ಕಾರವಾರ: ಅನಂತಕುಮಾರ್ ಹೆಗಡೆ ಒಬ್ಬ ಲೋಫರ್ ಎಂಪಿ ಎಂದು ಹೇಳುವ ಮೂಲಕ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಒಬ್ಬ ಕೆಟ್ಟ ವ್ಯಕ್ತಿಯಾಗಿದ್ದು ಅವರು ವಿಶ್ವೇಶ್ವರ ಹೆಗಡೆ ಕಾಗೇರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಡಾಕ್ಟರಿಗೆ ಹೊಡೆದಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ ಕಾರ್ಯಕರ್ತರ ಮೇಲೂ ಕೈ ಮಾಡಿದ್ದಾನೆ ಎಂದು ಆರೋಪಿಸಿದರು.
‘ಇಂತಹ ಕೆಟ್ಟ ವ್ಯಕ್ತಿಯ ಬಗ್ಗೆ ಮಾತನಾಡಬಾರದು. ಕಳೆದ ಐದು ಬಾರಿ ಎಂಪಿಯಾಗಿ ಆಯ್ಕೆಯಾಗಿದ್ದಾನೆ ಆದರೆ ಯಾವುದೇ ಅಭಿವೃದ್ಧಿಯಾಗಿಲ್ಲ. ಈ ಬಾರಿ ಅಮಿತ್ ಷಾ ಅನಂತಗೆ ಮಂತ್ರಿ ಮಾಡಿದ್ದಾರೆ. ದೇಶದ ಎಲ್ಲ ಮುಸ್ಲಿಮರನ್ನು ಹೊರಗೆ ಹಾಕಿ ಎಂದು ಹೇಳುವ ಈ ಮಂತ್ರಿ ಕೆಟ್ಟ ಸಂಸ್ಕೃತಿ ಹೊಂದಿರುವ ವ್ಯಕ್ತಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ದೇಶದ ಸಂವಿಧಾನ ಬದಲಾಯಿಸುತ್ತೇನೆ ಎಂದು ಹೇಳಿಕೆ ನೀಡಿರುವ ಇವರಿಗೆ ಮುಂದಿನ ದಿನದಲ್ಲಿ ಸಂಸದನಾಗುವ ಅರ್ಹತೆ ಇಲ್ಲ ಎಂದರು.