ಉಡುಪಿ: ತನಗೆ ಯೌವನದಲ್ಲಿ ಸ್ತ್ರಿಸಂಗವಿದ್ದ ಪರಿಣಾಮ ಹುಟ್ಟಿದ ಮಗಳು ಪದ್ಮಾ ಎಂಬಾಕೆ ಚೆನ್ನೈನಲ್ಲಿ ಇದ್ದಾಳೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದು ಸಾಬೀತಾದರೆ ಪೀಠತ್ಯಾಗ ಮಾಡುವುದಾಗಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಬಗ್ಗೆ ಆಡಿಯೋವೊಂದು ಹರಿದಾಡುತ್ತಿದೆ. ಆದರೆ ಇದಕ್ಕೆ ಯಾವ ವಿಚಾರಣೆ ಅಥವಾ ಪರೀಕ್ಷೆಗೂ ನಾನು ಸಿದ್ಧನಿದ್ದೇನೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಹಿಂದಿನ ಯಾವುದೇ ಶ್ರೀಗಳು ಪೀಠ ತ್ಯಾಗ ಮಾಡಿರುವುದರಲ್ಲಿ ನನ್ನ ಕೈವಾಡವಿಲ್ಲ. ಅವರನ್ನು ಉಳಿಸುವ ಪ್ರಯತ್ನ ಮಾಡಿದ್ದೇನೆ. ಅವರು ಸ್ವಇಚ್ಛೆಯಿಂದ ಪೀಠತ್ಯಾಗ ಮಾಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ.