ಸುಳ್ಯ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ತೇಜೇಶ್ವರ ಕುಂದಲ್ಪಾಡಿ, ಉಪಾಧ್ಯಕ್ಷರಾಗಿ ಲೋಕೇಶ್ ಗುಡ್ಡೆಮನೆ, ಮುರಳೀಧರ ಅಡ್ಡನಪಾರೆ, ಕಾರ್ಯದಶರ್ಶಿಯಾಗಿ ಹಸೈನಾರ್ ಜಯನಗರ, ಕೋಶಾಧಿಕಾರಿಯಾಗಿ ವಿಶ್ವನಾಥ ಮೋಟುಕಾನ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲೋಕೇಶ್ ಪೆರ್ಲಂಪಾಡಿ, ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ, ಜೆ.ಕೆ.ರೈ, ದುರ್ಗಾಕುಮಾರ್ ನಾಯರ್ಕೆರೆ, ಚಂದ್ರಶೇಖರ ಹೈದಂಗೂರು, ಕೃಷ್ಣಪ್ರಸಾದ್ ಕೋಲ್ಚಾರ್, ಭಾಗೀಶ್.ಕೆ.ಟಿ, ದಿನೇಶ್ ಮಠ, ರಮೇಶ್ ನೀರಬಿದಿರೆ ಆಯ್ಕೆಯಾದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅಧ್ಯಕ್ಷತೆಯಲ್ಲಿ ಪ್ರೆಸ್ ಕ್ಲಬ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಕಾರ್ಯದರ್ಶಿ ಪದ್ಮನಾಭ ಮುಂಡೋಕಜೆ ವರದಿ ವಾಚಿಸಿದರು. ದಯಾನಂದ ಕೊರತ್ತೋಡಿ ಲೆಕ್ಕ ಪತ್ರ ಮಂಡಿಸಿದರು.