ಮಂಗಳೂರು: ಶಿಕ್ಷಕಿಯರು ತಮ್ಮ ವೃತ್ತಿಯಲ್ಲಿ ಬದ್ದತೆ ಹಾಗೂ ವಿಶೇಷ ಪರಿಶ್ರಮವನ್ನು ವಹಿಸಲು ಅವರಿಗೆ ಸ್ಪೂರ್ತಿಯನ್ನು ನೀಡುವ ಸಲುವಾಗಿ ಪ್ರೆಸ್ಟೀಜ್ ವಿದ್ಯಾಸಂಸ್ಥೆಯು ಶಿಕ್ಷಕ-ಶಿಕ್ಷಕಿಯರಿಗೆ ಅವರ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಿದೆ.
ಈ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಮಕ್ಕಳ ಮತ್ತು ಹಿರಿಯ ನಾಗರಿಕರ ಖಾತೆ ಸಚಿವೆ ಜಯಮಾಲರವರು ಪ್ರೆಸ್ಟೀಜ್ ಶಾಲೆಗೆ ಆಗಮಿಸಿ ಸಂಸ್ಥೆಯ ಇಬ್ಬರು ಶಿಕ್ಷಕಿಯರನ್ನು ತಮ್ಮ ವಿಶಿಷ್ಟ ಸಾಧನೆಗೆ ಸನ್ಮಾನಿಸಿದರು. ಈ ಸನ್ಮಾನ ಸಮಾರಂಭದಲ್ಲಿ ಜಯಮಾಲಾರವರ ಪುತ್ರಿ ನಟಿ ಸೌಂದರ್ಯ ಅವರ ಉಪಸ್ಥಿತಿ ತಾರಮೆರಗನ್ನು ನೀಡಿತು.
ಶಾಲಾ ಶಿಕ್ಷಕಿಯರಾದ ಶ್ರೀಮತಿ ರೇವತಿ ತಿಮ್ಮಯ್ಯರವರನ್ನು ಅವರ ಹಲವು ವರ್ಷಗಳ ಸುಧೀರ್ಘ ಸೇವೆಗಾಗಿ ಹಾಗೂ ಶ್ರೀಮತಿ ಸುಜಯಲಕ್ಷ್ಮಿಯವರನ್ನು ಒಂದು ದಿನವು ರಜೆ ಹಾಕದೆ ನೀಡಿದ ನಿರಂತರ ಸೇವೆಗಾಗಿ ಅಭೂತಪೂರ್ವವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹೈದರ್ ಅಲಿ, ವ್ಯವಸ್ಥಾಪಕ ನಿರ್ದೇಶಕಿ ರೇಷ್ಮ ಹೈದರ್ ,ವ್ಯವಸ್ಥಾಪಕ ಟ್ರಸ್ಟಿ ಸೈಯದ್ ಫೈಸಲ್, ಶಾಲಾ ಪ್ರಾಂಶುಪಾಲೆ ಫರೋಜ ಫಯಾಜ್, ಉಪಪ್ರಂಶುಪಾಲೆ ಜನಕನಂದಿನಿ ಶಾಲಾ ಕೌನ್ಸೆಲರ್ ಡಾ. ರುಕ್ಸಾನ ಹಸನ್, ಶಾಲೆಯ ವಿವಿಧ ವಿಬಾಗದ ಸಹಯೋಜಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸನ್ಮಾನ ಕಾರ್ಯಕ್ರಮವು ಇತರ ಶಿಕ್ಷಕ ವೃಂದಕ್ಕೆ ಸ್ಪೂತರ್ತಿದಾಯಕವಾಗಿದೆ.