News Kannada
Saturday, October 01 2022

ಕರಾವಳಿ

ಧರ್ಮಸ್ಥಳದಲ್ಲಿ ರಿಲಾಕ್ಸ್ ಮೂಡ್ ನಲ್ಲಿ ಮಾಜಿ ಸಿಎಂ - 1 min read

Photo Credit :

ಧರ್ಮಸ್ಥಳದಲ್ಲಿ ರಿಲಾಕ್ಸ್ ಮೂಡ್ ನಲ್ಲಿ ಮಾಜಿ ಸಿಎಂ

ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಿಲಾಕ್ಸ್ ಅಗಲು ಧರ್ಮಸ್ಥಳ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಶನಿವಾರ ತಡರಾತ್ರಿ ದಾಖಲಾಗಿದ್ದು ಭಾನುವಾರದಿಂದ ಅವರು ಶಾಂತಿವನದ ಸಾಧಕರಲ್ಲೊಬ್ಬರಾಗಲಿದ್ದಾರೆ.

ವಿಧಾನಸಭಾ ಚುನಾವಣೆಯಿಂದಾಗಿ ಆಗಿರುವ ಸುಸ್ತನ್ನು ಕಳೆಯಲು ಹಾಗು ವಿವಿಧ ಪ್ರಕೃತಿ ಚಿಕಿತ್ಸೆಯನ್ನು ಪಡೆಯಲು ಅವರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಶಾಂತಿವನಕ್ಕೆ ರಾತ್ರಿ ಹತ್ತು ಗಂಟೆಯ ವೇಳೆಗೆ ತಲುಪಿದ್ದಾರೆ.

ಶಾಂತಿವನದಲ್ಲಿ ಅವರು ಸುಮಾರು ಹತ್ತರಿಂದ ಹದಿನೈದು ದಿನಗಳ ಕಾಲ ಸಾಧಕರಾಗಿ ಇದ್ದು, ಅಲ್ಲಿನ ಎಣ್ಣೆ ಮರ್ದನ, ಪೃಥ್ವಿ (ಮಡ್) ಚಿಕಿತ್ಸೆ, ಹಬೆ ಸ್ನಾನ, ಫಿಸಿಯೋಥೆರಪಿ, ಆಂಕ್ಚುಪಂಕ್ಚರ್, ಜಲ ಚಿಕಿತ್ಸೆ, ಆಕಾಶ ಚಿಕಿತ್ಸೆ, ವಾಯು ಚಿಕಿತ್ಸೆ, ಸೂರ್ಯ/ಅಗ್ನಿ ಚಿಕಿತ್ಸೆ, ಅಯಸ್ಕಾಂತ ಚಿಕಿತ್ಸೆ, ಯೋಗ ಥೆರಪಿ, ಡಯಟ್ ಥೆರಪಿ, ಧ್ಯಾನ, ಪ್ರಾಣಾಯಮ ಮೊದಲಾದ ಚಿಕಿತ್ಸೆಗಳನ್ನು ಅನುಭವಿಸಲಿದ್ದಾರೆ. ಜೂ. 21 ರಂದು ಧರ್ಮಸ್ಥಳದಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಂದು ಅವರು ಅತಿಥಿಗಳಾಗಿರುತ್ತಾರೆ ಎಂದು ಹೇಳಲಾಗುತ್ತಿದೆ.

ಚಿಕಿತ್ಸೆ ಪಡೆದು ಮತ್ತೆ ಮರಳಿ ಬೆಂಗಳೂರಿಗೆ ಹೋಗುವ ಮುನ್ನಾದಿನ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸಿದ್ಧರಾಮಯ್ಯ ಅವರನ್ನು ಶಾಂತಿವನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ವೈದ್ಯಾಧಿಕಾರಿ ಪ್ರಶಾಂತ ಶೆಟ್ಟಿ ಅವರು ಸ್ವಾಗತಿಸಿದರು.

See also  ನಾಗರಿಕರ ಸಂಚಾರಕ್ಕೆ ವ್ಯವಸ್ಥೆ: ರಾಜೇಶ್ ನಾಯ್ಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು