News Kannada
Friday, September 30 2022

ಕರಾವಳಿ

ರಾಜ್ಯ ಸರ್ಕಾರದ ಅಸಹಕಾರದಿಂದ ಕೇಂದ್ರದ ಯೋಜನೆಗಳಿಗೆ ಆಮೆಗತಿ: ನಳಿನ್ ಕುಮಾರ್ - 1 min read

Photo Credit :

ರಾಜ್ಯ ಸರ್ಕಾರದ ಅಸಹಕಾರದಿಂದ ಕೇಂದ್ರದ ಯೋಜನೆಗಳಿಗೆ ಆಮೆಗತಿ: ನಳಿನ್ ಕುಮಾರ್

ಬೆಳ್ತಂಗಡಿ: ಕೇಂದ್ರ ಸರಕಾರ ದ.ಕ. ಜಿಲ್ಲೆಗೆ ಹಲವು ಯೋಜನೆಗಳನ್ನು ಪ್ರಸ್ತುತಪಡಿಸಿದೆ. ಆದರೆ ರಾಜ್ಯ ಸರಕಾರದ ಅಸಹಕಾರದಿಂದ ಅಭಿವೃದ್ಧಿಯ ಪ್ರಗತಿ ಆಮೆಗತಿಯಲ್ಲಿ ಸಾಗುತ್ತಿದೆ. ಸಚಿವ ಸಂಪುಟದ ಬಗ್ಯೆಯೇ ಯೋಚನೆ ಮಾಡುವ ರಾಜ್ಯ ಸರಕಾರಕ್ಕೆ ಇನ್ನು ನಿದ್ದೆ ಬಿಟ್ಟಿಲ್ಲ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಆರೋಪಿಸಿದರು.

ಅವರು ಶನಿವಾರ ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಪತ್ರಿಕಾಗೋಷ್ಠಿ ಕರೆದು ರಾಜ್ಯ ಸರಕಾರದ ಕಾರ್ಯವೈಖರಿಯ ಬಗ್ಗೆ ಹರಿಹಾಯ್ದರು.

ಜಿಲ್ಲೆಗೆ ಕೇಂದ್ರದಿಂದ 15 ಸಾವಿರ ಕೋಟಿ ರೂ. ಅನುದಾನ ಬಂದಿದ್ದರೂ ರಾಜ್ಯ ಸರಕಾರದ ಆಮೆಗತಿಯ ಮನೋಭಾವದಿಂದಾಗಿ ಕೇಂದ್ರದ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ತ್ರಿಸ್ತರದ ಆಡಳಿತದ ಕ್ರಮವಿರುವುದರಿಂದ ರಾಜ್ಯ ಸರಕಾರ ಕೇಂದ್ರದ ಯೋಜನೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

