ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿದ ಅನಿಲ ಟ್ಯಾ೦ಕರ್ ರಸ್ತೆ ಬದಿ ಪಲ್ಟಿಯಾದ ಘಟನೆ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಹನುಮಾನ್ ದೇವಸ್ಥಾನ ಬಳಿ ನಡೆದಿದೆ. ಅನಿಲ ಸೋರಿಕೆ ಉಂಟಾಗದಿರುವುದರಿಂದ ಭಾರೀ ದುರಂತ ತಪ್ಪಿದೆ.
ಹೊಂಡವನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿದ ಟ್ಯಾ೦ಕರ್ ರಸ್ತೆ ಬದಿ ಉರುಳಿ ಬಿದ್ದಿದೆ. ಉಪ್ಪಳ ದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಟ್ಯಾ೦ಕರ್ ನ್ನು ಪರಿಶೀಲಿಸಿ ಸೋರಿಕೆ ಇಲ್ಲ ಎಂಬುದನ್ನು ಖಚಿತಪಡಿಸಿದರು. ಅಗ್ನಿಶಾಮಕ ದಳದ ಸಿಬಂದಿ ಮುಂದಿನ ಕ್ರಮ ತೆಗೆದುಕೊಂಡಿದ್ದು , ಮಂಗಳೂರಿನಿಂದ ಅನಿಲ ಕಂಪೆನಿ ಅಧಿಕಾರಿಗಳು ಸ್ಥಳಕ್ಕೆ ತಲಪಿದ ಬಳಿಕ ಟ್ಯಾ೦ಕರ್ ತೆರವುಗೊಳಿಸುವ ಬಗ್ಗೆ ತೀರ್ಮಾನ ತೆಗೆದುಕೊ ಳ್ಳಲಿದೆ.
ಮಂಗಳೂರಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಟ್ಯಾ೦ಕರ್ ಹೊಂಡ ತಪ್ಪಿಸಲೆತ್ನಿಸಿದಾಗ ಈ ದುರ್ಘಟನೆ ನಡೆದಿದೆ .