಕಷ್ಟಕರ ವಿಷಯ. ಆದರೂ ಅಕ್ಕನಂತೇ ಕಾಮರ್ಸ್ ಕಲಿಯಬೇಕು ಎನ್ನುವ ಭಾಗ್ಯಶ್ರೀಯ ಹಂಬಲಕ್ಕೆ ಹೆತ್ತವರು ಬೆಂಬಲವಾಗಿ ನಿಂತಿದ್ದಾರೆ. ಇಂತಹಾ ಪ್ರತಿಭೆಗಳಿಗೆ ಸಮಾಜದ ದಾನಿಗಳ ನೆರವಿನ ಅಗತ್ಯವಿದೆ. ನೆರವು ಒದಗಿಸುವವರು ದೂರವಾಣಿ ಸಂಖ್ಯೆ 7259513180 ಅನ್ನು ಸಂಪರ್ಕಿಸಬಹುದು. ಅಥವಾ ಸಿಂಡಿಕೇಟ್ ಬ್ಯಾಂಕ್ ನ ಬಂಟ್ವಾಳ ಶಾಖೆಯ ಖಾತೆ ಸಂಖ್ಯೆ 013722100128960 (ifsc no:SYNB:0000137) ಹಣ ಜಮೆ ಮಾಡಬಹುದು.

See also  ಕಲ್ಲಮುಂಡ್ಕೂರು: ಕೆಸರ್ದ ಕಂಡೊಂಡು ಆಟಿಡ್ ಒಂಜಿ ದಿನ

ಭಾಗ್ಯಶ್ರೀಯದ್ದು ತುಂಬಾ ಬಡ ಕುಟುಂಬ. ಅವರ ಪರಿಸ್ಥಿತಿ ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ಆದರೆ ಸಾಧಿಸುವ ಛಲ ಅವರಲ್ಲಿದೆ. ಭಾಗ್ಯಶ್ರೀ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳನ್ನೇ ಪಡೆದಿದ್ದಾಳೆ. ಅವಳು ಉತ್ತಮ ವಿದ್ಯಾಭ್ಯಾಸವನ್ನು ಪಡೆಯಲಿ. ಅದಕ್ಕಾಗಿ ಎಲ್ಲರ ಸಹಕಾರ ಸಿಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.
ನಾಗೇಶ್ ದುರ್ಗಾನಗರ ಕೂರಿಯಾಳ

500 ರ ಮೇಲೆ ಅಂಕಗಳನ್ನು ತೆಗೆಯುವ ಭರವಸೆ ಇತ್ತು. ಆದರೆ ನಿರೀಕ್ಷೆಯಷ್ಟು ಅಂಕಗಳು ಬರಲಿಲ್ಲ. ಆದರೂ ಇಷ್ಟು ಅಂಕಗಳು ಬಂದಿರುವುದು ಖುಷಿ ತಂದಿದೆ: ಭಾಗ್ಯಶ್ರೀ

ತುಂಬಾ ಕಷ್ಟ ಪಡುವ ಹುಡುಗಿ. ಅಂಗವೈಕಲ್ಯವಿದ್ದರೂ ಯಾವತ್ತೂ ದುಃಖಿಸಿದವಳಲ್ಲ. ಸದಾಕಾಲ ಸಂತೋಷದಿಂದ ಇರುವವಳು. 7ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ 8 ನೇ ತರಗತಿಗೆ ಆಂಗ್ಲಮಾಧ್ಯಮಕ್ಕೆ ಬಂದಾಗ ಮೊದಮೊದಲು ಕಷ್ಟವಾದರೂ ಅದನ್ನೆಲ್ಲ ಮೀರಿ ಇಂದು ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ನಮ್ಮೆಲ್ಲರ ಪಾಲಿಗೆ ಅವಳು ಅಚ್ಚುಮೆಚ್ಚಿನ ಹುಡುಗಿಯಾಗಿದ್ದಾಳೆ.
ವಾಯ್ಲೆಟ್ ರೋಡ್ರಿಗಸ್, ಶಿಕ್ಷಕಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು