News Kannada
Friday, December 09 2022

ಕರಾವಳಿ

ಹಲವು ವರ್ಷಗಳ ಬಳಿಕ ಒಂದಾದ ಹಳೆ ವಿದ್ಯಾರ್ಥಿಗಳು

Photo Credit :

ಹಲವು ವರ್ಷಗಳ ಬಳಿಕ ಒಂದಾದ ಹಳೆ ವಿದ್ಯಾರ್ಥಿಗಳು

ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು, ಸಂಶೋಧನ ಮತ್ತು ಸ್ನಾತ್ತಕೋತ್ತರ ಆಡಳಿತ್ತೋದ್ಯಮ ಕೇ೦ದ್ರ ಮಂಗಳೂರಿನಲ್ಲಿ ‘ಹಳೆ ವಿದ್ಯಾರ್ಥಿಗಳ ಮಿಲನ’ ಕಾರ್ಯಕ್ರಮ ನಡೆಯಿತು. ಎಂ.ಬಿ.ಎ. ವಿಭಾಗದ ಮಾಜಿ ನಿರ್ದೇಶಕರಾದ ಡಾ.ದೇವರಾಜ್ ಕೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ದೇಶವಿದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ನಡೆದ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿ ಮಾಜಿ ನಿರ್ದೇಶಕರಾದ ಡಾ.ದೇವರಾಜ್ ಕೆ. ಹಳೆ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸಕಾರಾತ್ಮಕ ಚಿಂತನೆಯೊಂದಿಗೆ ಎದುರಿಸಿ ಯಶಸ್ವಿಯಾಗಬೇಕು ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಎದುರಿಸಿ ಎಂದು ಕರೆ ನೀಡಿದರು.

ಪ್ರಸ್ತುತ ನಿರ್ದೇಶಕರಾದ ಡಾ.ಸೀಮಾ ಎಸ್. ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀಯುತ ಡಾನ್ ಪ್ರಕಾಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿನಿ ಕುಮಾರಿ ವಿಶಾಖ ಕಾರ್ಯಕ್ರಮ ನಿರೂಪಿಸಿದರು.

 

See also  ಪುತ್ತೂರು ತಹಶೀಲ್ದಾರ್ ಎಸಿಬಿ ಬಲೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು