News Kannada
Sunday, October 02 2022

ಕರಾವಳಿ

ಫಾಲ್ಸ್ ನಲ್ಲಿ ಚಿತ್ರ ನಿರ್ದೇಶಕ ಜಲಸಮಾಧಿಯಾಗಲು ಕಾರಣವೇನು? - 1 min read

Photo Credit :

ಫಾಲ್ಸ್ ನಲ್ಲಿ ಚಿತ್ರ ನಿರ್ದೇಶಕ ಜಲಸಮಾಧಿಯಾಗಲು ಕಾರಣವೇನು?

ಬೆಳ್ತಂಗಡಿ: ಜಲಪಾತವೊಂದರ ಬಳಿ ಚಲನಚಿತ್ರವೊಂದರ ಫ್ಲೆಕ್ಸ್ ಚಿತ್ರಕ್ಕಾಗಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಸಮತೋಲನ ತಪ್ಪಿ ನೀರಿಗೆ ಬಿದ್ದು ಚಿತ್ರ ನಿರ್ದೇಶಕನೊಬ್ಬ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕಡಿರುದ್ಯಾವರ ಗ್ರಾಮದ ಎರ್ಮಾಯಿ ಫಾಲ್ಸ್ ನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತಪಟ್ಟವರು ಕನಸು ಕಣ್ಣು ತೆರೆದಾಗ ಎಂಬ ಚಿತ್ರದ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಕಟೀಲ್ (35)ಎಂದು ಗುರುತಿಸಲಾಗಿದೆ. ಇವರು ಸತ್ಯನಾಥ ಪೈ ನಿರ್ಮಾಣದ ಗಂಧದ ಕುಡಿ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದ ಚಿತ್ರೀಕರಣ ಕೊನೆಗೊಂಡಿಥದರೂ ಅದರ ಪ್ರಚಾರಕ್ಕೆ ಬೇಕಾದ ಸುಂದರ ಪ್ರಾಕೃತಿಕ ದೃಶ್ಯಗಳ ಭಾವಚಿತ್ರಗಳನ್ನು ಜಲಪಾತದ ನೀರು ನಿಂತ ಕೆಳಗಿನ ಭಾಗದಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಶೆಟ್ಟಿ ಅವರು ನೀರಿನಲ್ಲಿ ನಿಂತು ಚಿತ್ರ ತೆಗೆಯುತ್ತಿದ್ದಂತೆ ಹಿಮ್ಮುಖವಾಗಿ ಬಂದ ಕಾರಣ ಆಳವಿದ್ದ ಜಾಗದಲ್ಲಿ ಕುಸಿತಕ್ಕೊಳಗಾದರು ಎಂದು ಹೇಳಲಾಗಿದೆ. ಇವರ ಜೊತೆ ಐದು ಮಂದಿ ಇದ್ದು ಅವರೆಲ್ಲಾ ಚಿತ್ರದ ತಂತ್ರಜ್ಞರಾಗಿದ್ದರು.

ಮುಳುಗಲು ಕಾರಣ: ಶೆಟ್ಟಿ ಮತ್ತು ಅವರ ತಂಡ ಮಂಗಳವಾರ ಉಜಿರೆಗೆ ಬಂದು ಅಲ್ಲಿ ವಸತಿ ಗೃಹದಲ್ಲಿದ್ದು ಬೆಳಿಗ್ಗೆ ಎರ್ಮಾಯಿಗೆ ತಲುಪಿದ್ದರು. ಚಿತ್ರೀಕರಣಕ್ಕೆ ಮೊದಲು ಶೆಟ್ಟಿ ಅವರು ಜಲಪಾತದ ಗುಂಡಿಯಲ್ಲಿ ಈಜಾಡಿದ್ದರು. ಬಳಿಕ ಬೆಳಕು ಹೆಚ್ಚಾದಂತೆ ಚಿತ್ರೀಕರಣ ಪ್ರಾರಂಭಿಸಿದ್ದರು. ಚಿತ್ರೀಕರಣಕ್ಕೆ ಮೊದಲು ಅವರು ರೋಬೋಟ್ ತರಹ ತನ್ನ ಇಡೀ ಶರೀರಕ್ಕೆ ವಿವಿಧ ರೀತಿಯ ವಿದ್ಯುತ್ ಪರಿಕರಗಳನ್ನು ಜೋಡಿಸಿಕೊಂಡಿದ್ದರು. ಹಲವಾರು ವಿವಿಧ ತಂತಿಗಳು ಅವರ ಶರೀರದ ಮೇಲೆ ಸುತ್ತಿಕೊಂಡಿದ್ದಲ್ಲದೆ, ಚಕ್ರಗಳು, ಮೀಟರ್ ಗಳು, ಕಬ್ಬಿಣದ ಕವಚ ಇತ್ಯಾದಿ ಯಂತ್ರೋಪಕರಣಗಳೊಂದಿಗೆ ಚಿತ್ರೀಕರಣಕ್ಕೆ ಪ್ರಾರಂಭಿಸಿದ್ದರು. ಪರಿಕರಗಳು ಸುಮಾರು 35 ಕಿ.ಲೋ ಭಾರವಿತ್ತು ಎಂದು ಸ್ಥಳೀಯರು ಹೇಳುತ್ತಿದ್ದರು. ಈ ರೀತಿಯ ಭಾರವಾದ ವಸ್ತುಗಳು ಇದ್ದ ಕಾರಣ ಅನಾಹುತ ಸಂಭವಿಸಿದೆ. ಅವರು ಈ ರೀತಿಯ ಪರಿಕರಗಳನ್ನು ಅವರು ಶರೀರಕ್ಕೆ ಯಾಕೆ ಧರಿಸಿದ್ದರು ಎಂಬುದು ಮಾತ್ರ ತಂತ್ರಜ್ಞರು ಹೇಳಬೇಕಷ್ಟೆ. ಮಂಗಳವಾರ ರಾತ್ರಿ ಭಾರೀ ಮಳೆ ಇದ್ದ ಕಾರಣ ಜಲಪಾತದಲ್ಲಿ ಭಾರೀ ನೀರು ಕೂಡ ಬೀಳುತ್ತಿತ್ತು.

ನಂತರ ಗುರುವಾಯನಕೆರೆ ಅಗ್ನಿಶಾಮಕದಳ ಸ್ಥಳಕ್ಕೆ ಬಂದರಾದರೂ ಈ ವೇಳೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದು ಬಳಿಕ ಶವವನ್ನು ಬೆಳ್ತಂಗಡಿ ಶವಾಗಾರಕ್ಕೆ ತರಲಾಯಿತು. ಈ ಬಗ್ಗೆ ನಿರ್ಲಕ್ಷ್ಯವಹಿಸಿದ ಕಾರಣಕ್ಕಾಗಿ ನಿರ್ಮಾಪಕ ಸತ್ಯೇಂದ್ರ ಎಂಬವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಬಸ್ ನಿಲ್ದಾಣದಿಂದ ಮುಂಡಾಜೆ ಮೂಲಕ ಕುಕ್ಕಾವಿಗೆ ಹೋಗಬೇಕು ಅಲ್ಲಿಂದ ಸುಮಾರು 2 ಕಿ.ಮೀ. ದೂರದಲ್ಲಿ ಎರ್ಮಾಯಿ ಫಾಲ್ಸ್ ಕಾಣಬರುತ್ತದೆ.

ಮೃತ ಸಂತೋಷ್ ಕ್ರೀಯಾಶೀಲ ವ್ಯಕ್ತಿತ್ವದವರಾಗಿದ್ದು, ನವೀನ ರೀತಿಯ ಕಲ್ಪನೆಗಳನ್ನು ಹೆಣೆದು ಚಿತ್ರತೆಗೆಯುವುದರಲ್ಲಿ ನಿಸ್ಸೀಮರಾಗಿದ್ದರು. ತಾನು ನಿರ್ದೇಶಿಸಿದ ಕನಸು ಕಣ್ಣು ತೆರೆದಾಗ ಚಿತ್ರವನ್ನು ಪ್ರಧಾನ ಮಂತ್ರಿ ಮೋದಿಯವರಿಗೆ ಕಳುಹಿಸಿದ್ದರು. ಪ್ರಧಾನಿಯವರು ಅವರಿಗೆ ಪ್ರಶಂಸಾ ಪತ್ರವನ್ನೂ ಕಳುಹಿಸಿದ್ದರು. ಇದೀಗ ಪ್ರತಿಭಾನ್ವಿತ ನಿರ್ದೇಶಕರೊಬ್ಬರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಂತಾಗಿದೆ.

See also  ಮಾದಕ‌ ವ್ಯಸನಿ ವಿದೇಶಿಗನ ಜಿಲ್ಲಾಸ್ಪತ್ರೆಗೆ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು