News Kannada
Tuesday, October 04 2022

ಕರಾವಳಿ

ಹಾಡಹಗಲೇ ತಲವಾರು ಹಿಡಿದು ಹಲ್ಲೆಗೆ ಯತ್ನಿಸಿದ ರಮಾನಾಥ ರೈ ಬೆಂಬಲಿಗ - 1 min read

Photo Credit :

ಹಾಡಹಗಲೇ ತಲವಾರು ಹಿಡಿದು ಹಲ್ಲೆಗೆ ಯತ್ನಿಸಿದ ರಮಾನಾಥ ರೈ ಬೆಂಬಲಿಗ

ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಬೆಂಬಲಿಗ ಎನ್ನಲಾದ ವ್ಯಕ್ತಿಯೊಬ್ಬ ಹಾಡಹಗಲೇ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ನಡೆಸಿರುವ ಘಟನೆಯು ಸೋಮವಾರ ಬಂಟ್ವಾಳದಲ್ಲಿ ನಡೆದಿದೆ.

ಸೋಮವಾರ ಬಂಟ್ವಾಳದ ನಿತ್ಯಾನಂದ ಮಂದಿರ ಬಳಿ ಸುರೇಂದ್ರ ಬಂಟ್ವಾಳ ಎಂಬಾತ ತಲವಾರಿನಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾನೆ.

ಘಟನೆಯಲ್ಲಿ ಬಿಜೆಪಿಯ ಕಾರ್ಯಕರ್ತರಾದ ಗಣೇಶ್ ಮತ್ತು ಪುಷ್ಪರಾಜ್ ಎಂಬವರು ತಲವಾರು ದಾಳಿಯಿಂದ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಇಬ್ಬರು ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ರಾತ್ರಿ ಬಡ್ಡಕಟ್ಟೆಯ ಕ್ಷೌರದಂಗಡಿಗೆ ನುಗ್ಗಿದ ಭುವಿತ್ ಶೆಟ್ಟಿ ನೇತೃತ್ವದ ಗುಂಪು ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸುರೇಂದ್ರ ಬಂಟ್ವಾಳ ನೇತೃತ್ವದ ತಂಡವು ಇಂದು ಭುವಿತ್ ಶೆಟ್ಟಿ ಗುಂಪಿನವರ ಮೇಲೆ ಹಲ್ಲೆಗೆ ಯತ್ನಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಎಸ್ ಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ಭುವಿತ್ ಶೆಟ್ಟಿ ತಂಡವು ಸುರೇಂದ್ರ ಬಂಟ್ವಾಳ ಸಂಬಂಧಿಗೆ ಹಲ್ಲೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಸುರೇಂದ್ರ ಬಂಟ್ವಾಳ ಹಲ್ಲೆಗೆ ಯತ್ನಿಸಿದ್ದಾನೆ. ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಹಿಂದೆ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳ ಕಳೆದ ಚುನಾವಣೆಯಲ್ಲಿ ರಮನಾಥ ರೈ ಅವರನ್ನು ಬೆಂಬಲಿಸಿದ್ದ ಎನ್ನಲಾಗಿದೆ. ಚಾಲಿಪೋಲಿಲು ತುಳು ಸಿನಿಮಾದಲ್ಲೂ ಈತ ನಟಿಸಿದ್ದ.

See also  ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ - ಪುತ್ತೂರು ಧಾರ್ಮಿಕ ಮಂದಿರಗಳಲ್ಲಿ ಹೈ ಅಲರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು