News Kannada
Tuesday, September 27 2022

ಕರಾವಳಿ

ತೆರಿಗೆ ಪಾವತಿಸುವುದು ಕೂಡ ದೇಶಸೇವೆ: ಟಿ. ಕೃಷ್ಣಮೂರ್ತಿ - 1 min read

Photo Credit :

ತೆರಿಗೆ ಪಾವತಿಸುವುದು ಕೂಡ ದೇಶಸೇವೆ: ಟಿ. ಕೃಷ್ಣಮೂರ್ತಿ

ಉಜಿರೆ: ತೆರಿಗೆ ಪಾವತಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ತೆರಿಗೆ ಪಾವತಿ ಕೂಡ ದೇಶಸೇವೆ ಮಾಡಿದಂತೆ ಎಂದು ಎಸ್ ಡಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಟಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಎಸ್ ಡಿಎಂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಭಿತ್ತಿಪತ್ರಿಕೆ ಹಾಗೂ ಅರ್ಥಶಾಸ್ತ್ರ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮ ನೆಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಎಸ್ ಡಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಟಿ.ಕೃಷ್ಣಮೂರ್ತಿ ಮಾತನಾಡಿ, ಭಾರತದಲ್ಲಿ ಎಲ್ಲರೂ ಸರಿಯಾಗಿ ತೆರಿಗೆ ಪಾವತಿ ಮಾಡದಿರುವುದರಿಂದಲೇ ಕಪ್ಪುಹಣದ ಸಮಸ್ಯೆ ತಲೆದೋರುತ್ತಿದೆ. ಈ ಸಮಸ್ಯೆ ಹೊಸ ಪೀಳಿಗೆಯಿಂದಲಾದರೂ ಬದಲಾಗಬೇಕು. ನಮ್ಮ ದೇಶ ಅಭಿವೃದ್ಧಿ ಆಗಲು ಎಲ್ಲರೂ ಶಿಕ್ಷಣ ಪಡೆಯಬೇಕು. ಅರ್ಥಶಾಸ್ತ್ರದ ವಿದ್ಯಾರ್ಥಿಗಳಾಗಿ ನಾವು ಆರ್ಥಿಕ ಸಿದ್ಧಾಂತಗಳನ್ನು ಸರಿಯಾದ ರೀತಿಯಲ್ಲಿ ಅರಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ ಡಿಎಂ ಕಾಲೇಜಿನ ಪ್ರತಿಭಾವಂತ ಕಲಾವಿದ ಸುರೇಂದ್ರ ಜೈನ್ ನಾರಾವಿ ಭಿತ್ತಿಪತ್ರಿಕೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎ ಜಯಕುಮಾರ್ ಶೆಟ್ಟಿ, ಉಪನ್ಯಾಸಕರಾದ ಗಣರಾಜ್ ,ಅರ್ಥಶಾಸ್ತ್ರ ಸಂಘಟನೆಯ ವಿದ್ಯಾರ್ಥಿ ಸಂಯೋಜಕರಾದ ನಮಿತ ಜೋಯ್ಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಸ್ರಿಯಾ ಸ್ವಾಗತಿಸಿ, ರೆನಿ ನಿರೂಪಿಸಿ, ಮೀನಾಕ್ಷಿ ವಂದಿಸಿದರು.

See also  ರಸ್ತೆ ಸಮಸ್ಯೆಯಿಂದಾಗಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು