News Kannada
Sunday, September 25 2022

ಕರಾವಳಿ

ಸುಳ್ಯದಲ್ಲಿ ಮೂವರು ಶಂಕಿತ ನಕ್ಸಲರ ಭೇಟಿ- ಎಎನ್ಎಫ್, ಪೊಲೀಸ್ ಪರಿಶೀಲನೆ - 1 min read

Photo Credit :

 ಸುಳ್ಯದಲ್ಲಿ ಮೂವರು ಶಂಕಿತ ನಕ್ಸಲರ ಭೇಟಿ- ಎಎನ್ಎಫ್, ಪೊಲೀಸ್ ಪರಿಶೀಲನೆ

ಸುಳ್ಯ: ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿಗೆ ನಕ್ಸಲರೆಂದು ಶಂಕಿಸಲಾಗಿರುವ ಮೂವರು ಅಪರಿಚಿತರು ಭೇಟಿ ನೀಡಿ ಊಟ ಮಾಡಿ ತೆರಳಿದ ಘಟನೆ ವರದಿಯಾಗಿದೆ. ಈ ಕುರಿತು ಮಾಹಿತಿ ಪಡೆದ ನಕ್ಸಲ್ ನಿಗ್ರಹ ದಳ ಮತ್ತು ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ರಬ್ಬರ್ ಮರಗಳನ್ನು ಟ್ಯಾಪಿಂಗ್ ನಡೆಸುತ್ತಿರುವ ಕೇರಳದ ಥಾಮಸ್ ಎಂಬವರು ವಾಸಿಸುತ್ತಿದ್ದ ಕಾಡಂಚಿನಲ್ಲಿರುವ ಹಾಡಿಕಲ್ಲಿನ ಶೆಡ್ಗೆ ಮೂವರು ಅಪರಿಚಿತರು ಬಂದಿದ್ದಾರೆ ಎಂದು ಹೇಳಲಾಗಿದ್ದು, ಬಂದವರು ನಕ್ಸಲರಿರಬಹುದು ಎಂಬ ಶಂಕೆ ವ್ಯಾಪಕವಾಗಿ ಹರಡಿದೆ.

ಹಾಡಿಕಲ್ಲಿನ ಹೆಚ್.ಬಿ.ಜಯರಾಮ ಅವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ನಡೆಸುತ್ತಿರುವ ಥಾಮಸ್ ಅಲ್ಲೇ ಸಮೀಪದ ಶೆಡ್ ನಲ್ಲಿ ಒಬ್ಬರೇ ವಾಸವಿದ್ದರು. ಗುರುವಾರ ಸಂಜೆ ಏಳೂವರೆಯ ಹೊತ್ತಿಗೆ ಇಬ್ಬರು ಯುವತಿಯರು ಮತ್ತು ಓರ್ವ ಪುರುಷನಿದ್ದ ಶಸ್ತ್ರಧಾರಿಗಳಾದ ಮೂವರ ತಂಡ ಬಂದು ಇವರ ಕೊಠಡಿಯಲ್ಲಿದ್ದ ಊಟವನ್ನು ಪಡೆದು ಸೇವಿಸಿ ಮಾಡಿ ತೆರಳಿದರು ಎಂದು ಥಾಮಸ್ ಪೊಲೀಸರಲ್ಲಿ ಮಾಹಿತಿ ನೀಡಿದ್ದಾರೆ.

ಘಟನೆಯ ಬಳಿಕ ಥಾಮಸ್ ಅವರು ಜಯರಾಮ ಹಾಡಿಕಲ್ಲು ಮತ್ತಿತರರಲ್ಲಿ ತಿಳಿಸಿದ್ದು ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಶುಕ್ರವಾರ ಸುಳ್ಯ ವೃತ್ತ ನಿರೀಕ್ಷಕ ಆರ್.ಸತೀಶ್ ಕುಮಾರ್, ಎಸ್.ಐ ಮಂಜುನಾಥ್ ಮತ್ತಿತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಂದಾಜು 25-30 ವರುಷ ಪ್ರಾಯದ ಇಬ್ಬರು ಯುವತಿಯರು ಮತ್ತು ಒಬ್ಬ ಪುರುಷನಿದ್ದ ತಂಡ ಯಾವುದೇ ಸಮವಸ್ತ್ರ ಧರಿಸಿರಲಿಲ್ಲ. ಇವರಲ್ಲಿ ಬಂದೂಕು ಇತ್ತು, ಸಾಮಾನ್ಯ ವಸ್ತ್ರ ಧರಿಸಿದ್ದ ಇವರು ಹವಾಯ್ ಚಪ್ಪಲಿ ತೊಟ್ಟಿದ್ದರು. ತನ್ನಲ್ಲಿ ಏನೂ ಕೇಳಿಲ್ಲ ಮತ್ತು ಯಾವುದೇ ಮಾತನಾಡಿಲ್ಲ ನೇರವಾಗಿ ಬಂದು ಶೆಡ್ ನಲ್ಲಿದ್ದ ಅನ್ನವನ್ನು ಪಡೆದು ಸೇವಿಸಿ ತೆರಳಿದರು.

ಇವರಲ್ಲಿ ಆಯುಧಗಳು ಇದ್ದ ಕಾರಣ ಭಯಬೀತನಾಗಿ ಏನು ಮಾತನಾಡಲು ಸಾಧ್ಯವಾಗಿಲ್ಲ ಎಂದು ಥಾಮಸ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರ ಶೆಡ್ ನ ಪಕ್ಕದಲ್ಲಿ ಇತರ ಮನೆಗಳಿದ್ದರೂ ಅಲ್ಲಿಗೆ ಅಪರಿಚಿತ ತಂಡ ತೆರಳಿಲ್ಲ. ಆಗಮಿಸಿದವರು ನಕ್ಸಲರೇ ಎಂಬುದನ್ನು ಖಚಿತಪಡಿಸಲು ಮತ್ತು ನಕ್ಸಲರಾಗಿದ್ದಲ್ಲಿ ಅವರ ಪತ್ತೆಗೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ಮತ್ತು ಕಾರ್ಯಾಚರಣೆ ನಡೆಸಲಾಗುತ್ತಿದೆ. ಥಾಮಸ್ ಅವರಲ್ಲಿ ವಿವರಗಳನ್ನು ಕಲೆ ಹಾಕಿದ ಪೊಲೀಸ್ ಮತ್ತು ಎಎನ್ಎಫ್ ನಕ್ಸಲರ ಪಟ್ಟಿಯಲ್ಲಿರುವವರ ಭಾವಚಿತ್ರಗಳನ್ನು ತೋರಿಸಿ ಪತ್ತೆಗೆ ಪ್ರಯತ್ನ ನಡೆಸಲಾಯಿತು. ಭಾವಚಿತ್ರ ನೋಡಿ ಬಂದವರನ್ನು ಯಾರೆಂದು ಗುರುತು ಹಿಡಿಯಲು ಇವರಿಂದ ಸಾಧ್ಯವಾಗಿಲ್ಲ ಎಂದು ಸುಳ್ಯ ವೃತ್ತ ನಿರೀಕ್ಷಕ ಆರ್.ಸತೀಶ್ ಮಾರ್ ತಿಳಿಸಿದ್ದಾರೆ.

ಎಎನ್ಎಫ್ ತಂಡ ಪರಿಶೀಲನೆ: ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ನೇತೃತ್ವದಲ್ಲಿ ಸುಳ್ಯ ಪೊಲೀಸರು ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಕ್ಸಲ್ ನಿಗ್ರಹ ದಳ ಆಗಮಿಸಿದೆ. ಎಎನ್ಎಫ್ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರ ನೇತೃತ್ವದಲ್ಲಿ ನಕ್ಸಲ್ ನಿಗ್ರಹ ದಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೊತೆಗೆ ಸುಳ್ಯ ಪೊಲೀಸರ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ಮಾಗದರ್ಶನ ನೀಡಿದ್ದಾರೆ.

See also  ರಾಮಮಂದಿರ ನಿರ್ಮಾಣಕ್ಕೆ 1 ಕೋಟಿ ಸಮರ್ಪಿಸಿದ ಎಸ್ ಸಿಡಿಸಿಸಿ ಬ್ಯಾಂಕ್ ಮತ್ತು ನವೋದಯ ಸ್ವ ಸಹಾಯ ಸಂಘ

ಸುಳ್ಯ ತಾಲೂಕಿನಲ್ಲಿ ಹಿಂದೆಯೂ ನಕ್ಸಲ್ ಹೆಜ್ಜೆ ಗುರುತು: ಸುಳ್ಯ ತಾಲೂಕಿನ ಸರಹದ್ದಿನ ಅರಣ್ಯದಂಚಿನಲ್ಲಿ ಈ ಹಿಂದೆಯೂ ನಕ್ಸಲರ ಚಲನ ವಲನ ಕಂಡು ಬಂದಿದ್ದು ಹೆಜ್ಜೆ ಗುರುತು ಮೂಡಿತ್ತು. ಕೆಲವು ತಿಂಗಳ ಹಿಂದೆ ಸುಳ್ಯ ಮತ್ತು ಕೊಡಗು ಜಿಲ್ಲೆಗಳ ಗಡಿ ಪ್ರದೇಶವಾದ ಕೊನಾಡಿಗೆ ನಕ್ಸಲರ ತಂಡ ಆಗಮಿಸಿತ್ತು. ಈ ಪ್ರದೇಶಕ್ಕೆ ಆಗಮಿಸಿದ ತಂಡ ಅಕ್ಕಿ ಮತ್ತು ಇತರ ಸಾಮಾನುಗಳನ್ನು ಪಡೆದು ತೆರಳಿತ್ತು. ಈ ಹಿನ್ನಲೆಯಲ್ಲಿ ಎಎನ್ಎಫ್, ಪೊಲೀಸ್ ಕೆಲವು ದಿನಗಳ ಕಾಲ ವ್ಯಾಪಕ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಕೆಲವು ವರ್ಷಗಳ ಹಿಂದೆ ಸುಬ್ರಹ್ಮಣ್ಯ ಕುಲ್ಕುಂದ ಸಮೀಪದ ಪಳ್ಳಿಗದ್ದೆ, ಕೈಕಂಬ, ಚೇರು ಪ್ರದೇಶಗಳೀಗೆ ನಕ್ಸಲರ ತಂಡ ಆಗಮಿಸಿತ್ತು. ಬಳಿಕದ ದಿನಗಳಲ್ಲಿ ಬಿಸಿಲೆ, ಭಾಗ್ಯಾರಣ್ಯ ಭಾಗದಲ್ಲಿ ನಡೆದ ನಕ್ಸಲ್ ಕೂಂಬಿಂಗ್ನಲ್ಲಿ ನಕ್ಸಲ್ ಕಾರ್ಯಕರ್ತನೊಬ್ಬ ಎಎನ್ಎಫ್ ಪಡೆಯ ಗುಂಡಿಗೆ ಬಲಿಯಾದಾಗ ಈ ಪ್ರದೇಶದಲ್ಲಿ ನಕ್ಸಲ್ ಚಲನವಲನ ದೃಢಪಟ್ಟಿತ್ತು. ಬಳಿಕದ ಕೆಲವು ವರ್ಷ ಇಲ್ಲಿ ಕಾಣಿಸಿಕೊಳ್ಳದೇ ಇದ್ದ ನಕ್ಸಲರು ಕಳೆದ ವರ್ಷ ಶಿರಾಡಿ ಮತ್ತಿತರ ಪ್ರದೇಶಗಳಲ್ಲಿ ಪ್ರತ್ಯಕ್ಷರಾಗಿದ್ದರು. ಇದೀಗ ಮಡಪ್ಪಾಡಿಗೆ ನಕ್ಸಲರೆಂದು ಶಂಕಿಸುವ ತಂಡ ಬಂದಿರುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು