ಉಡುಪಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾಧಿಕಾರಿಗಳ ತಂಡ(ಎಸ್ ಐಟಿ) ಗುರುವಾರ ಬೆಳಗ್ಗೆ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರನ್ನು ಪಡುಬಿದ್ರೆಯ ಸಂದೇಶ್ ಶೆಟ್ಟಿ ಪಾದಬೆಟ್ಟು ಹಾಗೂ ಯುವರಾಜ್ ಕಂಚಿನಡ್ಕ ಎಂದು ಗುರುತಿಸಲಾಗಿದೆ.
ಇವರಿಬ್ಬರನ್ನು ಎಸ್ ಐಟಿ ತಂಡವು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿದೆ ಎಂದು ಉಡುಪಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್ ಐಟಿ ಈಗಾಗಲೇ ಮಡಿಕೇರಿ, ಸುಳ್ಯ ಸಹಿತ ಹಲವಾರು ಕಡೆಗಳಲ್ಲಿ ಶಂಕಿತರನ್ನು ಬಂಧಿಸಿದೆ.