ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸಾವಿನ ಬಳಿಕ ತೆರವಾಗಿರುವ ಶಿರೂರು ಮಠದ ಹೊಣೆಗಾರಿಕೆಯನ್ನು ನೋಡಿಕೊಳ್ಳಲು ತಾತ್ಕಾಲಿಕ ಉಸ್ತುವಾರಿಯೊಬ್ಬರನ್ನು ನೇಮಿಸಲಾಗಿದೆ. ತಾತ್ಕಾಲಿಕ ಉಸ್ತುವಾರಿಯಾಗಿ ಶಿರೂರು ಮಠದ ಮಾಜಿ ಸಿಬ್ಬಂದಿಯಾದ ಸುಬ್ರಮಣ್ಯ ಭಟ್ ಅವರನ್ನು ಸೋದೆ ಮಠದ ವಿಶ್ವವಲ್ಲಭ ತೀರ್ಥರು ಸುಬ್ರಮಣ್ಯ ಭಟ್ ನೇಮಿಸಿದ್ದಾರೆ.
ಇವರು ಶಿರೂರು ಮಠದ ಜವಾಬ್ದಾರಿಯಾದ ಆಸ್ತಿ, ಚಿನ್ನಾಭರಣಗಳ ರಕ್ಷಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ. ಇಗೀಗ ಶಿರೂರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠವು ಪೊಲೀಸರು ವಶದಲಿದ್ದು, ತನಿಖೆ ನಡೆಯುತ್ತಿದೆ.
ಕೇಮಾರು ಸ್ವಾಮೀಜಿಗೆ ಬೆದರಿಕೆ- ನಿಂದನೆ: ಇನ್ನೂ ಶಿರೂರು ಶ್ರೀಗಳ ಅಸಹಜ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಒತ್ತಾಯ ಮಾಡಿದ ಕೇಮಾರು ಸಾಂದೀಪಿನಿ ಮಠದ ಈಶ ವಿಠಲದಾಸ ಸ್ವಾಮೀಜಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಬರಹಗಳನ್ನು ಪ್ರಕಟಿಸಿ ಬೆದರಿಕೆಯನ್ನು ಹಾಕಲಾಗಿದೆ.
ಈ ಕುರಿತು ಪೊಲೀಸರಿಗೆ ವಿಚಾರ ತಿಳಿಸಿದ ಕೇಮಾರು ಸ್ವಾಮೀಜಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ನಿಂದನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.