News Kannada
Saturday, October 01 2022

ಕರಾವಳಿ

ಹೆಚ್ ಡಿಕೆ ರೈತವಿರೋಧಿ ನೀತಿ ವಿರುದ್ಧ ಬೆಳ್ತಂಗಡಿಯಲ್ಲಿ ಪ್ರತಿಭಟನೆ - 1 min read

Photo Credit :

ಹೆಚ್ ಡಿಕೆ ರೈತವಿರೋಧಿ ನೀತಿ ವಿರುದ್ಧ ಬೆಳ್ತಂಗಡಿಯಲ್ಲಿ ಪ್ರತಿಭಟನೆ

ಬೆಳ್ತಂಗಡಿ: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಧರಣಿ ಹಾಗೂ ಪ್ರತಿಭಟನೆ ಸೋಮವಾರ ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆಯಿತು.

ಶಾಸಕ ಹರೀಶ ಪೂಂಜ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ರೈತರ ಸಾಲವನ್ನು ಅಧಿಕಾರವನ್ನು ಸ್ವೀಕರಿಸಿದ 24 ಗಂಟೆಯೊಳಗೆ ಮನ್ನಾ ಮಾಡುವುದಾಗಿ ಘೋಷಿಸಿದ್ದ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಯಡಿಯೂರಪ್ಪ ನುಡಿದಂತೆ ನಡೆದಿದ್ದಾರೆ. ಆದರೆ ಅಧಿಕಾರ ಸಿಗಲಿಲ್ಲ. ಇವರಿಗೆ ಅಧಿಕಾರ ಸಿಕ್ಕಿದ್ದರೂ ರೈತರ ಸಹಕಾರಿ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಮದ ಪಡೆದ ಸಾಲವನ್ನು ಮನ್ನಾ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದರು.

ರೈತರ ಹೆಸರಲ್ಲಿ ಮತ ಪಡೆದು ರೈತರಿಗೆ ಮೋಸ ಮಾಡಬೇಡಿ. ಈಗಾಗಲೇ ಬರಗಾಲದ ಲಕ್ಷಣಗಳು ಕಾಣುತ್ತಿದ್ದು ಬೆಳೆ ಹಾನಿ, ನಷ್ಟಗಳು ರೈತರಿಗೆ ಉಂಟಾಗುತ್ತಿದೆ. ರೈತರ ಸಾವು-ನೋವುಗಳಿಗೆ ನೀವೇ ಕಾರಣ ಆಗುತ್ತೀರಿ ಎಂದ ಅವರು, ಬಿಜೆಪಿ ರೈತರ ಪರವಾಗಿ, ಅವರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ. ರೈತರ ಸುಖ ಕಷ್ಟದಲ್ಲಿ ಭಾಗಿಯಾಗಿ ಅವರಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಿದೆ. ರೈತರಿಗೆ ನ್ಯಾಯ ಸಿಗುವವರೆಗೂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುತ್ತೇವೆ ಎಂದರು.

ಬೆಳಗ್ಗಿನಿಂದ ನಗರದ ಬಿಜೆಪಿ ಚುನಾವಣಾ ಕಚೇರಿಯ ಮುಂಭಾಗದಲ್ಲಿ ರೈತ ನೀತಿಯನ್ನು ವಿರೋಧಿಸಿ ಧರಣಿ ನಡೆಸಿದರು. ಅಲ್ಲಿಂದ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಪ್ರತಿಭಟನಾಕಾರರು ಇಲ್ಲಿಯೂ ಧರಣಿ ನಡೆಸಿದರು. ಬಳಿಕ ಬೆಳ್ತಂಗಡಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು.

ಬಿಜೆಪಿ ಮಂಡಲ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು, ರೈತ ಮೋರ್ಚಾದ ತಾಲೂಕು ಅಧ್ಯಕ್ಷ ದಿನೇಶ ಗೌಡ ಮಲವಂತಿಗೆ, ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ತಾ.ಪಂ. ಸದಸ್ಯರಾದ ಶಶಿಧರ ಎಂ., ಸುಧಾಕರ ಬಿ.ಎಲ್., ಲಕ್ಷ್ಮೀನಾರಾಯಣ, ವಿವಿಧ ಸಿ.ಎ. ಬ್ಯಾಂಕಿನ ಅಧ್ಯಕ್ಷರುಗಳಾದ ವಸಂತ ಮಜಲು, ರಾಜೀವ ರೈ, ನಾರಾಯಣ ಗೌಡ, ಬಿಜೆಪಿ ಮುಖಂಡರುಗಳಾದ ಪ್ರಸಾದ್ ಕುಮಾರ್, ಪದ್ಮನಾಭ ಅರ್ಕಜೆ, ಬಾಲಕೃಷ್ಣ ಶೆಟ್ಟಿ, ರತ್ನವರ್ಮ ಜೈನ್, ಕೇಶವ ಕನ್ಯಾಡಿ, ನಾರಾಯಣ ಆಚಾರ್, ಪುಷ್ಪಾ ಶೆಟ್ಟಿ, ಹರೀಶ ಸಾಲಿಯಾನ್, ಗಿರೀಶ ಡೋಂಗ್ರೆ, ಸಂತೋಷ್ ಲಾಯಿಲ, ಜಯಂತ್ ಗೌಡ, ರಕ್ಷಿತ್ ಶೆಟ್ಟಿ, ರಾಮ್ ಪ್ರಸಾದ್, ಆನಂದ ಅಡೇಲು, ಜಗದೀಶ್ ಮೊದಲಾದವರು ಇದ್ದರು.

See also  ಕ್ರಿಶ್ಚಿಯನ್ ಫೆಲೋಶಿಫ್ ವತಿಯಿಂದ ಕ್ರಿಸ್ ಮಸ್ ಫೆಸ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು