News Kannada
Thursday, October 06 2022

ಕರಾವಳಿ

ಮಂಗಳೂರು ವಿಮಾನ ದುರಂತದಲ್ಲಿ ಮಡಿದವರಿಗೆ ಕೊನೆಗೂ ನಿರ್ಮಾಣವಾಯಿತು ಸ್ಮಾರಕ - 1 min read

Photo Credit :

ಮಂಗಳೂರು ವಿಮಾನ ದುರಂತದಲ್ಲಿ ಮಡಿದವರಿಗೆ ಕೊನೆಗೂ ನಿರ್ಮಾಣವಾಯಿತು ಸ್ಮಾರಕ

ಮಂಗಳೂರು: 158 ಮಂದಿಯನ್ನು ಬಲಿ ತೆಗೆದುಕೊಂಡು ಇಡೀ ದೇಶವನ್ನೇ ತಲ್ಲಣಗೊಳಿಸಿದ ಮಂಗಳೂರು ವಿಮಾನ ದುರಂತ ನಡೆದು 8 ವರ್ಷಗಳ ಬಳಿಕ ಮಡಿದವರ ನೆನಪಿಗಾಗಿ ಕೊನೆಗೂ ಸ್ಮಾರಕ ನಿರ್ಮಾಣವಾಗಿದೆ. ಸ್ಮಾರಕ ವಿಚಾರಕ್ಕೆ ಸಂಬಂಧಸಿದಂತೆ ಹಲವು ವರ್ಷಗಳಿಂದ ತಕರಾರುಗಳು ನಡೆಯುತ್ತಿತ್ತು. ಇದೀಗ ಕೊನೆಗೂ ಈ ಸ್ಮಾರಕ ನಿರ್ಮಾಣವಾಗಿದೆ.

2010 ಮೇ 22ರ ಕರಾವಳಿ ಸುದ್ದಿಗೆ ದೇಶ ತಲ್ಲಣ:
ಕರಾವಳಿ 2010 ಮೇ 22 ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಎರ್‌ಇಂಡಿಯಾ ಎಕ್ಸ್‌ಪ್ರೆಸ್‌ 812 ವಿಮಾನ ರನ್‌ ವೇಗೆ ಇಳಿಯುವಾಗ ಆಕಸ್ಮಿಕ ಬೆಂಕಿ ತಗುಲಿ ಅಪಘಾತಕ್ಕೀಡಾಗಿತ್ತು. ಈ ಭೀಕರ ದುರಂತದಲ್ಲಿ 158 ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ 6 ಮಂದಿ ವಿಮಾನ ಸಿಬ್ಬಂದಿಯೂ ಇದ್ದರು. ಈ ಸುದ್ದಿಗೆ ಇಡೀ ದೇಶವೇ ತಲ್ಲಣವಾಗಿತ್ತು. ದುರ್ಘಟನೆಯಲ್ಲಿ 8 ಮಂದಿ ಪ್ರಾಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು ಈ ಘಟನೆ ನಡೆದು ಇಂದಿಗೆ 8 ವರ್ಷಗಳು ಕಳೆದಿವೆ. ಆದರೆ ಕುಟುಂಬಿಕರ ನೋವು ಇನ್ನೂ ಮರೆಯಲಾಗದಷ್ಟು ಜೀವಂತವಾಗಿದೆ.

ಸ್ಮಾರಕ ನೀರ್ಮಾಣಕ್ಕೆ ತೀರ್ಮಾಣ: ಪ್ರಾರಂಭದಲ್ಲಿ ವಿಮಾನ ದುರಂತದಲ್ಲಿ ಮಡಿದವರಿಗೆ ದುರ್ಘಟನೆ ನಡೆದ ಸ್ಥಳದಲ್ಲೇ ಸ್ಮಾರಕ ನಿರ್ಮಿಸಬೇಕೆಂಬ ತೀರ್ಮಾಣವನ್ನು ಕೈಗೊಂಡು ಮಡಿದವರ ಹೆಸರುಗಳನ್ನು ಶಿಲೆಗಳಲ್ಲಿ ಬರೆದು ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ಆದರೆ ಆ ಬಳಿಕ ಆ ಜಾಗ ವ್ಯಕ್ತಿಗೆ ಸೇರಿದ್ದರಿಂದ ವಿವಾದ ತಕರಾರುಗಳು ಶುರುವಾಗಬಿಟ್ಟಿತ್ತು. ಕೆಲವರ ತೀರ್ಮಾಣಕ್ಕೆ ಪ್ರತಿರೋಧಗಳು ಬರುತ್ತಿದ್ದಂತ್ತೆ ಸ್ಮಾರಕ ನಿರ್ಮಾಣ ಯೋಜನೆ ಮುಂದೂಡುತ್ತಲೆ ಹೋಯಿತು. ಕೆಲವರು ವಿಮಾನ ನಿಲ್ದಾಣ ಪರಿಸರದಲ್ಲೇ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿದರೆ, ಇನ್ನೂ ಕೆಲವರು ವಿಮಾನ ಬಿದ್ದ ಜಾಗವನ್ನೇ ಸರಕಾರ ಖಾಸಗಿಯವರಿಂದ ಪಡೆದು ಅಲ್ಲಿ ಸ್ಮಾರಕ ನಿರ್ಮಿಸಬೇಕೆಂದು ವಾದ ಮುಂದಿಟ್ಟಿದ್ದರು.

ಆದರೆ ಈ ಎರಡೂ ಪ್ರಸ್ತಾವನೆಗಳಿಗೆ ಜಿಲ್ಲಾಡಳಿತದಿಂದ ಒಪ್ಪಿಗೆ ಸೂಚಿಸದ ಹಿನ್ನೆಲೆ ಕೊನೆಗೆ ಕೂಳೂರು ಸಮೀಪದ ತಣ್ಣೀರುಬಾವಿಗೆ ತೆರಳುವ ರಸ್ತೆ ಪಕ್ಕದ 90 ಸೆಂಟ್ಸ್‌ ಜಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ವಿಮಾನ ನಿಲ್ದಾಣ ಪ್ರಾಕಾರ ಹಾಗೂ ನವಮಂಗಳೂರು ಬಂದರು ಮಂಡಳಿ ಜಂಟಿ ಸಹಯೋಗದಲ್ಲಿ ಈ ಸ್ಮಾರಕ ನಿರ್ಮಾಣ ಯೋಜನೆಯನ್ನು ಹಮ್ಮಿಕೊಂಡಿತ್ತು. ಸುಮಾರು 30ಲಕ್ಷ ರೂಪಾಯಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣವನ್ನು ಕೈಗೊಳ್ಳಲಾಯಿತು.

ಪ್ರತಿ ವರ್ಷ ಶ್ರದ್ದಾಂಜಲಿ: ಸ್ಮಾರಕದಲ್ಲಿ ಪ್ರತಿ ವರ್ಷ ದುರಂತದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಲಿದೆ.

ಇನ್ನೂ ಸಿಕ್ಕಿಲ್ಲ ಪರಿಹಾರ: ಘಟನೆ ನಡೆದು 8 ವರ್ಷಗಳೂ ಕಳೆದರೂ ಮಡಿದವರ ಕುಟುಂಬದವರಿಗೆ ಮಾತ್ರ ಏರ್‌ ಇಂಡಿಯಾ ಗೌರವಯುತ ಪರಿಹಾರ ನೀಡಿಲ್ಲ. ಇದರಿಂದ ಸಂತ್ರಸ್ತರು ಮತ್ತಷ್ಟು ನೋವು ಪಡುವಂತೆ ಮಾಡಿದೆ ಎಂದು ನೊಂದವರ ಮಾತು.

 

See also  9ನೇ ತರಗತಿಯ ಅಪ್ರಾಪ್ತೆ ಮೇಲೆ ಮೂರು ಮಂದಿಯಿಂದ ಅತ್ಯಾಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು