ಕಾಸರಗೋಡು: ಉಪ್ಪಳ ಸೋಂಕಾಲ್ ನ ಸಿಪಿಎಂ ಕಾರ್ಯಕರ್ತ ಅಬೂಬಕ್ಕರ್ ಸಿದ್ದಿಕ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಇಬ್ಬರು ಆರೋಪಿಗಳನ್ನು ಇಂದು ಮಧ್ಯಾಹ್ನ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪ ಡಿಸಲಾಗಿದ್ದು. ಎರಡು ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೋಂಕಾಲು ಪ್ರತಾಪ ನಗರದ ಅಶ್ವಿತ್ ಯಾನೆ ಅಚ್ಚು (೨೮), ಐಲ ಮೈದಾನ ಬಳಿಯ ಕಾರ್ತಿಕ್ (೨೭) ಎಂದು ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದಲ್ಲಿ ಶಾಮೀಲಾದ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಇವರಿಗಾಗಿ ತನಿಖಾ ತಂಡ ತನಿಖೆ ನಡೆಸುತ್ತಿದೆ .
ಆದಿತ್ಯವಾರ ರಾತ್ರಿ ಬೈಕ್ ಗಳಲ್ಲಿ ಬಂದ ತಂಡವು ಅಬೂಬಕ್ಕರ್ ಸಿದ್ದಿಕ್ ನ್ನು ಕೊಲೆಗೈದು ಪರಾರಿಯಾಗಿತ್ತು ಕೃತ್ಯಕ್ಕೆ ಬಳಸಿದ್ದ ಚೂರಿಯನ್ನು ಘಟನಾ ಸ್ಥಳದಿಂದ ಅಲ್ಪ ದೂರದ ಪೊದೆಯಿಂದ ಪತ್ತೆಹಚ್ಚಲಾಗಿದೆ. ಬಹಿರಂಗ ಮದ್ಯಪಾನ ಪ್ರಶ್ನಿಸಿದ್ದೇ ಕೃತ್ಯಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಕಾರ್ತಿಕ್ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸಂಘ ಪರಿವಾರ ಕಾರ್ಯಕರ್ತರಾಗಿರುವುದರಿಂದ ರಾಜಕೀಯ ದ್ವೇಷದ ಬಗ್ಗೆ ಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಂತಕರಿಬ್ಬರನ್ನು ಸೋಂಕಾಲು ಪರಿಸರದಿಂದಲೇ ಬಂಧಿಸಲಾಯಿತು. ಘಟನಾ ಸ್ಥಳದಿಂದ ಎರಡು ಬೈಕ್ ಗಳನ್ನು ತೊರೆದು ಹೋಗಿದ್ದು , ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಘಟನಾ ಸ್ಥಳಕ್ಕೆ ತಂದು ತನಿಖಾ ತಂಡ ಮಾಹಿತಿ ಕಲೆಹಾಕಿದೆ. ಡಿ ವೈ ಎಸ್ ಪಿ ವಿ. ಸುಕುಮಾರನ್ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ.