ಉಪ್ಪಿನಂಗಡಿ: ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟಕ್ಕೆ ನೊಂದ ವೃದ್ಧ ದಂಪತಿ ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ಸೋಮವಾರ ಉಪ್ಪಿನಂಗಡಿಯಲ್ಲಿ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮದ ಸಂಜೀವ ಪೂಜಾರಿ(60) ಹಾಗೂ ಪತ್ನಿ ಸೀತಾ(57) ಎಂದು ಗುರುತಿಸಲಾಗಿದೆ.
ಅನಾರೋಗ್ಯದ ಹಿನ್ನೆಲೆ ಮೃತ ಸಂಜೀವ ಅವರಿಗೆ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈ ದಂಪತಿಗೆ ಕೂಲಿಯೇ ಜೀವನವಾಗಿತ್ತು. ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯಕ್ಕೆ ನೊಂದ ದಂಪತಿ ಸೋಮವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ದಂಪತಿಗೆ ಮೂರು ಮಕ್ಕಳಿದ್ದು ಇಬ್ಬರು ಹೆಣ್ಣು ಹಾಗೂ ಒಬ್ಬ ಮಗ ಇದ್ದಾನೆ. ಈ ದಂಪತಿ ಜತೆ ಮಗ ಜನಾರ್ದನ ಪೂಜಾರಿ ವಾಸವಾಗಿದ್ದ.
ಸೋಮವಾರ ಮಧ್ಯಾಹ್ನ ದಂಪತಿ ಕೋಣೆಯೊಳಗೆ ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಸೊಸೆ ಮೋಹಿನಿ( ಮಗ ಜನಾರ್ಧನ) ಪತ್ನಿಗೆ ಕೋಣೆಯಿಂದ ಕೂಗಾಡುವ ಸದ್ದು ಕೇಳಿದೆ. ಕೂಡಲೇ ಸಹಾಯಕ್ಕೆ ಹೋದರು ಕೋಣೆಯ ಒಳಗೆ ದಂಪತಿ ಬಾಗಿಲು ಲಾಕ್ ಮಾಡಿ ವಿಷ ಸೇವಿಸಿದ್ದಾರೆ.
ಆಕೆ ಕೂಡಲೇ ನೆರೆಹೊರೆಯವರ ಸಹಾಯಕ್ಕೆ ಕೂಗಾಡಿದ್ದಾರೆ. ಸಹಾಯಕ್ಕೆ ಬಂದ ಜನರು ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದರು ಸಂಜೀವ ಅವರು ಆಗಾಗಲೇ ಕೊನೆಯುಸಿರೆಳೆದಿದ್ದರು. ಇನ್ನೂ ಗಮಭೀರ ಸ್ಥಿತಿಯಲ್ಲಿದ್ದ ಸೀತ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ಗದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಎಸ್ ಐ ನಂದಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.