ಕಳೆದ ನಾಲ್ಕು ವರ್ಷದಲ್ಲಿ ದ.ಕ.ಜಿಲ್ಲೆಯಲ್ಲಿ 15 ಸಾವಿರ ಕೋ. ರೂ. ಅನುದಾನ ಬಿಡುಗಡೆಯಾಗಿದೆ. ಒಂದು ಲಕ್ಷ ಹದಿನೆಂಟು ಸಾವಿರ ಕೋಟಿ ರೂ. ಮಂಗಳೂರು-ಬೆಂಗಳೂರು-ಚೆನೈಯವರೆಗೆ ಷಟ್ಪಥ ಸೂಪರ್ ರಸ್ತೆಗೆ ಘೋಷಣೆಯಾಗಿದೆ. ಬಿ.ಸಿ. ರೋಡಿನಿಂದ ಗುಂಡ್ಯದವರೆಗೆ ರಸ್ತೆ ವೇಗದಿಂದ ಕೆಲಸ ಆಗುತ್ತಿದೆ. ಶಿರಾಡಿ ಘಾಟಿ ರಸ್ತೆ ಕಾಂಕ್ರೀಟಿರಣ ಆಗಿದ್ದು, ಜುಲೈ 5ರಂದು ಸಂಚಾರಕ್ಕೆ ಮುಕ್ತವಾಗಲಿದೆ. ಮಂಗಳೂರಿನಿಂದ ಕಿನ್ನಿಗೋಳಿ ತನಕದ ರಸ್ತೆಯ ಕಾಂಕ್ರೀಟಿಕರಣಕ್ಕೆ ಸರಕಾರ ಅನುಮೋದನೆ ಕೊಟ್ಟಿದೆ. ಕುಲಶೇಖರದಿಂದ ಕಾರ್ಕಳ ತನಕ ಚತುಷ್ಪಥ ರಸ್ತೆಗೆ ಅಂಕಿತ ಬಿದ್ದಿದೆ. ಮಂಗಳೂರು ರನ್‍ವೇ ವಿಸ್ತರಣೆಗೆ ಒಂದೂವರೆ ಸಾವಿರ ಕೋಟಿ, ವಿಶ್ವದರ್ಜೆಯ ರೈಲು ನಿಲ್ದಾಣದ ಅಭಿವೃದ್ದಿಗೆ, ಐದು ಸಾವಿರ ಮಂದಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸಾವಿರ ಎಕರೆಯಲ್ಲಿ ಪ್ಲಾಸ್ಟಿಕ್ ಪಾರ್ಕ್, ಕೃಷಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ಕೊಕನೆಟ್ ಪಾರ್ಕ್, ಬಿ.ಸಿ.ರೋಡ್ ನಿಂದ ಮಡಂತ್ಯಾರು ತನಕ, ಮಂಡಂತ್ಯಾರುನಿಂದ ಉಜಿರೆ ತನಕದ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಟೆಂಡರ್ ಆಗಿದ್ದು ಶಿರಾಡಿಯ ಕಾಮಗಾರಿ ಮುಗಿದ ಬಳಿಕ ಬಿ.ಸಿ.ರೋಡ್ ನಿಂದ ಮಡಂತ್ಯಾರು ತನಕದ ಕಾಮಗಾರಿ ಆರಂಭವಾಗಲಿದೆ. ಉಜಿರೆ-ಬೆಳಾಲು-ಕುಪ್ಪೆಟ್ಟಿ ಹಾಗೂ ಕಕ್ಕಿಂಜೆ-ನೆರಿಯ-ಪುದುವೆಟ್ಟು ರಸ್ತೆ ಸಿಆರ್‍ಎಫ್ ಅನುದಾನದಲ್ಲಿ ಬಿಡುಗಡೆ ಆದ ಅನುದಾನಕ್ಕೆ ಟೆಂಡರ್ ಆಗಿದೆ. ಕೆಲಸ ಇನ್ನು ಶುರು ಆಗಲಿದೆ ಎಂದರು.

ಚಾರ್ಮಾಡಿಯಲ್ಲಿ ಭೂ ಕುಸಿತದ ಸಂದರ್ಭ ಹಾಗೂ ಮಳೆಗಾಲದ ಹಾನಿಯ ಸಂದರ್ಭ ಶಾಸಕ ಹರೀಶ್ ಪೂಂಜ ಅವರು ಅತ್ಯುತ್ತಮ ಕಾರ್ಯ ಮಾಡಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಸಿಗುವಲ್ಲಿ ಮುತುವರ್ಜಿಯಿಂದ ಕೆಲಸ ಮಾಡಿದ್ದಾರೆ. ಅವರದ್ದು ಉಳಿದ ಶಾಸಕರಿಗೆ ಮಾದರಿ ಕಾರ್ಯವಾಗಿದೆ ಎಂದರು.

ಮುಂದಿನ ಲೋಕಸಭಾ ಅಭ್ಯರ್ಥಿಯ ಬಗ್ಗೆ ಪಕ್ಷ ನಿರ್ಧರಿಸಲಿದೆ. ತಾಲೂಕಿನ ಪಕ್ಷದ ಜವಾಬ್ದಾರಿಗಳ ಬಗ್ಗೆ ಜಿಲ್ಲೆಯ ನಾಯಕರ ನಿರ್ಧರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪರಿವರ್ತನೆಯ ಹಾದಿ ದೇಶದ ಮಾತ್ರವಲ್ಲ ವಿಶ್ವದ ಗಮನ ಸೆಳೆದಿದೆ ಎಂದ ಅವರು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಸಫಲತೆಯನ್ನು ಮುಂದಿಟ್ಟರು.

See also  ವೇಣೂರು ಮೀಸಲು ಅರಣ್ಯದಿಂದ ಮರ ಕಳವು: ತಡೆಯಲು ಹೋದ ಅರಣ್ಯ ಸಿಬ್ಬಂದಿಗಳ ಮೇಲೆ ಕೊಲೆಯತ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು