News Kannada
Friday, September 30 2022

ಕರಾವಳಿ

ಮಡಪ್ಪಾಡಿಗೆ ಶಂಕಿತ ನಕ್ಸಲರು ಭೇಟಿ- ಮುಂದುವರಿದ ಕೂಂಬಿಂಗ್ - 1 min read

Photo Credit :

 ಮಡಪ್ಪಾಡಿಗೆ ಶಂಕಿತ ನಕ್ಸಲರು ಭೇಟಿ- ಮುಂದುವರಿದ ಕೂಂಬಿಂಗ್

ಸುಳ್ಯ: ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿಗೆ ನಕ್ಸಲರೆಂದು ಶಂಕಿಸಲಾಗಿರುವ ಮೂವರು ಅಪರಿಚಿತರು ಭೇಟಿ ನೀಡಿದ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ದಳ ಮತ್ತು ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಶುಕ್ರವಾರ ಆರಂಭವಾದ ಕೂಂಬಿಂಗ್ ನಿರಂತರ ನಾಲ್ಕನೇ ದಿನವೂ ಮುಂದುವರಿಯಿತು.

ಸುಮಾರು 50ಕ್ಕೂ ಹೆಚ್ಚು ಮಂದಿ ಎಎನ್ಎಫ್ ಸಿಬ್ಬಂದಿ ಮತ್ತು ದಕ ಜಿಲ್ಲಾ ಪೊಲೀಸರು ಮಡಪ್ಪಾಡಿ ಮತ್ತು ಸುತ್ತಲ ಅರಣ್ಯದಲ್ಲಿ ವಿವಿಧ ತಂಡಗಳಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿರುವುದರ ಜೊತೆಗೆ ನಕ್ಸಲರು ಈ ಹಿಂದೆ ಭೇಟಿ ನೀಡಿದ್ದ ಪಳ್ಳಿಗದ್ದೆ, ಗುಂಡ್ಯ, ಮತ್ತಿತರ ಕಡೆಗಳಲ್ಲಿಯೂ ಕುಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ರಾತ್ರಿ ಮೂರು ಜನರ ಸಶಸ್ತ್ರಧಾರಿಗಳ ತಂಡ ಮಡಪ್ಪಾಡಿಯ ಹಾಡಿಕಲ್ಲಿನಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿರುವ ಕೇರಳ ಮೂಲದ ಎ.ಜೆ.ಥಾಮಸ್ ಎಂಬವರು ವಾಸಿಸುವ ಶೆಡ್ಗೆ ಬಂದು ಬಂದೂಕು ತೋರಿಸಿ ಬೆದರಿಸಿ ಆಹಾರವನ್ನು ಸೇವಿಸಿ ಹೋಗಿದ್ದರು. ನಕ್ಸಲ್ ಕಾರ್ಯಕರ್ತರು ಭೇಟಿ ನೀಡಿರುವ ಸಂಶಯ ಉಂಟಾದ ಹಿನ್ನಲೆಯಲ್ಲಿ ಎಎನ್ಎಫ್ ಮತ್ತು ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

See also  ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಹಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು