News Kannada
Friday, December 02 2022

ಕರಾವಳಿ

ಕಾಸರಗೋಡಿನಲ್ಲಿ ಸಿಪಿಎಂ ಕಾರ್ಯಕರ್ತನ್ನು ಕೊಚ್ಚಿ ಕೊಲೆ

Photo Credit :

ಕಾಸರಗೋಡಿನಲ್ಲಿ ಸಿಪಿಎಂ ಕಾರ್ಯಕರ್ತನ್ನು ಕೊಚ್ಚಿ ಕೊಲೆ

ಕಾಸರಗೋಡು: ಬೈಕ್ ಗಳಲ್ಲಿ ಬಂದ ನಾಲ್ವರ ತಂಡವು ಸಿಪಿಎಂ ಕಾರ್ಯಕರ್ತನನ್ನು ಕೊಚ್ಚಿ ಕೊಲೆಗೈದ ದಾರುಣ ಘಟನೆ ಆದಿತ್ಯವಾರ ತಡರಾತ್ರಿ ಉಪ್ಪಳ ಸೋಂಕಾಲ್ ಎಂಬಲ್ಲಿ ನಡೆದಿದೆ. ಕೃತ್ಯವನ್ನು ಖಂಡಿಸಿ ಇಂದು ಮಧ್ಯಾಹ್ನ ಒಂದು ಗಂಟೆ ಯಿಂದ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಹರತಾಳ ಕ್ಕೆ ಸಿಪಿಎಂ ಜಿಲ್ಲಾ ಸಮಿತಿ ಕರೆ ನೀಡಿದೆ.

ಕೊಲೆಗಿಡವರನ್ನು ಸೋಂಕಾಲ್ ನ ಅಬೂಬಕ್ಕರ್ ಸಿದ್ದಿಕ್ ( ೨೧) ಎಂದು ಗುರುತಿಸಲಾಗಿದೆ. ಬೈಕ್ ಗಳಲ್ಲಿ ಬಂದ ನಾಲ್ವರು ಈ ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಬೊಬ್ಬೆ ಕೇಳಿ ದಾವಿಸಿ ಬಂದ ನಾಗರಿಕರು ರಕ್ತದ ಮಡುವಿ ನಲ್ಲಿ ಬಿದ್ದಿದ್ದ ಸಿದ್ದಿಕ್ ನನ್ನು ಮಂಗಳೂರು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಕೃತ್ಯದ ಬಳಿಕ ಹಂತಕರು ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಖತ್ತರ್ ನಲ್ಲಿ ಉದ್ಯೋಗದಲ್ಲಿದ್ದ ಸಿದ್ದಿಕ್ ಕೆಲ ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು.

ಘಟನೆ ಸುದ್ದಿ ತಿಳಿದು ಕಾಸರಗೋಡು ಡಿ ವೈ ಎಸ್ ಪಿ ವಿ . ಸುಕುಮಾರನ್ , ಕುಂಬಳೆ ಠಾಣಾ ಸಬ್ ಇನ್ಸ್ ಪೆಕ್ಟರ್ ಪ್ರೇಮ್ ಸದನ್ಮಂ ಹಾಗೂ ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿದ್ದು , ಪರಿಸರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ

See also  ರೋಟರಿ ಪುತ್ತೂರು ಎಲೈಟ್ ನಿಂದ `ಕೇಳಿ ಮಕ್ಕಳೇ’ ಜಾಗೃತಿ ವಿಡಿಯೋ ಅರ್ಪಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು