ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ ಐವರು ಮೀನುಗಾರರನ್ನು ಇಬ್ಬರು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ನಡೆದಿದೆ.
ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಕೃಷ್ಣರಾಮ ಬಾಣವಾಳೇಕರ್ ಎನ್ನುವವರಿಗೆ ಸೇರಿದ ಐವರು ಮೀನುಗಾರರಿದ್ದ ರಾಮೇಶ್ವರ ಎಂಬ ಹೆಸರಿನ ಬೋಟ್ ಅಲೆಗಳ ರಭಸಕ್ಕೆ ಸಿಲುಕಿ ಬೆಳಂಬರ ಗ್ರಾಮದ ಬಳಿಯ ಸಮುದ್ರದಲ್ಲಿ ಮುಳುಗಡೆಯಾಗುತ್ತಿತ್ತು. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಹಾರವಾಡದ ಶಾಂತದುರ್ಗಾ ಎಂಬ ಇನ್ನೊಂದು ಬೋಟಿನ ತುಕಾರಾಮ ವಿಠ್ಠಲ ಖಾರ್ವಿ ಮತ್ತು ಸಂತೋಷ ಧಾಕು ಖಾರ್ವಿ ಅಪಾಯದಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ್ದಾರೆ.
ಕರಾವಳಿ ಕಾವಲುಪಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.