ಕಾಸರಗೋಡು: ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಇನ್ನೊಂದು ಬೈಕ್ ನಲ್ಲಿ ಬಂದ ತಂಡ ಮುಖಕ್ಕೆ ಮೆಣಸಿನ ಹುಡಿ ಎರಚಿ ಚಿನ್ನಾಭರಣ ಮತ್ತು ನಗದನ್ನು ದರೋಡೆ ಮಾಡಿದ ಘಟನೆ ಸೋಮವಾರ ಸಂಜೆ ಬಾಡೂರು ಬಳಿ ನಡೆದಿದೆ.
ಯುವಕನ ಬಳಿ ಇದ್ದ ೧೫ ಪವನ್ ಚಿನ್ನಾಭರಣ ಮತ್ತು ೯೦ ಸಾವಿರ ರೂ. . ನಗದನ್ನು ದೋಚಲಾಗಿದೆ. ಮೊಗ್ರಾಲ್ ನಿವಾಸಿಯಾಗಿರುವ ಸುಹೈಲ್ (೨೮) ರವರು ಪೆರ್ಲದಲ್ಲಿರುವ ಸಹೋದರಿ ಮನೆಗೆ ಚಿನ್ನಾಭರಣ ಮತ್ತು ನಗದು ಸಹಿತ ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿಂಬಾಲಿಸಿ ಕೊಂಡು ಬಂದ ತಂಡ ಮೆಣಸಿನ ಹುಡಿ ಮುಖಕ್ಕೆ ಎರಚಿದ್ದು , ಬಳಿಕ ಚಿನ್ನಾಭರಣ ದೋಚಿದ್ದಾರೆ.
ಯುವಕನನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬದಿಯಡ್ಕ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ತಲಪಿ ಮಾಹಿತಿ ಕಲೆ ಹಾಕಿದ್ದು , ತನಿಖೆ ನಡೆಸುತ್ತಿದ್ದಾರೆ