News Kannada
Wednesday, October 05 2022

ಕರಾವಳಿ

ಅಕ್ರಮ ಮರುಳುಗಾರಿಕೆಗೆ ಕುಸಿಯಿತೇ ಮುಲ್ಲರಪಟ್ಣ ಸೇತುವೆ… - 1 min read

Photo Credit :

ಅಕ್ರಮ ಮರುಳುಗಾರಿಕೆಗೆ ಕುಸಿಯಿತೇ ಮುಲ್ಲರಪಟ್ಣ ಸೇತುವೆ...

ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬಂಟ್ವಾಳ ಮತ್ತು ಮಂಗಳೂರು ಸಂಪರ್ಕ ದ ಮುಲಾರಪಟ್ನ ಸೇತುವೆ ಮರಿದು ಬಿದ್ದಿರುವುದಕ್ಕೆ ಅಕ್ರಮ ಮರಳುಗಾರಿಕೆಯೇ ಕಾರಣ ಎನ್ನುವ ಆರೋಪ ಸ್ಥಳೀಯರದ್ದು.

ಬಂಟ್ವಾಳ ಹಾಗೂ ಮಂಗಳೂರು ಗಡಿ ಪ್ರದೇಶವಾದ ಮುಲಾರ್ ಪಟ್ನದ ವಿಚಾರದಲ್ಲಿ , ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೂ ಗೊಂದಲ ಇದ್ದದ್ದೇ. ಹೀಗಾಗಿ ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಯನ್ನು ಯಾರು ತಡೆಯಬೇಕು ಎನ್ನುವ ಪ್ರಶ್ನೆಗಳ ನಡುವೆ, ಅಕ್ರಮ ಮರಳುಗಾರಿಕೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆಗೋಮ್ಮೆ ಈಗೊಮ್ಮೆ ಬಂಟ್ವಾಳ ತಹಶೀಲ್ದಾರ್, ಗಣಿ ಇಲಾಖೆ, ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದವರನ್ನು ತಡೆದ ಉದಾಹರಣೆಗೂ ಇವೆ. ಹೀಗಿದ್ದರೂ ಕಳೆದ ಹದಿನೈದು ದಿನಗಳಿಂದ ಇಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸೇತುವೆ ಬಲಿಯಾಗಿದೆ ಎನ್ನುವ ಆರೋಪ ಸ್ಥಳೀಯರದ್ದು.

ಏನಾಯ್ತು..
ಇಲ್ಲಿ ಮರಳುಗಾರಿಕೆ ನಡೆಸುವವರು, ಹಿಟಾಚಿಯಂತಹಾ ಬೃಹತ್ ಯಂತ್ರವನ್ನು ಬಳಸಿ ಸೇತುವೆ ಅಡಿಭಾಗದಿಂದ ಮರಳನ್ನು ಎತ್ತಿ ದೋಣಿಗಳಿಗೆ ತುಂಬಿಸಿ, ಆ ಬಳಿಕ ಲಾರಿಗಳ ಮೂಲಕ ಸಾಗಾಟ ನಡೆಸುತ್ತಿದ್ದರು. ಮೂರು ದಿನದ ಹಿಂದೆ ಈ ಯಂತ್ರ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಒಂದು ಪಿಲ್ಲರ್ ಗೆ ಡಿಕ್ಕಿಯಾಗಿದ್ದೇ, ಸೇತುವೆ ಮುರಿದು ಬೀಳಲು ಕಾರಣ ಎಂದು ಹೇಳಲಾಗಿದೆ. ಘಟನೆ ನಡೆದಾಗ ಪರಿಸರದಲ್ಲಿ ದೊಡ್ಡ ಶಬ್ದವಾಗಿದ್ದು, ಸ್ಥಳೀಯರೆಲ್ಲರೂ ಸೇತುವೆಯ ಬಳಿ ಜಮಾಯಿಸಿ, ಪರಿಶೀಲಿಸಿದ್ದರು. ಆದರೆ ಗಂಭೀರ ಹಾನಿ ಕಂಡು ಭಾರದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದರು.

ಸೋಮವಾರ ಬಿದ್ದೇ ಬಿಟ್ಟಿತು..
ಎರಡು ದಿನಗಳ ಹಿಂದೆ ಹಾನಿಗೀಡಾದ ಸೇತುವೆ, ಫಲ್ಗುಣಿ ನದಿಯಲ್ಲಿ ನೀರಿನ ಹರಿವಿನ ತೀವ್ರತೆಗೆ ನೆಲದಿಂದ ಬೇರ್ಪಟ್ಟಿದ್ದ ಪಿಲ್ಲರ್ ನೀರ ರಭಸಕ್ಕೆ ನೀರುಪಾಲಾಗಿದ್ದು, ಸೇತುವೆ ಬಿದ್ದು ಬಿಟ್ಟಿದೆ. ಸುಮಾರು 50 ವರ್ಷಗಳಷ್ಟು ಹಳೆಯದಾದ ಈ ಸೇತುವೆಯ 177 ಮೀಟರ್ ಉದ್ದವಿದ್ದು, 7.50 ಮೀಟರ್ ಅಗಲವಿದೆ. 20 ಮೀಟರ್ ಅಂತರದಲ್ಲಿ 8 ಪಿಲ್ಲರ್ ಗಳನ್ನು ನಿರ್ಮಿಸಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಇದೀಗ ಸೇತುವೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಕುಪ್ಪೆಪದವು- ಬಂಟ್ವಾಳ ಸಂಪರ್ಕ ಕಡಿತಗೊಂಡಿದೆ.

ಘಟನೆ ನಡೆದದ್ದು ಸಂಜೆ 6.07 ಕ್ಕೆ..
ಸೇತುವೆ ಕುಸಿದು ಬೀಳುವುದಕ್ಕೆ ಮೂರು ನಿಮಿಷಕ್ಕೆ ಮುಂಚಿತವಾಗಿ ಎರಡು ಬಸ್ಸುಗಳು ಇದೇ ಸೇತುವೆಯಲ್ಲಿ ಹಾದು ಹೋಗಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ಬಜಪೆಯಿಂದ ಬಂದ ಸೀಗಲ್ ಬಸ್ ಮುಲರ್ ಪಟ್ನದಲ್ಲಿ ತಿರುಗಿ ಮತ್ತೆ ಕುಕ್ಕಟ್ಟೆ ಮಾರ್ಗವಾಗಿ ಬಜಪೆಗೆ ತೆರಳಿದರೆ, ಕಟೀಲಿನಿಂದ ಬಂದ ಶಾರದಾ ಬಸ್ ಬಿ.ಸಿ.ರೋಡಿಗೆ ತೆರಳಿತ್ತು. ಎರಡೂ ಬಸ್ಸು ಸೇತುವೆಯಲ್ಲಿ ಮುಖಾಮುಖಿಯಾಗಿ ತೆರಳುವುದು ವಾಡಿಕೆ ಅದರಂತೆ ಇಂದು ಸಂಜೆ 6ಗಂಟೆ 4 ನಿಮಿಷಕ್ಕೆ ಎರಡೂ ಬಸ್ಸುಗಳು ಸೇತುವೆಯಲ್ಲಿ ಪರಸ್ಪರ ಮುಖಾಮುಖಿಯಾಗಿ ತಮ್ಮ ತಮ್ಮ ಹಾದಿ ಹಿಡಿದಿದ್ದವು. ಆದರೆ 6.07 ನಿಮಿಷವಾಗುತ್ತಲೇ ಸೇತುವೆ ದೊಪ್ಪೆಂದು ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಎರಡೂ ಬಸ್ಸಿನಲ್ಲಿದ್ದವರು ಪಾರಾಗಿದ್ದಾರೆ.

See also  ಮಾನವೀಯತೆಗೆ ಜಾತಿ, ಧರ್ಮ ಅಡ್ಡಿಯಲ್ಲ ಎಂಬುದಕ್ಕೆ ನಿದರ್ಶನ ಈ ಆಯಿಷುಮ್ಮ..!

ನಮ್ಮನ್ನು ದೇವರೇ ಕಾಪಾಡಿದ್ದು, ಬಸ್ಸಿನಲ್ಲಿ ನಾನು, ಕಂಡೆಕ್ಟರ್ ಎಲ್ಲಾ ಸೇರಿ ಒಟ್ಟು 30 ಮಂದಿ ಇದ್ದೆವು. ಬಸ್ಸು ಸೇತುವೆ ಮೇಲಿಂದ ಹೋಗಿ ಕೆಲ ನಿಮಿಷದಲ್ಲೇ ಸೇತುವೆ ಬಿದ್ದಿದೆ. ದೇವರ ಕರುಣೆಯಿಂದ ನಾವು ಬದುಕುಳಿದಿದ್ದೇವೆ.
ಮೈಕಲ್ ಪಿಂಟೋ ತೆಂಕ ಎಡಪದವು
ಶಾರದಾ ಬಸ್ ಚಾಲಕ

ನಮ್ಮ ಬಸ್ಸಿನಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು, ನಿರ್ವಾಹಕ ಸೇರಿ ನಾಲ್ವರು ಮಾತ್ರ ಇದ್ದೆವು. 6.04ಕ್ಕೆ ಸೇತುವೆ ಮೇಲಿಂದ ಪಯಣಿಸಿದ್ದೇವೆ, 6.07ಕ್ಕೆ ಸೇತುವೆಯೇ ಬಿದ್ದು ಬಿಟ್ಟಿದೆ. ನಮ್ಮನ್ನು ದೇವರೇ ಕಾಪಾಡಿದ್ದು..
ಸತೀಶ್ ಕೈಕಂಬ
ಸೀಗಲ್ ಬಸ್ ಚಾಲಕ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು